ಬಳ್ಳಾರಿ 01: ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 22 ವರ್ಷದ ಪೂಜ ಬಾಯಿ ಎಂಬ ಯುವತಿಯು ಫೆ.25ರಂದು ಮಧ್ಯಾಹ್ನ 2ಗಂಟೆಗೆ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ ಎಂದು ಠಾಣೆಯ ತನಿಖಾಧಿಕಾರಿ/ ಪೊಲೀಸ್ ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ. 4.5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೆಂಪು ಚೂಡಿದಾರ್ , ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ, ಲಂಬಾಣಿ, ಇಂಗ್ಲೀಷ್, ಹಿಂದಿ ಭಾಷೆಗಳನ್ನು ಮಾತನಾಡುತ್ತಾಳೆ. ಇವಳ ಪೀರ್ಯಾಧಿಯ ಜೆರಾಕ್ಸ್ ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಮನೆಗೆ ಬಂದಿಲ್ಲ ಎಂದು ದೂರು ದಾಖಲಿಸಿದ್ದಾರೆ. ಸದರಿ ಯುವತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಕೂಡಲೇ ಸಮೀಪವಿರುವ ಪೊಲೀಸ್ ಠಾಣೆಗೆ ಅಥವಾ ಸಂಡೂರು ಪೊಲೀಸ್ ಠಾಣೆ ದೂ.ಸಂ.08395-260249, 9480803061, ಕಂಟ್ರೋಲ್ ರೂಂನ ದೂ.ಸಂ. 08392-256100ಗೆ ಸಂಪಕರ್ಿಸಬೇಕು.