ವಿವಿಧೆಡೆ ವಾಹನಗಳ ಕಳುವು: ವಾಹನಗಳ ಸಮೇತ ನಾಲ್ವರ ಬಂಧನ
ಮಹಾಲಿಂಗಪುರ 01: ವಿವಿಧೆಡೆ ವಾಹನಗಳನ್ನು ಕಳೆದುಕ್ಕೊಂಡ ಮಾಲಿಕರು ನೀಡಿದ ದೂರಿನ ಅನ್ವಯ ಸ್ಥಳೀಯ ಪೋಲೀಸ್ ಇಲಾಖೆ ಹೆಚ್ಚಿನ ತನಿಖೆ ನಡೆಸಿ ಕೆಲವು ವಾಹನಗಳ ಸಮೇತವಾಗಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಮಖಂಡಿ ವಿಭಾಗ ಡಿವಾಯ್‌ಎಸ್ಪಿ ಶಾಂತವೀರ ಈ. ಪತ್ರಿಕೆಗೆ ವಿಷಯ ತಿಳಿಸಿದ್ದಾರೆ.
ಜನವರಿ 27ರಂದು ಮಧ್ಯಾಹ್ನ ತಮ್ಮ ಸ್ವಂತ ಮಾಲ್ಕಿಯ ನಾಲ್ಕು ಲಕ್ಷ ತೊಂಬತ್ತು ಸಾವಿರ ಕಿಮ್ಮತ್ತಿನ (ಜಾನ್ ದೀರ ಕಂಪನಿ) ಕೆಎ -56, ಟಿ- 2282 ಸಂಖ್ಯೆಯುಳ್ಳ ಟ್ಯ್ರಾಕ್ಟರ್ ಮತ್ತು ಕೆಎ - 49, ಟಿಎ - 6744 ಹಾಗೂ ಕೆಎ -49, ಟಿಎ- 6745 ಕ್ರಮ ಸಂಖ್ಯೆಗಳ ನಾಲ್ಕು ಗಾಲಿಯ ಟ್ರೈಲರ್ ಗಳನ್ನು ಸೈದಾಪುರ ಕಬ್ಬು ಬೆಳೆಗಾರರ ಸಮುದಾಯ ಭವನದ ಹತ್ತಿರ ನಿಲ್ಲಿಸಿದ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಕಳುವು ಆದ ಬಗ್ಗೆ ಮೂಡಲಗಿ ಪಟ್ಟಣದ ಬಾಪುಸಾಬ ಮಕ್ತುಮಸಾಬ. ಜಾತಗಾರ ಮಹಾಲಿಂಗಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಜಾಡು ಬೆನ್ನು ಹತ್ತಿದ ಪೋಲಿಸ್ ಇಲಾಖೆ ಜನವರಿ 29ರಂದು ಕಳುವಾದ ಸದರಿ ಟ್ರ್ಯಾಕ್ಟರ್ ಮತ್ತು ಟ್ರೈಲರ್ ಗಳನ್ನು ವಶಕ್ಕೆ ಪಡೆದುಕ್ಕೊಂಡಿದ್ದು, ಕದ್ದ ಆರೋಪಿಗಳು ಮತ್ತು ಸ್ಥಳದ ಬಗ್ಗೆ ಪ್ರೆಸ್ ನೋಟ್ ನಲ್ಲಿ ಉಲ್ಲೇಖವಿಲ್ಲ.
ಈ ಹಿಂದೆ ಫೆಬ್ರುವರಿ 2ರಂದು ಹಳ್ಳೂರ ಗ್ರಾಮದ ರಾಜು ಶ್ರೀಶೈಲ ಮೇಲಪ್ಪಗೋಳ ತಮ್ಮ ಸ್ವಂತ ಮಾಲ್ಕಿಯ 10 ಸಾವಿರ ಕಿಮ್ಮತ್ತಿನ ಹೀರೋ ಸ್ಪ್ಲೆಂಡರ್ ವಾಹನ ಮಹಾಲಿಂಗಪುರ ಅರಿಷಿಣಗೋಡಿ ದವಾಖಾನೆ ಮುಂದೆ ಕಳೆದುಕೊಂಡದ್ದು ಸೇರಿ ಒಟ್ಟು ನಾಲ್ಕು ಮೋಟಾರ್ ಸೈಕಲ್ ಗಳನ್ನು ವಷಪಡಿಸಿಕ್ಕೊಂಡ ಪ್ರಕರಣ ಮತ್ತು ಆರೋಪಿಗಳ ದಸ್ತಗಿರಿ ಮಾಡಿದ ಆರೋಪಿಗಳ ಕುರಿತು ಉದಯಕಾಲ ದಿನ ಪತ್ರಿಕೆ ಫೆಬ್ರುವರಿ 16ರಂದು ಸುದ್ದಿ ಪ್ರಕಟ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಫೆಬ್ರುವರಿ 19ರಂದು ಚಿಮ್ಮಡ ಗ್ರಾಮದ ಯಲ್ಲಪ್ಪ ಮಹಾಲಿಂಗಪ್ಪ ಗೋವಿಂದಗೋಳ ಇವರ 50 ಸಾವಿರ ಕಿಮ್ಮತ್ತಿನ ಕೆಎ-48 ಇಬಿ-149, ಹೀರೋ ಸ್ಪ್ಲೆಂಡರ್ ಶುಭಂ ಬಾರ ಮುಂದೆ ಕಳೆದುಕೊಂಡ ಮತ್ತೊಂದು ಪ್ರಕರಣ ದಾಖಲಾಗಿ, ಪೋಲೀಸ್ ಇಲಾಖೆ ಹೆಚ್ಚಿನ ತನಿಖೆ ನಡೆಸಿ ಫೆಬ್ರುವರಿ 20 ರಂದು ಮತ್ತೋರ್ವ ಆರೋಪಿ ಕೌಜಲಗಿಯ ಮಲ್ಲಪ್ಪ ಯಲ್ಲಪ್ಪ ಬಜಂತ್ರಿಯನ್ನು ದಸ್ತಗಿರಿ ಮಾಡಿ ಅವನಿಂದ 2 ಲಕ್ಷ 40 ಸಾವಿರ ಬೆಲೆಯ ಮೂರು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳುತ್ತದೆ.
ಈ ರೀತಿ ಮೇಲ್ಕಾಣಿಸಿದ ಎಲ್ಲ ವಾಹನಗಳ ಬಗ್ಗೆ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾದ ತಕ್ಷಣ ಪೋಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಠಾಣಾಧಿಕಾರಿಗಳಾದ ಮಧು. ಎಲ್ ಮತ್ತು ಕಿರಣ ಸತ್ತಿಗೇರಿ ಅಲ್ಲದೆ ಸಿಬ್ಬಂದಿಗಳಾದ ಎಸ್ ಡಿ. ಬಾರಿಗಿಡದ, ವಿ ಎಸ್.ಅಜ್ಜನಗೌಡರ, ಬಿ ಜಿ.ದೇಸಾಯಿ, ಎ ಎಂ. ಜಮಖಂಡಿ, ಬಿ ಪಿ ಹಡಪದ, ಚಾಲಕ ವಿಠ್ಠಲ ಬಳಗನ್ನವರ ತನಿಖೆ ನಡೆಸಿ ವಾಹನಗಳ ಸಮೇತವಾಗಿ ಆರೋಪಿತರನ್ನು ಬಂಧಿಸಿ ಹಿರಿಯ ಅಧಿಕಾರಿಗಳಿಂದ ಪ್ರಶಂಶೆ ಮತ್ತು ಇಲಾಖೆಯಿಂದ ಪ್ರೋತ್ಸಾಹ ಬಹುಮಾನ ಪಡೆದಿದರು.
ರಬಕವಿ- ಬನಹಟ್ಟಿ ತಾಲೂಕಿನ ಸಿಪಿಆಯ್ ಸಂಜೀವ ಬಳಿಗಾರ್ ಉಪಸ್ಥಿತರಿದ್ದರು.