ಲೋಕದರ್ಶನ ವರದಿ
ಸಂಬರಗಿ 13: ತಾಂವಶಿ ಕಲ್ಲೂತಿ ರಸ್ತೆಯ ಬದಿಗೆ ಇರುವ ಕೆರೆಯ ಹುಳ ತುಂಬುವ ಉದ್ಯೋಗ ಖಾತ್ರಿ ಯೊಜನೆಯ ಕಾಮಗಾರಿ ಪ್ರಾರಂಭವಿದ್ದು ಸುಮಾರು 20 ಜನ ಕೆಲಸ ನಿರ್ವಹಿಸುತ್ತಿದ್ದಾರೆ ಕೆರೆ ಹುಳ ಎತ್ತುವದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ರೈತರಿಗೆ ಅನುಕೂಲವಾಗುತ್ತದೆ.
ಬರಗಾಲಕ್ಕೆ ತುತ್ತಾಗಿ ಬಳಲುತ್ತಿರುವ ಗಡಿ ಭಾಗದ 33 ಗ್ರಾಮದಲ್ಲಿ ಕೂಲಿಗಾರರು ಮಹಾರಾಷ್ಟ್ರಕ್ಕೆ ಗೂಳೆ ಹೊಗುತ್ತಿದ್ದಾರೆ. ತಾಲೂಕಾ ಪಂಚಾಯತ ಕಾರ್ಯ ನಿವರ್ಾಹಕ ಅಧಿಕಾರಿಗಳು ರವಿ ಬಂಗಾರೇಪ್ಪಣ್ಣವರ ಪ್ರತಿ ಗ್ರಾಮಕ್ಕೆ ಭೆಟ್ಟಿ ನೀಡಿ ಗ್ರಾಮ ಪಂಚಾಯತ ವತಿಯಿಂದ ಕೂಲಿಗಾರರ ಸವರ್ೇ ಮಾಡಿ ಪ್ರತಿಯೊಬ್ಬ ಕೂಲಿಗಾರರಿಗೆ ಜೋಬ್ ಕಾರ್ಡ ತಯಾರಿಸಿ ಪ್ರತಿ ಗ್ರಾಮಗಲ್ಲಿ ಕೂಲಿಗಾರಿಗೆ ಕೆಲಸ ನೀಡಿ ಗೂಳೆ ಹೋಗುವುದನ್ನು ತಡೆಗಟ್ಟಿಸಿದರು. ಈ ಭಾಗದ ಗ್ರಾಮದಲ್ಲಿ ಎಲ್ಲಾ ಜನರಿಗೆ ಕೆಲಸ ನೀಡಿದ್ದಾರೆ ಅಗ್ರಾಣಿ ನದಿ ಸ್ವಚ್ಛತ್ತಾ ಕಾಮಗಾರಿ, ಬಾಂದಾರ ಹುಳ ಎತ್ತುವುದು, ಕೆರೆ ಹುಳ ಎತ್ತುವುದು ಕಾಮಗಾರಿ ಕೈಗೊಂಡು ರೈತರಿಗೆ ಅನುಕೂಲ ಮಾಡಿದ್ದಾರೆ. ತಾಂವಶಿ ಗ್ರಾಮದ ಉದ್ಯೋಗ ಖಾತ್ರಿ ಕಾಮಗಾರಿಗೆ ಅಥಣಿ ಪುರಸಭೆ ಅಧ್ಯಕ್ಷ ರಾವಸಾಬ ಐಹೊಳೆ, ಸಂಬರಗಿ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಬಂಗಾರೆವ್ವ ಐಹೊಳೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದರು. ಈ ವೇಳೆ ರಾಜೇಶ ಕುಂಬಾರ, ಆನಂದಾ ಕೋಳಿ, ಪಾಂಡುರಂಗ ಕಾಂಬಳೆ, ಸೇರಿದ ಅನೇಕ ಗಣ್ಯರು ಹಾಜರಿದ್ದರು.