ಇಂದಿನಿಂದ ದಡ್ಡಿ ಗುಡಗನಹಟ್ಟಿ ಗ್ರಾಮದೇವತೆ ಜಾತ್ರೆ

ಇಂದಿನಿಂದ ದಡ್ಡಿ ಗುಡಗನಹಟ್ಟಿ ಗ್ರಾಮದೇವತೆ ಜಾತ್ರೆ  Daddi Gudaganahatti Village Devata Fair from today

ಲೋಕದರ್ಶನ ವರದಿ 

ಯಮಕನಮರಡಿ 04: ಇಲ್ಲಿಗೆ ಸಮೀಪದ ದಡ್ಡಿ ಗುಡಗನಹಟ್ಟಿ ಗ್ರಾಮದೇವತೆಯ ಜಾತ್ರೆಯು ದಿ. 5 ಮಂಗಳವಾರದಿಂದ ಪ್ರಾರಂಭವಾಗಿ ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.  ಮಂಗಳವಾರ ರಾತ್ರಿ ದೇವಿಯ ಆಕರ್ಷಕ ಹೊನ್ನಾಟ ಮುಂಜಾನೆ ಸ್ಥಾಪನೆ ಭಕ್ತರಿಂದ ನೈವೇದ್ಯ ಪ್ರಾರಂಭ ಹಾಗೂ ಗ್ರಾಮದ ಮುಖಂಡರಿಂದ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ಐದು ದಿನಗಳ ಕಾಲ ವಿವಿಧ ಮನರಂಜನ ಕಾರ್ಯಕ್ರಮಗಳು ಜರುಗಲಿವೆ. ಜೋಡಿ ಎತ್ತಿನ ಗಾಡಿಗಳ ಶರಿಯತ್ತು ಹಾಗೂ ಓಡುವ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ ಎಂದು ಯಾತ್ರಾ ಕಮಿಟಿ ತಿಳಿಸಿದೆ ಜಾತ್ರಾ ಮಹೋತ್ಸವ ಸಮಾರಂಭಕ್ಕೆ ಸ್ಥಳೀಯ ಶಾಸಕರು ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಆಗಮಿಸಲಿದ್ದಾರೆ ಎಂದು ಯಾತ್ರಾ ಕಮಿಟಿಯವರು ತಿಳಿಸಿದ್ದಾರೆ.