ಸಂಬರಗಿ 11: ಚುನಾವಣೆ ಬಂದಾಗ ರಾಜಕೀಯ ಮಾಡಬೇಕು, ಚುನಾವಣೆ ಮುಕ್ತಾಯವಾದಾಗ ರಾಜಕೀಯ ವೈರತ್ವ ಮುಕ್ತಾಯಗೊಳಿಸಿ ಕ್ಷೇತ್ರದ ಅಭಿವೃದ್ದಿಯಲ್ಲಿ ಹೆಚ್ಚು ಒತ್ತು ನೀಡಬೇಕು, ತಾವು ಮಾಡಿದ ಕೆಲಸವನ್ನು ರೈತರ ಹೃದಯದಲ್ಲಿ ವಾಸವಾಗಬೇಕು, ತಮಗೆ ಸಿಕ್ಕಿರುವ ಹುದ್ದೆ ಶಾಶ್ವತ ಅಲ್ಲ, ನಾವು ರೈತರಿಗಾಗಿ ಮಾಡಿದ ಕೆಲಸವನ್ನು ಶಾಶ್ವತ ಉಳಿಯುತ್ತವೆ. ರೈತರು ಆ ಕೆಲಸ ನೋಡಿ ನಮ್ಮನ್ನು ಗೌರವಿಸುತ್ತಾರೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರು, ಲಕ್ಷ್ಮಣ ಸವದಿ ಹೇಳಿದರು.
ಮದಭಾಂವಿ ಗ್ರಾಮದಲ್ಲಿ ವಿವಿಧ ಉದ್ದೇಶಗಳ ಸಹಕಾರಿ ಸಂಘ ವತಿಯಿಂದ ರೈತರಿಗೆ ಸಾಲ ವಿತರಿಸಿ ಮಾತನಾಡಿ ಅವರು ನಾವು ಆಯ್ಕೆಯಾದ ನಂತರ ಅಭಿವೃದ್ಧಿ ಕೆಲಸದ ಯೋಜನೆ ಮಾಡಬೇಕು. ರೈತರು ಸುಖವಾಗಿ ಇದ್ದರೆ ನಾವು ಸುಖವಾಗಿ ಇರುತ್ತೇವೆ. ರೈತರ ಜಮೀನಿಗೆ ನೀರು, ರಸ್ತೆ, ವಿದ್ಯುತ್ ಅವಶ್ಯಕತೆ ಇದ್ದು ಇವುಗಳನ್ನು ನಾವು ಪೂರೈಸಿದರೆ ರೈತರು ಸ್ವಾವಲಂಬಿಯಾಗಿ ನೈಮ್ಮದಿಯಾಗಿ ಜೀವನ ಸಾಗಿಸುತ್ತಾನೆ. ನಾನು ಮಾಡಿದ ಅಭಿವೃದ್ಧಿಗೆ ಜನ ಮೆಚ್ಚಿಗೆ ವ್ಯಕ್ತಪಡಿಸಿ 30 ವರ್ಷಗಳಿಂದ ನನ್ನನ್ನು ಶಾಶಕನನ್ನಾಗಿ ಮಾಡಿದ್ದಾರೆ ಹೀಗಾಗಿ ಅವರ ಋಣ ಮರಳಿಸಲು ನನಗೆ ಅಸಾಧ್ಯವಾಗಿದೆ. ಆದರೂ ಮತದಾರರ ಋಣವನ್ನು ಅಲ್ಪ-ಸ್ವಲ್ಪವಾದರು ತೀರಿಸಲು ಪ್ರಯತ್ನಿಸುತ್ತೇನೆ ಅಂತಾ ಹೇಳಿದರು.
ಈ ವೇಳೆ ಶಾಸಕ ರಾಜು ಕಾಗೆ ಮಾತನಾಡಿ ಖೀಳೇಗಾಂವ-ಬಸವೇಶ್ವರ ಏತ ನೀರಾವರಿ 2 ನೇ ಹಂತದ ಕಾಮಗಾರಿ ಪ್ರಾರಂಭಿಸಿ ಶಿಘ್ರದಲ್ಲಿ ಮುಕ್ತಾಯಗೊಳಿಸಿ ಹಾಗೂ ಅಮ್ಮಾಜೇಶ್ವರ ಏತ ನೀರಾವರಿ ಪೂರ್ಣಗೊಂಡ ನಂತರ ಎರಡು ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯಾ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇವರಿಂದ ಉದ್ಘಾಟನೆ ಮಾಡಲಾಗುವುದೆಂದು ಹೇಳಿದರು ಹಾಗೂ ಗಡಿ ಭಾಗದ ರೈತರು ಹಸಿರುಕ್ರಾಂತಿಗೆ ನಾಂದಿಹಾಡಿ ರೈತರು ನೈಮ್ಮದಿಯಾಗಿ ಜೀವನ ಸಾಗಿಸಲು ಸಾದ್ಯವಾಗುವುದು.
ಈ ವೇಳೆ ಜಿಲ್ಲಾ ಮದ್ಯವರ್ತಿ ಬ್ಯಾಂಕದ ಅಥಣಿ ಶಾಖೆಯ ನಿಯಂತ್ರಣ ಅಧಿಕಾರಿ ಶಂಕರ ನಂದೇಶ್ವರ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವಿನಾಯಕ ಬಾಗಡಿ, ಗ್ರಾಮ ಪಂಚಾಯತ ಅಧ್ಯಕ್ಷರು ಮಹಾದೇವ ಕೋರೆ, ಸಹಕಾರಿ ಸಂಘದ ಅಧ್ಯಕ್ಷರಾದ ನಿಜಗುಣಿ ಮಗದುಮ್, ಸಂಘದ ನಿರ್ದೆಶಕರಾದ, ಅಶೋಕ ಪೂಜಾರಿ,ಅರ್ಜುನ ಇಬ್ರಾಹಿಂಪೂರ, ಅಮಸಿದ್ದ ರೂಗಿ, ಭೀಮು ಚೌಗಲಾ, ಪ್ರಮೀಳಾ ಬಾಬು ಮೆಂಡಿಗೇರಿ, ಅಶೋಕ ಸೂರ್ಯವಂಶಿ, ಮಲ್ಲಪ್ಪ ದೇವಕತ್ತೆ, ವಿಠ್ಠಲ ಅವಳೆ, ಸಿದರಾಯ ಪತಂಗೆ, ಭೀಮಗೌಡಾ ನಾಯಕ, ಅಣ್ಣಾಸಾಬ ಮೆಂಡಿಗೇರಿ, ವಿಲಾಸ ಟೋಣೆ, ಅಣ್ಣಪ್ಪ ಮಿಸಾಳ, ತುಕಾರಾಮ ಸೇಳಕೆ, ರಾಜೇಂದ್ರ ಪಾಟೀಲ, ಸಿದ್ದನಾಥ ಅವಳೆಕರ, ಪ್ರಕಾಶ ಖುಟ್ಟೆ, ರಾವಸಾಬ ಕಾಳೇಲಿ ಸೇರಿದಂತ ಸುತ್ತಮುತ್ತಲಿನ ಗ್ರಾಮದ ಸಂಘದ ಸದಸ್ಯರು, ರೈತರು ಉಪಸ್ಥಿತರಿದ್ದರು.