ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಕ್ತಿ ರಂಗಭೂಮಿಗಿದೆ: ಹಿರೇಮಠ

Theater has the power to change the vicissitudes of society: Hiremath

ಧಾರವಾಡ 14: ನಾಟಕಗಳು ಸಮಾಜದ ಪ್ರತಿಬಿಂಬವಾಗಿದ್ದು, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಶಕ್ತಿ ರಂಗಭೂಮಿಗಿದೆ. ನಾಟಕಗಳು ಎಲ್ಲವನ್ನು ಒಳಗೊಂಡ ಸಮಗ್ರಕಲೆಯಾಗಿದೆಎಂದು ಕ.ವಿ.ವ. ಸಂಘದಕಾರ್ಯಕಾರಿ ಸಮಿತಿ ಸದಸ್ಯಗುರು ಹಿರೇಮಠ ಹೇಳಿದರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಬಿ.ಶಿವಶಂಕರ ವಿರಚಿತ ‘ನವಲಗುಂದಅಜಾತ ನಾಗಲಿಂಗ ಲೀಲೆ’ ಆಧ್ಯಾತ್ಮಿಕ ನಾಟಕ ಪ್ರದರ್ಶನಕ್ಕೆತಮಟೆ ಬಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಮುಂದುವರೆದು ಮಾತನಾಡಿದ ಅವರು, ನಾಟಕ ಜೀವಂತ ಕಲೆಯಾಗಿದೆ. ನಮ್ಮ ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿ ನಾಟಕಕ್ಕಿದೆ.ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕವಾದ ನಾಟಕಗಳು ತಮ್ಮ ಹಿಂದಿನ ವೈಭವವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ರಂಗಕಲಾವಿದರ ಬದುಕು ಇಂದು ಸಂಕೀರ್ಣ ಸ್ಥೀತಿಯಲ್ಲಿದ್ದು, ಅವರಿಗೆ ಸಿಗಬೇಕಾದ ಉತ್ತಮ ಸ್ಥಾನ-ಮಾನಗಳು ಸಿಗುತ್ತಿಲ್ಲ. ಕಲೆ ಮತ್ತು ಕಲಾವಿದರು ಈ ನಾಡಿನ ಬಹುದೊಡ್ಡ ಆಸ್ತಿ. ಪ್ರೇಕ್ಷಕರೆ ನಾಟಕದ ನಿಜವಾದ ಜೀವಾಳ. ಈ ರಂಗಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು. 

ಸತೀಶತುರಮರಿ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಾಟಕ ನಿರ್ದೇಶಕ, ನಾಗಲಿಂಗ ಪಾತ್ರಧಾರಿ ಎಂ.ಎಸ್‌. ಕೊಟ್ರೇಶಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಕೊನೆಯಲ್ಲಿ ಬಿ.ಶಿವಶಂಕರ ವಿರಚಿತ ಎಂ.ಎಸ್‌. ಕೊಟ್ರೇಶ ನಿರ್ದೇಶನದ ‘ನವಲಗುಂದಅಜಾತ ನಾಗಲಿಂಗ ಲೀಲೆ’ ಆಧ್ಯಾತ್ಮಿಕ ನಾಟಕ ಪ್ರದರ್ಶನವನ್ನು ಕೊಟ್ಟೂರೇಶ್ವರ ನಾಟಕ ಮಂಡಳಿ, ನೂಲಗೇರಿ ಅವರಿಂದ ಪ್ರದರ್ಶಗೊಂಡಿತು. ಸಂಗೀತ ದಿ.ಎಚ್‌.ಟಿ. ಬಸವರಾಜ ನೀಡಿದರು. ಶಾನವಾಡ ಮಾಸ್ತರ, ಚಂದ್ರಣ್ಣಅಣ್ಣಿಗೇರಿ ವಾದ್ಯ ವೃಂದದಲ್ಲಿದ್ದರು.   

ಶಂಕರ ಹಲಗತ್ತಿಕಾರ‌್ಯಕ್ರಮ ನಿರೂಪಿಸಿ, ವಂದಿಸಿದರು. 

ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ವೀರಣ್ಣಒಡ್ಡೀನ, ಡಾ.ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಡಾ. ಬಾಳಣ್ಣಾ ಶೀಗೀಹಳ್ಳಿ, ಪ್ರಿ. ಶಶಿಧರ ತೊಡಕರ, ಡಾ.ಶಶಿಧರ ನರೇಂದ್ರ, ಡಾ.ಸದಾಶಿವ ಮರ್ಜಿ, ರವಿ ಕುಲಕರ್ಣಿ, ವಿಷಯಾಜೇವೂರ, ಸನ್ಮತಿಅಂಗಡಿ, ವೀರಣ್ಣ ಪತ್ತಾರ ಸೇರಿದಂತೆ ಮುಂತಾದವರಿದ್ದರು.