ಲೋಕದರ್ಶನ ವರದಿ
ಗೋಕಾಕ: ನೆರೆ ಸಂತ್ರಸ್ತರ ಕಷ್ಟಕ್ಕೆ ಸಹಾಯ ಮಾಡಿದ ಕರವೇ ಗಜಸೇನೆ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಪ್ರೋ: ಚಂದ್ರಶೇಖರ ಅಕ್ಕಿ ಹೇಳಿದರು.
ಅವರು ನಗರದ ಸಮುದಾಯ ಭವನದಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಗಜಸೇನೆ ಆಶ್ರಯದಲ್ಲಿ ಜರುಗಿದ ಕನರ್ಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕನ್ನಡಪರ ಸಂಘಟನೆಗಳಲ್ಲಿ ಕರವೇ ಗಜಸೇನೆ ಸಮಾಜಮುಖಿ ಕಾರ್ಯ ಮಾಡುತ್ತಾ ಕನ್ನಡ ನೆಲ,ಜಲ, ನಾಡು ನುಡಿ ರಕ್ಷಣೆಗೆ ಶ್ರಮಿಸಬೇಕು ಎಂದರಲ್ಲದೇ ಕನ್ನಡಕ್ಕೆ ಎರಡು ವರ್ಷಗಳ ಕಾಲ ಇತಿಹಾಸವಿದೆ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಶಾಲೆಗೆ ಸೇರಿಸಿ ಎಂದರು.
ವೇದಿಕೆ ಮೇಲೆ ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ಸಿರಿಗನ್ನಡ ಮಹಿಳಾ ವೇದಿಕೆ ಅಧ್ಯಕ್ಷೆ ರಜನೀ ಜೀರಗ್ಯಾಳ, ಗಜಸೇನೆ ಮಹಿಳಾ ಜಿಲ್ಲಾಧ್ಯಕ್ಷೆ ಲಕ್ಷ್ಮೀ ಪಾಟೀಲ, ಶಿಲ್ಪಾ ಗೋಡಿಗೌಡರ, ಶೋಭಾ ಕಮ್ಮಾರ, ಸಚೀನ ಕಮಟೇಕರ, ಜ್ಯೋತಿ ಕೋಲಾರ, ನಗರಸಭೆ ಅಧಿಕಾರಿ ವಿ.ಎಸ್.ತಡಸಲೂರ, ಸಿಪಿಐ ಶ್ರೀಧರ ಸಾತಾರೆ, ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಪವನ ಮಹಾಲಿಂಗಪೂರ, ತಾಲೂಕಾ ಪ್ರ ಕಾರ್ಯದಶರ್ಿ ರಾಜು ನೀಲಜಗಿ, ಪತ್ರಕರ್ತರಾದ ಸೈಯ್ಯದ, ವಿಠ್ಠಲ ಕರೋಶಿ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಕರವೇ ಗಜಸೇನೆ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ವೇದಿಕೆ ಮೇಲಿನ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಶೈಲಾ ಕೊಕ್ಕರಿ ನಿರೂಪಿಸಿ, ವಂದಿಸಿದರು.