ಕನ್ನಡಕ್ಕೆ ಸಾವಿಲ್ಲ ಸವಾಲುಗಳಿವೆ: ಡಾ.ಬರಗೂರು ರಾಮಚಂದ್ರಪ್ಪ

ಲೋಕದರ್ಶನ ವರದಿ

ಬೆಳಗಾವಿ,6:  ಜನಭಾಷೆ ಆಳಲು ಬಂದವರನ್ನು ಅರಗಿಸಿಕೊಳ್ಳುವ ಗುಣ ಇರಬೇಕು. ಜಾಗತೀಕರಣ ಸಂದರ್ಭದಲ್ಲಿ ಮಾನವೀಕ ವಿಜ್ಞಾನದ ಶಾಖೆಗಳು ಮತ್ತು ಸಾಹಿತ್ಯದಂತಹ  ವಿಷಯಗಳಿಗೆ ಅನೇಕ ಸವಾಲುಗಳನ್ನು ತಂದೊಡ್ಡಿವೆ. ಕನ್ನಡ ಕುರಿತು ಈ ಚಿಂತನೆ ಅಗತ್ಯವಿದೆ ಒಂದು ಕನ್ನಡಕ್ಕೆ ಸಾವಿಲ್ಲ ಸವಾಲುಗಳಿವೆ ಎಂದು ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು. 

ನಗರದ ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಗುರುವಾರ 6 ರಂದು ಕನ್ನಡ ಅಧ್ಯಾಪಕ ಪರಿಷತ್ತು ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ, ಕನ್ನಡಪರ ಚಿಂತನೆ, ಹೊಸ ಸಾದ್ಯತೆಗಳು ಕಾರ್ಯಕ್ರಮದ ಕುರಿತು ಮಾತನಾಡಿದ ಅವರು.

ಇಂದಿನ ಸಂದರ್ಭದಲ್ಲಿ ಮಾರುಕಟ್ಟೆಗಳು ಹೆಚ್ಚಾಗಿವೆ, ಮೌಲ್ಯ ಕಟ್ಟೆಗಳು ಕಡಿಮೆಯಾಗಿವೆ. ಇಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವರಿಲ್ಲ, ಕೊಂಡು

ಕೊಳ್ಳುವರಿದ್ದಾರೆ.

ಜಗತ್ತಿನಲ್ಲಿ ಅಸ್ತಿತ್ಚದಲ್ಲಿರುವ ಕಂದಕಗಳನ್ನು ನಿವಾರಿಸಬೇಕು. ಕನ್ನಡ ಸಾಹಿತ್ಯಕ್ಕೆ ಮನುಷ್ಯನಾಗಿ ರೂಪಿಸುವ ಶಕ್ತಿ ಇದೆ. ಆದ್ದರಿಂದ ಐಚ್ಚಿಕ ವಿಷಯಗಳನ್ನು ಪುನರದ ಸಂಯೋಜಿಸವುವ ಕೆಲಸ ಆಗಬೇಕಾಗಿದೆ 

ಎಂದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಡಾ.ವ್ಹಿ ಎಸ್ ಮಾಳಿ ಮಾತನಾಡಿ, ಡಾ.ಬರಗೂರು ಅವರು ಕನ್ನಡದ ಕುಲಪತಿಗಳು, ಕನ್ನಡ ಕಟ್ಟುವ ಕೆಲಸ ನಿರಂತರವಾಗಲಿ ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಾಪಕ ಪರಿಷತ್ತ ಪರ ಬರಗೂರು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ. ವೈ.ಬಿ ಹಿಮ್ಮಡಿ ಸ್ವಾಗತಿದರು, ಡಾ.ರಂಗರಾಜ ನವದುರ್ಗಡಾ.ಅಚಲಾ ದೇಸಾಯಿ, ಡಾ. ಎಚ್ ತಿಮ್ಮಾಪೂರ  ಹಾಗೂ ಉಪಸ್ಥಿತರಿದ್ದರು. ಡಾ. ಸುರೇಶ ಹನಗಂಡಿ ನಿರೂಪಸಿದರು. , ಡಾ.ಡಿ ಎಸ್. ಚೌಗಲೆ ವಂದಿಸಿದರು.