ಕ್ಯಾನ್ಸರ್ ನಿರ್ಮೂಲನೆಗೆ ವಿಶ್ವವೇ ಒಂದಾಗಿ ಹೋರಾಡುವ ಅವಶ್ಯಕತೆ ಇದೆ: ಡಾ. ರವೀಂದ್ರ ಜೋಶಿ

The world needs to fight as one to eradicate cancer: Dr. Rabindra Joshi

ಕ್ಯಾನ್ಸರ್ ನಿರ್ಮೂಲನೆಗೆ ವಿಶ್ವವೇ ಒಂದಾಗಿ ಹೋರಾಡುವ ಅವಶ್ಯಕತೆ ಇದೆ: ಡಾ. ರವೀಂದ್ರ ಜೋಶಿ 

ಕಾಗವಾಡ  12 : ಯುನೈಟೆಡ್ ಬೈ ಯುನಿಕ್ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ, ಕ್ಯಾನ್ಸರ್ ಅನ್ನು ಸೋಲಿಸಬಹುದೆಂಬ ಧ್ಯೇಯದೊಂದಿಗೆ ಅಂತರರಾಷ್ಟ್ರೀಯ ಕ್ಯಾನ್ಸರ್ ವಿರುದ್ಧ ಹೋರಾಟದ ಒಕ್ಕೂಟ ಪ್ರತಿ ವರ್ಷ ಫೆ. 4 ರಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗತ್ತಿದೆ ಎಂದು ಡಾ. ರವೀಂದ್ರ ಜೋಶಿ ತಿಳಿಸಿದ್ದಾರೆ. ಅವರು ಇತ್ತಿಚಿಗೆ ಮಹಾರಾಷ್ಟ್ರದ ಮಿರಜ್ ಪಟ್ಟಣದ ಡಾ. ಜೋಶಿಜ್ ಕ್ಯಾನ್ಸರ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನದ ನಿಮಿತ್ಯವಾಗಿ ಕ್ಯಾನ್ಸರ್ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಉಪಚಾರದ ಕುರಿತು ಮಾಹಿತಿ ನೀಡುತ್ತ ಮಾತನಾಡುತ್ತಿದ್ದರು.  ಇದೇ ವೇಳೆ ಆಸ್ಪತ್ರೆಯ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ ಪ್ರಸ್ತುತ ಪಡಿಸಿ, ಕ್ಯಾನ್ಸರ್ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.  ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ಡಾ. ಶಿವಯೋಗಿ ಬಿಜಾಪುರೆ, ಚಂದ್ರಕಾಂತ ಕಿತ್ತೂರೆ, ಡಾ. ಮಿಲಿಂದ್ ಜೋಶಿ ಸೇರಿದಂತೆ ಆಸ್ಪತ್ರೆಯ ರೋಗಿಗಳ ಸಂಬಂಧಿಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.