ಯುವ ಪೀಳಿಗೆ ವೀರಶೈವ ಧರ್ಮದ ಪರಂಪರೆ ಅಗತ್ಯ : ಚಂದ್ರಶೇ ಖರಯ್ಯ

The younger generation needs the heritage of Veerashaiva religion: Chandrashekariah

ಹೂವಿನಹಡಗಲಿ 13:  ಮಾನವ ಕುಲ ಉದ್ಧಾರಕ್ಕಾಗಿ ರೇಣುಕರು ಜನ್ಮ ತಾಳಿದರು ಎಂದು ಉಪನ್ಯಾಸಕ ಜಿ.ಎಂ.ಚಂದ್ರಶೇ ಖರಯ್ಯ ಹೇಳಿದರು.  

ಪಟ್ಟಣದ ತಾ.ಪಂ. ರಾಜೀವಗಾಂಧಿ ಸಭಾಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ಪಂಚಾಚಾರ್ಯ, ಅಷ್ಟಾವರಣ, ಷಟ ಸ್ಥಲಗಳನ್ನ ರೂಡಿಸಿಕೊಂಡರೆ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದರು. ಸಾತ್ವಿಕ ಆಚಾರ ವಿಚಾರಗಳನ್ನು ರೂಢಿ ಸಿಕೊಂಡವರೇ ವೀರಶೈವರು, ವೀರಶೈವ ಧರ್ಮ ಪವಿತ್ರ ಸನಾತನ ಧರ್ಮವಾಗಿದೆ ಎಂದರು. ವೀರಶೈವರು ಸಮಾಜದ ಒಳಿತಿಗಾಗಿ ಸಂಕಲ್ಪಗಳನ್ನು ಮಾಡುತ್ತಾರೆ ಎಂದರು. ಇಷ್ಟಲಿಂಗ ಪೂಜೆಯಿಂದ ಜಗತ್ತನ್ನು ಕಾಣಬಹುದು ಹೊಸ ಪೀಳಿಗೆಗೆ ವೀರಶೈವ ಧರ್ಮದ ಪರಂಪರೆ ಬಗ್ಗೆ ತಿಳಿದಿಲ್ಲ ತಿಳಿಸುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ ಎಂದರು.  

ವೀರಶೈವ ಧರ್ಮ ಒಡೆದು ಹೋದರೆ ಮುಂದಿನ ದಿನಮಾನಗಳಲ್ಲಿ ಬದುಕು ಕಷ್ಟವಾಗುತ್ತದೆ ಎಂದರು. ತಹಸೀಲ್ದಾರ್ ಜಿ.ಸಂತೋಷ್ಮಾನವ ಧರ್ಮಕ್ಕೆ ಜಯ ವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ವಿಶ್ವ ಮಹತ್ವದ ಸಂದೇಶವನ್ನು ರೇಣುಕಾ ಚಾರ್ಯ ನೊಳಗೊಂಡಂತೆ ಗುರುಗಳು ಸಂದೇಶವನ್ನು ಸಾರಿದರು ಎಂದರು. 

ಸಿ.ಕೆ.ಎಂ.ಬಸವಲಿಂಗ ಸ್ವಾಮಿ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿ ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಎಂ.ಉಮೇಶ್, ಪುರಸಭೆ ಮುಖ್ಯ ಅಧಿಕಾರಿ ಹೆಚ್‌.ಇಮಾಮ್ ಸಾಹೇಬ್ ಮಾತನಾಡಿದರು. ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಎಚ್‌.ಎಂ.ಬೆಟ್ಟಯ್ಯ, ಉಮೇಶ್, ಹೆಚ್‌.ಇಮಾಮ್ ಸಾಹೇಬ್, ಎಂ.ಉಮೇಶ್ ಉಪಸ್ಥಿತರಿದ್ದರು. ಹಾಲಯ್ಯಶಾಸ್ತ್ರಿ ಮತ್ತು ತಂಡದವರು ವೇದಘೋಷ ಮಾಡಿದರು. ಪ್ರಸನ್ನ ಪ್ರಾರ್ಥನೆ ಹಾಡಿದರು. ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಎಂ.ಪಿ.ಎಂ. ಅಶೋಕ ನಿರೂಪಿಸಿದರು.