ನಿದ್ರೆಯಲ್ಲಿರುವ ಅಧಿಕಾರಿಗಳಿಗೆ ನಿದ್ದೆಗೇಡಿಸಿದ ಯುವಕ

ಲೋಕದರ್ಶನ ವರದಿ

ಮಾಂಜರಿ 11: ಕುಂಭ ಕರ್ಣ ನಿದ್ರೆಯಲ್ಲಿರುವ ಅಧಿಕಾರಿಗಳಿಗೆ ನಿದ್ದೆಗೇಡಿಸಿದ ಈ ಯುವಕ ರಸ್ತೆಯಲ್ಲಿರುವ ಬ್ರಹತ್ ಪ್ರಮಾಣ ತೆಗ್ಗು ಗುಂಡಿಗಳನ್ನು ಮುಚ್ಚುವ ಮೂಲಕ ಪರೋಕ್ಷವಾಗಿಯೇ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಛಿಮಾರಿ ಹಾಕಿದ್ದಾನೆಅಷ್ಟಕ್ಕೂ ಆ ಯುವಕ ಯಾರು ಅಂತಿರಾ .ರಸ್ತೆಗಳಲ್ಲಿ ಬ್ರಹತ್ ತೆಗ್ಗು ಗುಂಡಿಗಳು.ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸುತ್ತಿರುವ ಪ್ರಯಾಣಿಕರು ಇದೆನ್ನೆಲ್ಲ ಕಂಡ ಯುವಕ ಇಟ್ಟಿಗೆಗಳ ಮೂಲ ಗುಂಡಿಗಳನ್ನು ಮುಚ್ಚುತ್ತಿರುವ ದೃಶ್ಯಹೌದು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಯುವ ಕ ಕಿರಣ ಕೋಳಿಯವರು ರಸ್ತೆಗಳಲ್ಲಿ ಬಿದ್ದಂತಹ ತೆಗ್ಗು ಗುಂಡಿಗಳನ್ನು ಮುಚ್ಚಿದ್ದಾರೆ.

ಪ್ರಯಾಣೀಕರಿಗೆ ಜೀವಹಾನಿಯಾಗ ಬಾರದುಹಾಗೂ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಗಮನ ಸೆಳೆಯಲು ಸ್ಚತಹ ಖರ್ಚು ಮಾಡಿ ಬೈಕ್ ನ ಮೂಲಕ ಇಟ್ಟಿಗೆಗಳನ್ನು ತಂದು ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಮೂಲಕ ಸಮಾಜಸೇವೆಗೆ ಮುಂದಾಗಿದ್ದಾನೆ. ಈಮೂಲಕ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಪರೋಕ್ಷ ಛಿಮಾರಿ ಹಾಕಿದ್ದಾನೆ..ಸದ್ಯ ಕೀರಣ ಕೋಳಿ ಗುಂಡಿಗಳನ್ನು ಮುಚ್ಚುವ ಪೋಟೋಸಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು , ಸಮಾಸೇವಕರು ಹಾಗೂ ಯುವಕರು ಕಿರಣ ಕೋಳಿಯವರನ್ನು ಪ್ರಶಂಸೆ ಮಾಡುತ್ತಿದ್ದಾರೆ..ಇನ್ನೂ ಚಿಕ್ಕೋಡಿ ಮೀರಜ ರಸ್ತೆಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ತಗ್ಗು ಗುಂಡಿಗಳು ಬಿದ್ದಿವೆ..ಇತ್ತೀಚಿಗೆ ಕ್ರಷ್ಣಾನದಿಗೆ ಪ್ರವಾಹದಿಂದ ತಗ್ಗುಗಳ ಸಂಖ್ಯೆ ಹೆಚ್ಚಾಗಿವೆ.ಆದರೆ ಅಧಿಕಾರಿಗಳು ಹಾಗೂ ಜನಪ್ರನಿಧಿಗಳಿಗೆ ನಿರ್ಲಕ್ಷೆಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ಇದನ್ನರಿತ ಖಾಸಗಿ ಉದ್ಯೋಗಿ ಕಿರಣ ನಿನ್ನೆ ಕೇಲಸಕ್ಕೆ ರಜೆ ಇದ್ದ ಕಾರಣ ಸ್ವಂತ ಖರ್ಚಿನಲ್ಲಿ ಇಟ್ಟಿಗೆಗಳನ್ನು ಖರಿದಿಸಿ ರಸ್ತೆಗಳ ಮೇಲೆ ಬಿದ್ದಂತಹ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರಯಾಣೀಕರಿಗೆ ಅನಕೂಲವಾಗುವಂತೆ ಮಾಡಿದ್ದಾನೆ.

ವರದಿಗಾರ ಜೊತೆ  ಮಾತನಾಡಿ ಕಿರಣ ಕೋಳಿ ನಾನು ಪಿಗ್ಮಿ ಎಜೆಂಟನಾಗಿ ಕೆಲಸ ಮಾಡುತ್ತೇನೆ..ಮಾಂಜರಿ,ಅಂಕಲಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಪಿಗ್ಮಿ ಸಂಗ್ರಹಕ್ಕೆ ಹೊದಾಗ ತೆಗ್ಗು ಗುಂಡಿಗಳಿಂದ ಬಹಳಷ್ಟು ಸಮಸ್ಯೆಯಾಗುತ್ತಿತ್ತುಇನ್ನೂಳಿದ ಪ್ರಯಾಣಿಕರಿಗೆ ತೋಂದರೆಯಾಗುತ್ತಿತ್ತು.ಇದನ್ನರಿತ ನಾನು ಇಟ್ಟಿಗೆಗಳಿಂದ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದೆನೆಇದನ್ನು ಯಾವುದೇ ಸ್ವಾರ್ಥಕ್ಕಾಗಿ ಮಾಡಿಲ್ಲಾ ಎಂದರು.ಒಟ್ಟಿನಲ್ಲಿ ಇಂದಿನ ಯುವಕರು ಫೆಸಬುಕ್,ವಾಟ್ಸಾಪ ಸೇರಿದಂತೆ ಸದಾ ಮೊಬೈಲ್ ಬ್ಯುಸಿಯಾಗಿರುವ ಇನ್ನಿತರಿಗೆ ಯುವಕರಿಗೆ ಕಿರಣ ಕೋಳಿ ಯುವಕ ಮಾದರಿಯಾಗಿದ್ದಾನೆ. ಹೀಗೆ ಪ್ರತಿಯೊಬ್ಬರೂ ಜಾಗೃತರಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಗಳಿಗೆ ಅವರ ಜವಾಬ್ದಾರಿ ಏನೆನ್ನುವದನ್ನು ನೆನಪಿಸಿ ಕೊಡಬೇಕು.