ಯುವ ಪೀಳಿಗೆ ಯಶಸ್ವಿಗಿಂತ ಮೌಲ್ಯಯುತ ವ್ಯಕ್ತಿಗಳಾಗಲು ಪ್ರಯತ್ನಿಸಬೇಕು: ನವೀದ್
The younger generation should strive to become valuable individuals rather than successful ones: Nav
ಕೊಪ್ಪಳ 8: ಯುವಕರು ವಿದ್ಯಾರ್ಥಿಗಳು ಇಂದಿನ ಯುವ ಪೀಳಿಗೆ ಜೀವನದಲ್ಲಿ ಯಶಸ್ವಿಯಾಗಲು ಪ್ರಯತ್ನಿಸಬೇಡಿ ಅದರ ಬದಲಾಗಿ ಮೌಲ್ಯಯುತ ವ್ಯಕ್ತಿಗಳಾಗಲು ಪ್ರಯತ್ನಿಸಿ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ನೀರೀಕ್ಷಕ, ಎಂ. ಬದಿಯುದ್ದೀನ್ ಅಹಮದ್ ನವೀದ ಹೇಳಿದರು.
ಅವರು ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಉರ್ದು ವಿಭಾಗದ ಆವರಣ ದಲ್ಲಿ ಫಿರ್ದೋಸ್ ಸಾಂಸ್ಕೃತಿಕ, ಕಲಾ ಕ್ರೀಡಾ ಹಾಗೂ ತರಬೇತಿ ಸಂಘ ಮತ್ತು ಮೌಲಾನ ಆಜಾದ್ ಉರ್ದು ವಿಶ್ವವಿದ್ಯಾಲಯ ಕೊಪ್ಪಳ ಉರ್ದು ಅಧ್ಯಯನ ಕೇಂದ್ರದ ಹಳೆಯ ವಿದ್ಯಾರ್ಥಿಗಳ ಬಳಗದ ಸಂಯುಕ್ತ ಆಶ್ರಯದಲ್ಲಿ ಏರಿ್ಡಸಿದ ನಿವೃತ್ತಿ ಗೊಂಡ ಶಿಕ್ಷಕಿ ಶಮೀಮುನ್ನಿಸಾ ಬೇಗಠ ಹುನಗುಂದ ರವರಿಗೆ ಏರಿ್ಡಸಿದ ಅದ್ದೂರಿ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಮುಂದುವರೆದು ಮಾತನಾಡಿದ ಅವರು ಶಮೀಮುನ್ನಿಸಾ ರವರ ಶೈಕ್ಷಣಿಕ ರಂಗದಲ್ಲಿ ನ ಸೇವೆ ಅಪಾರವಾಗಿದೆ ಸದಾ ಅವರು ಹಸನ್ಮುಖಿಯಾಗಿ ಮಕ್ಕಳೊಂದಿಗೆ ಅವರ ಸ್ನೇಹಿತರಂತೆ ಅವರೊಂದಿಗೆ ಬೆರೆತು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮತ್ತು ಅವರ ಭವಿಷ್ಯ ಉಜ್ವಲ ಗೊಳಿಸುವ ನಿಟ್ಟಿನಲ್ಲಿ ಪ್ರಮಾಣಿಕವಾದ ಪ್ರಯತ್ನ ಮಾಡುತ್ತಾ ಶ್ರಮಿಸಿ ಇಂದು ಅವರು ಸಾಮಾನ್ಯ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಅವರ ಸೇವಾ ಕಾರ್ಯ ಎಲ್ಲರೂ ಮೆಚ್ಚುವಂತಾಗಿದೆ, ಶಿಕ್ಷಣ ಕ್ಷೇತ್ರಕ್ಕೆ ಅವರು ಉತ್ತಮ ಕೊಡುಗೆ ನೀಡಿದ್ದಾರೆ ಎಂದರು,
ಬಡತನ ಸಿರಿತನ ಕಡೆ ತನಕ ಉಳಿಯೋದಿಲ್ಲ ಆದರೆ ಗೆಳೆತನ ಮಾತ್ರ ಕೊನೆತನಕ ಉಳಿಯುತ್ತದೆ ಎಂಬಂತೆ ಇಂದು ಅವರ ಅಭಿಮಾನಿ ವಿದ್ಯಾರ್ಥಿಗಳು ಏರಿ್ಡಸಿದ ಈ ಕಾರ್ಯಕ್ರಮ ಸಾಕ್ಷಿಯಾಗಿದೆ, ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ ,ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡುತ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ, ಎಂಬಂತೆ ಶಿಕ್ಷಕಿ ಶಮೀಮುನ್ನಿಸಾ ಬೇಗಂ ಹುನಗುಂದು ರವರು ಸರಳತೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ, ಅವರ ವಿದ್ಯಾರ್ಥಿಗಳು ಅವರು ತೋರಿಸಿದ ಮಾರ್ಗದಲ್ಲಿ ತಮ್ಮ ತಮ್ಮ ತಂದೆ ತಾಯಿಗಳಿಗೆ ಗೌರವ ನೀಡುತ್ತಾ, ಉತ್ತಮ ಪ್ರಜೆಗಳಾಗಿ ಬದುಕಬೇಕು ಅಂದಾಗ ಮಾತ್ರ ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ನೀರೀಕ್ಷಕ, ಎಂ. ಬದಿಯುದ್ದೀನ್ ಅಹಮದ್ ನವೀದ ರವರು ವಿದ್ಯಾರ್ಥಿಗಳಿಗೆ ಯುವತಿ ಯುವಕರಿಗೆ ಕರೆ ನೀಡಿದರು.ಸಮಾರಂಭದಲ್ಲಿ ಅಭಿಮಾನಿ ಬಳಗದ ವತಿಯಿಂದ ಶಿಕ್ಷಕಿ ಶಮೀಮುನ್ನಿಸಾ ಬೇಗಮ್ ಹುನಗುಂದು ರವರಿಗೆ ಅದ್ದೂರಿ ಸನ್ಮಾನ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಉಪ ಪ್ರಚಾರ್ಯರಾದ ಎಂ. ಎ . ಖೈಯುಮ್, ರವರು ವಹಿಸಿದ್ದರು, ವೇದಿಕೆ ಮೇಲೆ ಮುಖ್ಯ ಅತಿಥಿ ಗಳಾಗಿ ನಿವೃತ್ತ ಪ್ರಧ್ಯಾಪಕ ಉರ್ದು ಸಾಹಿತಿ ಅನ್ವರ ಹುಸೇನ್, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ,ನಿವೃತ್ತ ಶಿಕ್ಷಕ ಸೈಯದ್ ಗೌಸ್ ಪಾಷಾ ಖಾಜಿ, ಹೊಸಪೇಟೆಯ ಪ್ರಾಧ್ಯಾಪಕಿ ಹನಿಫಾ ಬೇಗಂ , ನಾಸಿರ್ ಖಾನ್, ಅಂಚೆ ಇಲಾಖೆಯ ನೀರೀಕ್ಷಕ ಹಾಗೂ ಶಮೀಮುನ್ನಿಸಾ ಬೇಗಂ ರವರ ಪತಿ ದಾವುದ ಹುನಗುಂದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ಮೌಲಾನ ಮಹಮ್ಮದ್ ಅಲಿ ಹಿಮಾಹಿತಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು ,ಸಿರಾಜ್ ಲಾಠಿ ಸ್ವಾಗತಿಸಿದರೆ, ಹಳೆಯ ವಿದ್ಯಾರ್ಥಿಗಳ ಪರವಾಗಿ ಅಜಮೇರಿ ಬೇಗಮ್ ರವರು ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರೆ, ಖಾಸಿಂ ಅಲಿ ಗೋದಿ ಕೊನೆಯಲ್ಲಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 