ರಂಗಭೂಮಿ ಕಲೆ ಉಳಿಯಬೇಕು: ತಾಪಂ ಸದಸ್ಯ ಮಾದಿನೂರು

ಲೋಕದರ್ಶನ ವರದಿ

ಕುಕನೂರು 27: ಎಲ್ಲಾ ಕಲೆಗಳ ತವರೂರು ರಂಗಭೂಮಿ ಇದು ಉಳಿದರೆ ಮಾತ್ರ ನಮ್ಮ ಕಲೆ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ತಾಪಂ ಸದಸ್ಯ ಸುಭಸ್ ಮಾದಿನೂರು ಹೇಳಿದರು. ತಾಲೂಕಿನ ಯರೇಹಂಚಿನಾಳ ಗ್ರಾಮದ ಪತ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಏರ್ಪಡಿಸಿದ್ದ ಕರ್ಣ ಪರ್ವ ಎಂಬ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕ ಯುಗದಲ್ಲಿ ಜನತೆ ದೂರದರ್ಶನದ ಪ್ರಭಾವಕ್ಕೆ ಒಳಗಾಗಿ ಕಲೆಯನ್ನು ಕಡೆಗಣಿಸುತ್ತಿದ್ದಾರೆ ಇದರಲ್ಲಿ ತುಂಬಾ ಅರ್ಥಗಬರ್ಿತವಾದ ವಿಷಯಗಳಿರುತ್ತವೆ ಮತ್ತು ಜನತೆ ಇದರಿಂದ ತಿಳಿದುಕೊಳ್ಳುವಂತಹ ಅನೇಕ ವಿಷಯಗಳು  ಅಡಗಿರುತ್ತವೆ ಹಳೆಯ ಕಾಲದಿಂದಲೂ ಗ್ರಾಮೀಣ ಪ್ರದೇಶದಲ್ಲಿ ಹಬ್ಬ ಹಾಗೂ ಜಾತ್ರಾ ಸಮಯದಲ್ಲಿ ಕಡ್ಡಾಯವಾಗಿ ನಾಟಕಗಳು ಪ್ರದರ್ಶನವಾಗುತ್ತಿದ್ದವು ಇದರಿಂದ ವರ್ಷವಿಡಿ ದುಡಿದಂತಹ ಜನತೆಗೆ ಮನೋರಂಜನೆ ಸಿಗುತ್ತಿದ್ದು ಇಂದು ಮೋಬೈಲ್ ಮತ್ತು ಟಿವ್ಹಿಗಳಿಂದ ಇದು ನಶಿಸಿ ಹೋಗುತ್ತಿರುವದು ದುರಂತವಾಗಿದೆ ಇಂತಹ ದಿನಮಾನಗಳಲ್ಲಿ ನಮ್ಮ ಗ್ರಾಮದಲ್ಲಿ ಇಂತಹ ಪೌರಾಣಿಕ ನಾಟಕ ಅಭಿನಯ ಮಾಡುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಾಬೂಬಿ ಕಡೆಮನಿ, ಉಪಾದ್ಯಕ್ಷ ನಾಗರಾಜ ಯಲಿಜಗುಳೆದ, ಪಿಡಿಓ ಅಮೀರ್ ನಾಯಕ್, ಮುಖಂಡರಾದ ಹೆಮರಡ್ಡೆಪ್ಪ ಮುಂಡರಗಿ, ಶಿಕ್ಷಕ ಆರ್ ಬಿ ಅಬ್ಬಿಗೇರಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಂದಪ್ಪ ಕೋಳೂರು ಸೇರಿದಂತೆ ಅನೇಕ ಮುಖಂಡರು ಗ್ರಾಪಂ ಸದಸ್ಯರು ಹಾಜರಿದ್ದರು.