ದೇಶ ಸೇವೆ ಮಾಡುವ ಸೈನಿಕರ ಕಾರ್ಯ ಶ್ಲಾಘನೀಯ: ಜುನಗೊಂಡ
The work of soldiers serving the country is commendable: Junagonda
ದೇಶ ಸೇವೆ ಮಾಡುವ ಸೈನಿಕರ ಕಾರ್ಯ ಶ್ಲಾಘನೀಯ: ಜುನಗೊಂಡ
ದೇವರಹಿಪ್ಪರಗಿ 09: ಮಳೆ, ಬಿಸಿಲು ಹಾಗೂ ಚಳಿಯನ್ನು ಲೆಕ್ಕಿಸದೇ ದೇಶ ಕಾಯುವ ನಮ್ಮ ವೀರ ಯೋಧರ ಸೇವೆ ಶ್ಲಾಘನೀಯ ಎಂದು ವಿಜಯಪುರದ ಖ್ಯಾತ ವಾಗ್ಮಿಗಳಾದ ಮಂಜುನಾಥ ಜುನಗೊಂಡ ಹೇಳಿದರು.
ತಾಲೂಕಿನ ಪಡಗಾನೂರ ಗ್ರಾಮದ ನಿವೃತ್ತ ಯೋಧ ಮಲ್ಲು ಬನಗೊಂಡ ಅವರು ಸುಮಾರು 17 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಬುದುವಾರದಂದು ಸ್ವಗ್ರಾಮಕ್ಕೆ ಆಗಮಿಸಿದ ಅಭಿನಂದನ ಕಾರ್ಯಕ್ರಮದ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು, ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಕುಟುಂಬದ ಬಗ್ಗೆ ಚಿಂತಿಸದೇ ದೇಶ ರಕ್ಷಿಸುವ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯ. ಸೇನೆಯಲ್ಲಿನ ಸುದೀರ್ಘ ಭಾರತಾಂಭೆ ಸೇವೆಗೈದಿದ್ದಕ್ಕೆ ಇಂದು ಗೆಳೆಯರ ಬಳಗ ಹಾಗೂ ವಿವಿಧ ಸಂಘಟನೆಗಳಿಂದ ಗೌರವ ಸಿಕ್ಕಂತಾಗಿದೆ. ಮಲ್ಲು ಬನಗೊಂಡ ಅವರಂತೆ ಈ ಗ್ರಾಮದಲ್ಲಿ ನೂರಾರು ಸಂಖ್ಯೆ ಯುವಕರು ಸೈನ್ಯವನ್ನು ಸೇರುವಂತಾಗಲಿ ಎಂದು ಕಾರ್ಗಿಲ್ ಯುದ್ಧ ಹಾಗೂ ಆಪರೇಷನ್ ಸಿಂಧೂರದ ಸಂದರ್ಭದಲ್ಲಿ ಸೈನಿಕರ ಧೈರ್ಯ ಸಾಹಸದಿಂದ ದೇಶವನ್ನು ರಕ್ಷಿಸುತ್ತಿರುವ ಸೈನಿಕರು ನಮ್ಮ ದೇಶದ ನಿಜವಾದ ಬೆನ್ನೆಲುಬಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಮುಂಚೆ ದೇವರಹಿಪ್ಪರಗಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡು ತೆರೆದ ಜಿಪಿನಲ್ಲಿ ಗ್ರಾಮಕ್ಕೆ ವಿವಿಧ ಸಂಘಟನೆಗಳ ಮುಖಂಡರು. ಮಾಜಿ ಸೈನಿಕರು ತೆರೆದ ಜೀಪಿನಲ್ಲಿ ನೂರಾರು ಯುವಕರು ಗ್ರಾಮಸ್ಥರು ಬೈಕ್ ರ್ಯಾಲಿ ಮುಖಾಂತರ ಸ್ವಾಗತಿಸಿ ಸಕಲ ವಾದ್ಯ ವೈಭವಗಳೊಂದಿಗೆ. ಅದ್ದೂರಿಯಾಗಿ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಸೋಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ವೇ.ಮೂ ಅಯ್ಯಪ್ಪ ಸ್ವಾಮಿಗಳು ಹಿರೇಮಠ ವಹಿಸಿದ್ದರು.ಇದೇ ಸಂದರ್ಭದಲ್ಲಿ ವಿ.ಡಿ.ಸಿ. ಸಿ. ಬ್ಯಾಂಕ್ ನಿರ್ದೇಶಕರಾದ ಹಣಮಂತ್ರಾಯಗೌಡ ಪಾಟೀಲ, ಗ್ರಾ.ಪಂ. ಅಧ್ಯಕ್ಷರ ಪ್ರತಿನಿಧಿ ಗುರುರಾಜ ಆಕಳವಾಡಿ, ಉಪಾಧ್ಯಕ್ಷರ ಪ್ರತಿನಿಧಿ ಸುಭಾಸ ಹೊಸಟ್ಟಿ, ತಾಲೂಕ ಕಾನಿಪ ಅಧ್ಯಕ್ಷ ಸಂಗಮೇಶ ಉತ್ನಾಳ, ಮುಖಂಡರುಗಳಾದ ಎಲ್.ಕೆ.ರಾಮಪ್ಪ, ಬೀರು ಹಳ್ಳಿ. ಸಿದ್ದು ಬೆಳ್ಳಿ.ನಿಂಗನಗೌಡ ಪಾಟೀಲ, ಜಟ್ಟೆಪ್ಪ ಪೂಜಾರಿ, ಕರೆಪ್ಪ ಪೂಜಾರಿ, ಭೂತಾಳಿ ಸಿದ್ದ ಅಯ್ಯಪ್ಪ ಸಾತಿಹಾಳ, ಸೋಮು ಪತ್ತಾರ, ಸೋಮನಗೌಡ ಪಾಟೀಲ, ಶಂಕರ ಸಾತಿಹಾಳ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲು ಬನಗೊಂಡ, ಮಾಯಪ್ಪ ಹೊಸಟ್ಟಿ. ಭಾರತೀಯ ಸೈನ್ಯದಲ್ಲಿ ಸೇವೆಯಲ್ಲಿರುವ ಗ್ರಾಮದ ಯೋಧರಾದ ರೇವಣಸಿದ್ಧ ಸಾತಿಹಾಳ. ಮುತ್ತು ಸೇರಿಕಾರ.ಬಸು ಹೊಸಟ್ಟಿ. ಬೀರು ಹುಣಚ್ಯಾಳ, ಹಣಮಂತ ಮುರಾಳ, ದಯಾನಂದ ಆಕಳವಾಡಿ, ಸೋಮಪ್ಪ ಬನಗೊಂಡ. ಸುರೇಶ ವಿಜಾಪುರ. ರಾಜು ಚಿಗರಿ.ಕೆಂಚಪ್ಪ ಬನಗೊಂಡ, ಸಾಯಿಬಣ್ಣ ಕೊಟಾರಗಸ್ತಿ, ಸೋಮು ಹುಗ್ಗಿ, ಪ್ರಶಾಂತ ಹಳ್ಳಿ, ವಿಠ್ಠಲ ಹಳ್ಳಿ, ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಯುವಕರು, ಗೆಳೆಯರ ಬಳಗದ ಸದಸ್ಯರು, ತಾಲೂಕಿನ ವಿವಿಧ ಕಡೆಯಿಂದ ಆಗಮಿಸಿದ ನಿವೃತ್ತ ಸೈನಿಕರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ತಂದರು. ಕಾರ್ಯಕ್ರಮದ ನಿರೂಪಣೆಯನ್ನು ಸುರೇಶ ವಗ್ಗರ ನಿರ್ವಹಿಸಿದರು. ಮಾಳು ಮಾಸ್ತರ ಮುರಾಳ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 