ಧಾರ್ಮಿಕ ತಳಹದಿಯಲ್ಲಿ ಲೌಕಿಕ ಬದುಕು ರೂಪಿಸಿಕೊಳ್ಳಬೇಕು: ಚನ್ನಮಲ್ಲಿಕಾಜ್ರುನ ಶ್ರೀ

ಲೋಕದರ್ಶನವರದಿ

ಬ್ಯಾಡಗಿ: ವ್ಯಕ್ತಿಯು ಧಾಮರ್ಿಕ ತಳಹದಿಯಲ್ಲಿ ಲೌಕಿಕ ಬದುಕನ್ನು ರೂಪಿಸಿಕೊಳ್ಳಬೇಕು. ಸಂಸ್ಕಾರವಿದ್ದರೆ ಸದ್ಗುಣ, ಇಲ್ಲವಾದರೆ ದುರ್ಗಣಗಳು ಬೆಳೆಯುತ್ತೇವೆ. ಸುಖ ಶಾಂತಿದಾಯಕ ಬದುಕಿಗೆ ಸಂಸ್ಕಾರದ ಅವಶ್ಯಕತೆ ಬಹಳಷ್ಟಿದೆ ಎಂದು ಬಣ್ಣದ ಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯ ಶ್ರೀಗಳು ಹೇಳಿದರು.

   ತಾಲೂಕಿನ ಶಿಡೆನೂರ ಗ್ರಾಮದಲ್ಲಿ ನೂತನ ಪರಮೇಶ್ವರ ದೇವರ ಮೂತರ್ಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಭಾಗವಹಿಸಿ ಆಶೀರ್ವಚನ ನೀಡಿದರು.

   ಸಂಸ್ಕಾರದ ಕೊರತೆಯಿಂದ ಮನುಷ್ಯ ಜೀವನ ಅಧಃಪತನದತ್ತ ಹೊರಟಿದೆ. ಮಾನಸಿಕ ಸ್ಥಿರತೆ ಸಮಾಧಾನದ ಕಳೆದುಕೊಳ್ಳುವಂತಾಗಿದೆ. ಎಲ್ಲ ಧರ್ಮಗಳಲ್ಲಿ ಧಾಮರ್ಿಕ ಸಂಸ್ಕಾರಗಳನ್ನು ಬೇಳೆಸಿಕೊಳ್ಳಬೇಕು. ಪ್ರಾಪಂಚಿಕ ಲಾಭಗಳಿಗಾಗಿ ನಮ್ಮಲ್ಲಿರುವ ಪರಮೋಚ್ಚ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದು ಅಲ್ಪ ಸುಖಕ್ಕಾಗಿ ಏನೆಲ್ಲಾ ಕೃತ್ಯಗಳನ್ನು ಮಾಡುತ್ತಿದ್ದೇವೆ, ಇದರಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದ್ದು ಪ್ರಾಮಾಣಿಕರ ಕೊರತೆಯಿಂದ ಸಮಾಜದ ನೆಮ್ಮದಿ ಹಾಳಾಗುತ್ತಿದೆ. ಸ್ವಾಸ್ಥ ಸಮಾಜ ನಿಮರ್ಾಣ ಮಾಡಲೂ ಸಮಾಜದಲ್ಲಿ ಧಾಮರ್ಿಕ ಕೈಂಕರ್ಯಗಳನ್ನು ಕೈಗೊಂಡಾಗ ಶಾಂತಿ, ನೆಮ್ಮದಿಯಂತಹ ವಾತಾವರಣ ನಿಮರ್ಾಣವಾಗುತ್ತದೆ. ಪುರಾತನ ಕಾಲದಿಂದಲೂ ನಡೆದು ಬಂದ ಪುರಾಣ ಪ್ರವಚನಗಳು, ಶರಣರ ಹಾಗೂ ದಾರ್ಶನಿಕರ ಸಂದೇಶಗಳನ್ನು ಈ ಮೂಲಕ ಸಾರುವ ವ್ಯವಸ್ಥೆ ಇದಾಗಿದೆ. ಸ್ವಾಸ್ಥ ಸಮಾಜ ನಿಮರ್ಾಣ ಮಾಡಲೂ ಸಮಾಜದಲ್ಲಿ ಧಾಮರ್ಿಕ ಕೈಂಕರ್ಯಗಳನ್ನು ಕೈಗೊಂಡಾಗ ಶಾಂತಿ, ನೆಮ್ಮದಿಯಂತಹ ವಾತಾವರಣ ನಿಮರ್ಾಣವಾಗುತ್ತದೆ ಎಂದರು.

           ಶಾಸಕ ನೆಹರು ಓಲೇಕಾರ ಮಾತನಾಡಿ, ಆಧುನಿಕ ಜಂಜಾಟದಲ್ಲಿ ಧಾಮರ್ಿಕ ಕಾರ್ಯಕ್ರಮಗಳಿಂದ ಜನ ವಿಮುಖರಾಗುತ್ತಿದ್ದು, ಧರ್ಮಭೋದನೆ ತಿಳಿಯುವ ಗೋಜಿಗೆ ಹೋಗುತ್ತಿಲ್ಲ, ಹಾಗಾಗಿ ಸಾಮಾಜಿಕ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗುತ್ತಿದೆ. ಇಂದು ಧರ್ಮಚಟುವಟಿಕೆಗಳಿಗೆ ಹೆಚ್ಚು ಒತ್ತುನೀಡುವ ಅವಶ್ಯಕತೆ ಇದೆ. ಕಾಯಕದಲ್ಲಿ ನಾವು ದೈವತ್ವವನ್ನು ಕಾಣುವುದನ್ನು ರೂಡಿಸಿಕೊಳ್ಳಬೇಕು. ಪ್ರಾಮಾಣಿಕ, ನಿಸ್ವಾರ್ಥ ಹಾಗೂ ತತ್ವಸಿದ್ದಾಂತ ಜೀವನ ಅಳವಡಿಕೊಳ್ಳಬೇಕು. ಎಳೆಯ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಪರಂಪರೆಗಳನ್ನು ಬಿತ್ತುವುದು ಅಗತ್ಯವಾಗಿದೆ. ಈ ಊರಿನ ಮಗನಾಗಿ ಗ್ರಾಮದ ಹಿತ ಕಾಪಾಡಲು ಸದಾ ಸಿದ್ಧನಾಗಿದ್ದೆನೆ ಎಂದರು.

           ಈ ಸಂದರ್ಭದಲ್ಲಿ ಮಂಜುನಾಥ ಓಲೇಕಾರ, ಎಚ್.ಬಿ.ಲಿಂಗಯ್ಯ, ವಿರೇಶ ಪಾಟೀಲ, ಸುಭಾಸ ಓಲೇಕಾರ, ಮಂಜಪ್ಪ ಕಿತ್ತೂರ, ರಮೇಶ ಕಾಕೋಳ, ಪಕ್ಕೀರಗೌಡ ದೊಡ್ಡಬಸಪ್ಪನರ, ಪಿ.ಬಿ.ಆರಿಕಟ್ಟಿ, ದೇವರಾಜ ಓಲೇಕಾರ, ರಾಜು ಗಾಣೇಗೆರ, ಅಲ್ತಾಪ ಬೆನ್ನೂರ, ಮಲ್ಲಿಕಾಜರ್ುನ ಕೊಪ್ಪದಮಠ, ವಿರಯ್ಯ ಕೊಪ್ಪದಮಠ, ಕೋಟೇಶ ಓಲೇಕಾರ, ಪರಮೇಶಪ್ಪ ಹೊಸುರ ಸೇರಿದಂತೆ ಇನ್ನಿತರರಿದ್ದರು.