ಲೋಕದರ್ಶನವರದಿ
ಶಿಗ್ಗಾವಿ೨೪ : ಪ್ರತಿಯೊಂದು ಉದ್ಯೋಗವೂ ಅದರದೇ ಆದ ಗೌರವ ಗುಣವನ್ನು ಹೊಂದಿದೆ, ಯಾವ ಕೆಲಸವೂ ಕೀಳಲ್ಲ, ಪೌರಕಾಮರ್ಿಕರ ಕೆಲಸವನ್ನು ಎಂದೂ ಕೀಳಾಗಿ ಕಾಣಬಾರದೆಂದು ಸವಣೂರ ನೂತನ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹೇಳಿದರು.
ಪಟ್ಟಣದ ಪುರಸಭೆಯ ನೂತನ ಕಟ್ಟಡದಲ್ಲಿ ಪೌರಕಾಮರ್ಿಕರ ದಿನಾಚರಣೆಯ ಪ್ರಯುಕ್ತ ಪೌರಕಾಮರ್ಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಪೌರಕಾಮರ್ಿಕರ ಹಿತಾಸಕ್ತಿ ಹೆಚ್ಚಿಸಬೇಕು, ಅವರಿಗೆ ಬೇಕಾದ ಮೂಲಭೂತ ಸವಲತ್ತುಗಳನ್ನು ನೀಡುವ ವಾತಾವರಣ ನಿಮರ್ಾಣ ಮಾಡಬೇಕು, ಜೊತೆಗೆ ಸಾರ್ವಜನಿಕರೂ ಸಹಿತ ಸಹಕಾರ ಮನೋಭಾವದಿಂದ ಪೌರಕಾಮರ್ಿಕರನ್ನು ಕಂಡು ಅವರವರ ಜವಾಬ್ದಾರಿಯನ್ನು ಪ್ರತಿಯೋಬ್ಬರೂ ಅರಿತು ಪೌರಕಾಮರ್ಿಕರ ಕಾರ್ಯಕ್ಕೆ ಸಹಕರಿಸಬೇಕು ಎಂದರು.
ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ಸಾನಿದ್ಯವಹಿಸಿ ಮಾತನಾಡಿ ಬಸವಾದಿ ಶರಣರ ಧ್ಯೇಯದಂತೆ ಮಾಡುವ ಕಾಯಕದಲ್ಲಿ ನಿಷ್ಟೆ ಕಾಣಬೇಕಿದೆ.
ಕಾಯಕವೇ ಕೈಲಾಸ ಎಂಬಂತೆ ಕಾಯಕದಿಂದ ಮತ್ತು ಕಾಯಕ ನಿಷ್ಟೆಯಿಂದ ಮನುಷ್ಯ ಗುರುತಿಸಬೇಕು ಅಂದಾಗ ಅವನ ಕಾರ್ಯಕ್ಕೆ ಗೌರವ ಬರುತ್ತೆ ಪೌರಕಾಮರ್ಿಕರ ಕಾರ್ಯ ಅತೀ ಉತ್ತಮ ಕಾರ್ಯ, ಕೆಲವರು ಅವರವರ ಮನಸ್ಸುಗಳನ್ನೆ ಸ್ವಚ್ಚವಾಗಿಟ್ಟುಕೊಳ್ಳಲಾಗದ ಸ್ಥಿತಿಯಲ್ಲಿರುವಾಗ ಪೌರಕಾಮರ್ಿಕರು ಇಡಿ ಪಟ್ಟಣವನ್ನೆ ಸ್ವಚ್ಚವಾಗಿಡಲು ದಿನಂಪ್ರತಿ ಪ್ರಯತ್ನಿಸುತ್ತಾರೆ ಅವರನ್ನೂ ಸಹಿತ ಗೌರವದಿಂದ ಕಾಣಿ ಎಂದು ಕಿವಿ ಮಾತು ಹೇಳಿದರು.
ಪುರಸಭೆ ಪರಿಸರ ಅಭಿಯಂತರರಾದ ಎಫ್ ವಾಯ್ ಕಳಸರೆಡ್ಡಿ, ಕಾಮರ್ಿರ ಸಂಘದ ಫಕ್ಕೀರೇಶ ಶಿಗ್ಗಾವಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪೌರಕಾಮರ್ಿಕರನ್ನು ಸನ್ಮಾನಿಸಲಾಯಿತು, ಪುರಸಭೆ ಮುಖ್ಯಾಧಿಕಾರಿ ಪಿ ಕೆ ಗುಡದಾರಿ, ಸಿಬ್ಬಂದಿಗಳಾದ ಮಾಲತೇಶ ತಿಗಳಣ್ಣವರ, ಮಾಲತೇಶ ಮೋಟೆಬೆನ್ನೂರ, ಶ್ರೀಮತಿ ಶೈಲಜಾ ಪಾಟೀಲ, ಶೃತಿ ವಾಲಿಕಾರ, ವಿ ಎಸ್ ಪಾಟೀಲ, ಸತೀಶ ತಳವಾರ, ಗಿರೀಶ ಹರವಿ, ಎಂ ಐ ಅಗಡಿ ಸೇರಿದಂತೆ ಪುರಸಭೆ ಸರ್ವ ಸಿಬ್ಬಂದಿ ಹಾಗೂ ಪುರಸಭೆ ಎಲ್ಲ ಪೌರಕಾಮರ್ಿಕರು ಇದ್ದರು.