ಯುವಕ ಕಾಣೆ; ಪತ್ತೆಗೆ ಮನವಿ
ಬಳ್ಳಾರಿ 10:ತಾಲ್ಲೂಕಿನ ಸಿರಿವಾರ ಗ್ರಾಮದ ಕೆ.ಸೋಮ ಎನ್ನುವ 23 ವರ್ಷದ ಯುವಕ ಡಿ.05 ರಂದು ಕಾಣೆಯಾಗಿರುವ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಅಸಿಸ್ಟಂಟ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.
ಚಹರೆ ಗುರುತು: ಎತ್ತರ 5.3 ಇಂಚು, ತೆಳುವಾದ ಮೈಕಟ್ಟು, ಎಣ್ಣೆ ಮೈಬಣ್ಣ ಹೊಂದಿದ್ದು, ಕಪ್ಪು ಕೂದಲು, ಬಲಗಡೆ ಕಿವಿಯ ಹತ್ತಿರ ಕೆಂಪು ಪುಲಿಪಿರಿ ಇರುತ್ತದೆ. ಯುವಕನ ಮೈಮೇಲೆ ನೀಲಿ ಬಣ್ಣದ ಗೆರೆಗಳಿರುವ ತೊಂಬು ತೋಳಿನ ಕಪ್ಪು ಬಣ್ಣದ ತುಂಬುತೋಳಿನ ಶರ್ಟ್, ಕಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಯುವಕನು ಕನ್ನಡ, ತೆಲುಗು, ಹಿಂದಿ ಭಾಷೆ ಮಾತನಾಡುತ್ತಾನೆ.ಈ ಕಾಣೆಯಾದ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ದೂ.08392-276461, ಮೊ.9480803049 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.