ಲೋಕದರ್ಶನ ವರದಿ
ಯಮಕನಮರಡಿ 10: ಹಳ್ಳಿಗಳು ಉದ್ಧಾರವಾಗಬೇಕೆನ್ನುವದೇ ಮಹಾತ್ಮಾ ಗಾಂಧೀಜಿಯವರು ಕಂಡ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಪರಮ ಡಾ. ವೀರೆಂದ್ರ ಡಿ ಹೆಗಡೆಯವರು ಮತ್ತು ಹೇಮಾವತಿ ಹೆಗಡೆಯವರ ಮಾರ್ಗದರ್ಶನದಲ್ಲಿ ಇಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಸಂಸ್ಥೆಯು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದು ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯಾ ಮಹಾಸ್ವಾಮಿಗಳು ಹೇಳಿದರು. ಅವರು ರವಿವಾರ ದಿ 08 ರಂದು ಘೋಡಗೇರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಹುಕ್ಕೇರಿ ಇವರು ಆಯೋಜಿಸಿದ ಹಿಡಕಲ್ ವಲಯದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಕುಟುಂಬದ ಆಥರ್ಿಕ ವ್ಯವಸ್ಥೆಯನ್ನು ಸರಿದೂಗಿಸುವ ಕಖಾರ್ಯವನ್ನು ಮಹಿಳೆಯರು ಮಾಡುತ್ತಿದ್ದು ಸಂಸ್ಥೆಯು ಅವರಿಗೆ ಆಥರ್ಿಕ ಸಹಾಯ ನೀಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಎಂದು ಮಲ್ಲಯ್ಯಾ ಮಹಾಸ್ವಾಮಿಗಳು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಕ್ಕೇರಿ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ರಾಚಯ್ಯ ಹಿರೇಮಠ ಮಾತನಾಡಿ ಇಂದು ಪ್ರತಿಯೊಂದು ಹಳ್ಳ ಹಳ್ಳಿಗಳಲ್ಲಿಯೂ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯು ಬಡಜನರ ಏಳಿಗೆಗೆ ರೈತರ ಅಭೀವೃದ್ದಿಗೆ ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಅವರಿಗೆ ಆಥರ್ಿಕ ಸಹಾಯ ಕಲ್ಪಿಸಿದೆ ಮಹಿಳೆಯರು ಈ ಸಂಸ್ಥೆಯ ಯೋಜನೆಗಳ ಪ್ರಯೋಜನ ಪಡೆದುಕೊಂಡು ಸಬಲೀಕರಣಗೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಹೇಳಿದರು. ಹುಕ್ಕೇರಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆಯ ಯೋಜನಾಧಿಕಾರಿ ಅನಿತಾ ಬಿ ಸಮಾರಂಭವನ್ನು ಉದ್ಘಾಟಿಸಿದರು. ಹಿಡಕಲ್ ಡ್ಯಾಮ್ ಎ.ಎಸ್.ಐ ಜಯಶ್ರೀ ಜನಮಟ್ಟಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘೋಡಗೇರಿ ಗ್ರಾ.ಪಂ ಅಧ್ಯಕ್ಷೆ ಶಾರದಾ ಪೂಜೇರಿ ವಹಿಸಿದ್ದರು. ಸಮಾರಂಭದಲ್ಲಿ ಜಿ.ಪಂ ಸದಸ್ಯ ಅಜರ್ುನ ಯಲ್ಲನಾಯಿಕ ಪಾಟೀಲ, ಘೋಡಗೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಲಿಕಾಜರ್ುನ ಅಂಕಲಗಿ, ಗ್ರಾ.ಪಂ ಸದಸ್ಯ ಶಿವಕುಕಮಾರ ಮುಗಳಿ, ಜಿ.ಎಮ್.ಕಡೆಲಿ ಉಪಸ್ಥಿತರಿದ್ದರು ಮೇಲ್ವಿಚಾರಕಿ ಶಾಂತಾ ಸ್ವಾಗತಿಸಿ ಸಾಧನಾ ವರದಿ ವಾಚಿಸಿದರು. ಹುಕ್ಕೇರಿ ತಾಲೂಕಾ ಸಮನ್ವಯ ಅಧಿಕಾರಿ ಶ್ರೀದೇವಿ ಎಸ್. ಕಾಳಿಸಿಂಗೆ ಕಾರ್ಯಕ್ರಮ ನಿರೂಪಿಸಿದರು. ಕೆಂಪಣ್ಣಾ ಗಿರೆಪ್ಪಗೋಳ, ಮಹಾದೇವಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಘೋಡಗೇರಿ ಎ, ಘೋಡಗೇರಿ ಬಿ, ಶಿಂಧಿಹಟ್ಟಿ, ಬೇಣಿವಾಡ, ಅವರಗೋಳ, ಹಿಡಕಲ್, ಸುಲ್ತಾನಪೂರ, ಮದಮಕನಹಾಳ, ಪರಕನಹಟ್ಟಿ ಎ, ಬಿ, ಮತ್ತು ಇಂಗಳಿ ಕಾರ್ಯಕ್ಷೇತ್ರಗಳ ಒಕ್ಕೂಟ ಪ್ರತಿನಿಧಿಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.