ಹಾವೇರಿ: ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನ್ಯಾಯ ಮತ್ತು ಜಾತ್ಯಾತೀತತೆಯನ್ನು ನಮ್ಮ ಜೀವನ ಮೌಲ್ಯಗಳಾಗಿ ನಾವು ಅಳವಡಿಸಿಕೊಂಡಾಗ ಮಾತ್ರ ಹಿರಿಯರು ಕಂಡ ಕನಸು ನನಸಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹೇಳಿದರು.
ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ವಾಚಿಸಿದರು.
ರಾಜಕೀಯ ಸ್ವಾತಂತ್ರ್ಯದ ಜೊತೆಯಲ್ಲಿ ಆಥರ್ಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದೇ ಅರ್ಥಪೂರ್ಣ ಸ್ವಾತಂತ್ರ್ಯಾಚರಣೆ ಹಾಗೂ ಅಧಿಕಾರ, ಅವಕಾಶ ಮತ್ತು ಸಂಪತ್ತು ಸಮಾಜದ ಎಲ್ಲ ಜನರಿಗೂ ಹಾಗೂ ವರ್ಗಗಳಿಗೂ ಹಂಚಿಕೆಯಾಗಬೇಕೆಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಬಹುಭಾಷೆ, ಬಹುಧರ್ಮ ಮತ್ತು ಬಹುಸಂಸ್ಕೃತಿಗಳ ದೇಶ ನಮ್ಮದು. ಈ ವೈವಿಧ್ಯತೆಯಲ್ಲಿಯೇ ಏಕತೆಯನ್ನು ಕಂಡುಕೊಂಡ ಹೆಮ್ಮೆಯ ಪರಂಪರೆಯ ವಾರಸುದಾರರು ನಾವು. ಈ ಭಾವ ಸಂಬಂಧ ಮುರಿದು ಬೀಳಲು ಅವಕಾಶ ನೀಡದೆ ರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಸತತ ಬರಗಾಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ಇದೀಗ ಅತಿವೃಷ್ಠಿ ಹಾಗೂ ಪ್ರವಾಹದ ಸಂಕಷ್ಟ ಎದುರಾಗಿದೆ. ನೊಂದ ಜನತೆಯ ಸಂಕಷ್ಟಕ್ಕೆ ಸಕರ್ಾರ ಎಲ್ಲ ನೆರವನ್ನು ನೀಡಲಿದೆ. ಸಂಕಷ್ಟದ ಸಂದರ್ಭದಲ್ಲಿ ಅಧಿಕಾರಿಗಳ ಕಾರ್ಯ, ಸಂತ್ರಸ್ಥರು ಹಾಗೂ ಜನತೆ ನೀಡಿದ ಸಹಕಾರವನ್ನು ಅಭಿಮಾನ ಪೂರ್ವಕವಾಗಿ ಸ್ಮರಿಸಿದರು.
ವಿದ್ಯಾಥರ್ಿಗಳಿಗೆ ಲ್ಯಾಪ್ಟಾಪ್: 2018-19 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಾದ ಹಾನಗಲ್ನ ಸಕರ್ಾರಿ ಪ್ರೌಢಶಾಲೆ ಶೇಷಗಿರಿಯ ವಿದ್ಯಾಥರ್ಿನಿ ಸಿಂಧು ಬಸವರಾಜ್, ಹಿರೇಕೆರೂರಿನ ಸಕರ್ಾರಿ ಉದರ್ು ಪ್ರೌಢಶಾಲೆಯ ಜೋಯಾ ಖಾಜಿ ಹಾಗೂ ಹಾನಗಲ್ನ ಮಹಾರಾಜಪೇಟೆಯ ಸಕರ್ಾರಿ ಪ್ರೌಢಶಾಲೆಯ ಧನಲಕ್ಷ್ಮಿ ಮಲ್ಲಿಕಾಜರ್ುನ ಹಾಗೂ ಹಾವೇರಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕಪಡೆದ ಕನವಳ್ಳಿ ಸಕರ್ಾರಿ ಪ್ರೌಢಶಾಲೆಯ ರಿಹಾನಾಭಾನು ಅಗಡಿ, ನೆಲೊಗಲ್ಲ ಸಕರ್ಾರಿ ಪ್ರೌಢಶಾಲೆಯ ಯಶೋಧ ಶೆಟ್ಟಣ್ಣನವರ ಹಾಗೂ ಲಕ್ಷ್ಮೀ ವಿಠ್ಠಲ ಕಲೆ ವಿದ್ಯಾಥರ್ಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಲ್ಯಾಪ್ಟಾಪ್ ವಿತರಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ, ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೆಹರು ಓಲೇಕಾರ, ಜಿಲ್ಲಾ ಪಂಚಾಯತ್ ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ, ಸಿದ್ದರಾಜ ಕಲಕೋಟಿ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಲೀಲಾವತಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ಜೆ.ದೇವರಾಜ್, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ತಹಶೀಲ್ದಾರ ಶಿವಕುಮಾರ ಹಾಗೂ ವಿವಿಧ ಪೊಲೀಸ್ ತುಕಡಿಗಳು ಹಾಗೂ ಶಾಲಾ ವಿದ್ಯಾಥರ್ಿಗಳು ಭಾಗವಹಿಸಿದ್ದರು.