ದಿ. ನಿಂಗಯ್ಯಾಸ್ವಾಮಿ ಪೂಜಾರಿ ಯವರ 12 ನೇ ಪುಣ್ಯಾರಾಧನೆಯ ಕಾರ್ಯಕ್ರಮ

ಲೋಕದರ್ಶನ ವರದಿ

ಗೋಕಾಕ,28: ನಗರಸಭೆಯ ಮಾಜಿ ಅಧ್ಯಕ್ಷ ಹಿರಿಯ ಜಾನಪದ ರಂಗ ಕಲಾವಿದರಾಗಿದ್ದ ದಿ. ನಿಂಗಯ್ಯಾಸ್ವಾಮಿ ಪೂಜಾರಿ ಯವರ 12 ನೇ ಪುಣ್ಯಾರಾಧನೆಯ ಕಾರ್ಯಕ್ರಮಗಳು ಭಜನೆ, ಕೃತರ್ುಗದ್ದುಗೆ ಪೂಜೆ, ಸಂಗೀತ ಕಾರ್ಯಕ್ರಮಗಳು, ಧರ್ಮಸಭೆ ಹಾಗೂ ಸಾಧಕರ ಸನ್ಮಾನಗಳೊಂದಿಗೆ ಸಮಾರೋಪಗೊಂಡಿತು.

       ಈ ಸಂದರ್ಭದಲ್ಲಿ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮುರುಘರಾಜೇಂದ್ರ ಸ್ವಾಮಿಗಳು ಶೂನ್ಯ ಸಂಪಾದನ ಮಠ, ಗೋಕಾಕ ಅವರು ಮಾತನಾಡಿ ಮಾನವ ಜನ್ಮ ಶ್ರೇಷ್ಠ. ಆದರೆ ಈ ಶ್ರೇಷ್ಠತೆಯನ್ನು ಹುಟ್ಟು ಮತ್ತು ಸಾವಿನ ನಡುವಿನ ಅವಧಿಯ ಬದುಕಿನ ಕರ್ಮದಿಂದ ಪಡೆಯಬೇಕಾಗುತ್ತದೆ. ಜೀವಿತ ಅವಧಿಯ ಪರೋಪಕಾರಮಯ ಪುಣ್ಯ ಕಾರ್ಯಗಳು ನಮ್ಮನ್ನು ಪುನೀತರನ್ನಾಗಿಸಬೇಕು. ಧರ್ಮಯುತ ಸಂಸ್ಕಾರಮಯ ಜೀವನವೇ ನಮ್ಮ ಬದುಕಿಗೆ ಸಾರ್ಥಕತೆಯನ್ನು ಒದಗಿಸುತ್ತದೆ. ದಿ. ಕಲಾಶ್ರೀ ನಿಂಗಯ್ಯಾಸ್ವಾಮಿ ಪೂಜಾರಿಯವರು ಬಡತನದ ಜೀವನದ ನಡುವೆಯೂ ಸಾಮಾಜಿಕ, ರಾಜಕೀಯ ಮತ್ತು ಕಲಾರಂಗಗಳಲ್ಲಿ ಶ್ರೇಷ್ಠತೆಯನ್ನು ಮೆರೆದವರು. ನಗರಸಭೆಯ ದೀರ್ಘ ಅವಧಿಯ ಅಧ್ಯಕ್ಷ ಪದವಿಯ ಜೊತೆಗೆ ಜಾನಪದ ಕಲಾರಂಗವನ್ನು ಶ್ರೀಮಂತಗೊಳಿಸಿದ ಸಾಧಕರು ಎಂದು ಅವರ ವೈವಿಧ್ಯಮಯ ಬದುಕಿನ ಚಿತ್ರನವನ್ನು ಸ್ಮರಿಸಿ, ತಮ್ಮ ಜೀವಿತ ಅವಧಿಯಲ್ಲಿ ಅವರು ಬಡ-ಶ್ರೀಮಂತರೆಂಬ ಬೇಧ-ಭಾವವಿಲ್ಲದೇ ಎಲ್ಲರೊಂದಿಗೆ ಒಂದಾಗಿ ದೀನದಲಿತರಾಧಿಯಾಗಿ ಎಲ್ಲರ ಕಷ್ಟಕಾರ್ಪಣ್ಯಗಳಿಗೆ ಸ್ಪಂಧಿಸಿದ ಹೋರಾಟಮಯ ಜೀವನ ಮಾದರಿಯಾಗಿದೆ ಎಂದು ಹೇಳಿದರು.

       ಧರ್ಮಸಭೆಯಲ್ಲಿ ಹುಣಶ್ಯಾಳದ ನಿಜಗುಣದೇವರು, ಭಾಗೋಜಿಕೊಪ್ಪದ ಶಿವಲಿಂಗೇಶ್ವರ ಸ್ವಾಮಿಗಳು, ಬೆಂಡವಾಡದ ಗುರುಸಿದ್ದಸ್ವಾಮಿಗಳು, ಜಂಗಟಿಹಾಳದ ಪೂಜ್ಯ ಚಂದ್ರಶೇಖರ ಮಹಾರಾಜರು, ಬಳೋಬಾಳದ ಪೂಜ್ಯ ಸಂಗನಬಸವ ಸ್ವಾಮಿಗಳು, ಧೂಪದಾಳ ಮಾತೋಶ್ರೀ ನೀಲಾಂಬಿಕಾದೇವಿ, ಸಂಕ್ರಟ್ಟಿಯ ಶಂಕರಾನಂದ ಶರಣರು, ಹಳಿಂಗಳಿಯ ಮಹಾವೀರ ಶರಣರು, ಜಿಂಜರವಾಡಿಯ ಪೂಜ್ಯ ಬಸವರಾಜ ಶರಣರು, ಗೊರಗುದ್ದಿಯ ತುಕಾರಾಮ ಶರಣರು, ಗಿಳಿಹೊಸೂರದ ದ್ಯಾಮಣ್ಣಾ ಅಜ್ಜನವರು, ಕರಡಿಗುದ್ದಿಯ ರುದ್ರಯ್ಯಾಸ್ವಾಮಿಳು, ಸುಲಧಾಳದ ಮಾರ್ಕಂಡೇಯ ಸ್ವಾಮಿಗಳು, ಹೂಲಿಕಟ್ಟಿಯ ಯಲ್ಲಾಲಿಂಗಸ್ವಾಮಿಗಳು, ಗೊಟಗುದ್ದಿಯ ಬಾಳಯ್ಯಾಸ್ವಾಮಿಗಳು ಮುಂತಾದ ಪೂಜ್ಯರು ಭಾಗವಹಿಸಿ ಮನುಷ್ಯ ಜನ್ಮದ ಸಾರ್ಥಕತೆಯ ಬಗ್ಗೆ ಆಧ್ಯಾತ್ಮ ಚಿಂತನೆ ಮಾಡಿದರು. 

       ಎಲೆಯ ಮರೆಯ ಕಾಯಿಯಂತಿದ್ದು ತಾವು ನಿರ್ವಹಿಸುವ ಕಾಯಕದ ಜೊತೆಯೇ ವಿವಿಧ ರಂಗಗಳಲ್ಲಿ ಪ್ರಾಮಾಣಿಕ ಸೇವೆಗೈದು ಸಾಧನೆ ಮಾಡಿದ ಕಲಾರಂಗದ ಕ್ಷೇತ್ರದ ಚಂದ್ರಯ್ಯ ಮಠದ, ಲಕ್ಷ್ಮಣ ಪೂಜೇರಿ, ತುಕಾರಾಮ ಮುತ್ನಾಳ, ಅಶೋಕ ಕುರಬೇಟ, ಶಿವಪ್ಪ ಜಗದಾಳ, ಸಾಮಾಜಿಕ ಕ್ಷೇತ್ರದಲ್ಲಿ ಲೋಕೇಶ ತೋಡಕರ, ಇಸ್ಮಾಯಿಲ್ ಸನದಿ, ರಾಜು ಮಡಿವಾಳರ, ರವಿ ಮಡಿವಾಳರ, ಮಹಾನಿಂಗಪ್ಪ ಮುನ್ನೋಳ್ಳಿ, ಅಶೋಕ ಮುತ್ನಾಳ, ಲಕ್ಷ್ಮಣ ಹೊಸಮನಿ, ಶ್ರೀಮತಿ ರಾಜಶ್ರೀ ಹೊಸಮನಿ, ಪತ್ರಕರ್ತ ಮಹಾದೇವ ಬೀರಾದಾರ, ಹೋರಾಟಗಾರ ಅಶೋಕ ಬಂಗಾರಿ, ಚನ್ನಬಸು ರುದ್ರಾಪೂರ, ದಸ್ತಗೀರ ಪೈಲವಾನ, ಶಿಕ್ಷಣ ಕ್ಷೇತ್ರದ ಬಿ.ಬಿ. ಪಟಗುಂದಿ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

        ಕಾರ್ಯಕ್ರಮದ ನಿರ್ವಹಣೆಯನ್ನು  ಗುರುಬಸಯ್ಯ ಕಪರ್ೂರಮಠ ಮಾಡಿದರು. ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ, ಧರ್ಮದಶರ್ಿ ಶ್ರೀಮತಿ ಸುವಣರ್ಾ ಹೊಸಮಠ, ಮಹಾಂತೇಶ ತಾಂವಶಿ, ಸಂಗಯ್ಯ ಪೂಜಾರಿ, ಶಂಕರಯ್ಯಾ ಪೂಜಾರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.