ಲೋಕದರ್ಶನ ವರದಿ
ಬೆಳಗಾವಿ, 30: ಮಹಿಳೆಯರಿಂದಲೇ ಮಹಿಳೆಯರ ಸಬಲೀಕರಣ ಸಾಧ್ಯಆದ್ದರಿಂದ 12ನೇ ಶತಮಾನದಲ್ಲಿ ಬಸವೇಶ್ವರರ ಅನುಭವ ಮಂಟಪ ಮಹಿಳಾ ಜಾಗೃತಿಗೆ ವೇದಿಕೆಯಾಯಿತು. ನಿಜವಾದ ಸಬಲೀಕರಣ ಬಸವೇಶ್ವರ, ಗಾಂಧಿ, ಅಂಬೇಡ್ಕರಅವರಜಾತ್ಯಾತೀತ ಶಕ್ತಿಗಳ ಮೂಲಕ ಸಾಧಿಸಲು ಸಾಧ್ಯಎಂದು ಮೈಸೂರು ವಿಶ್ವವಿದ್ಯಾಲಯದರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರಾಮಚಂದ್ರಪ್ಪಜಿ.ಟಿ. ಹೇಳಿದರು.
ನಗರದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಶುಕ್ರವಾರ 30 ರಂದುರಾಜ್ಯಶಾಸ್ತ್ರ ವಿಭಾಗ ಆಯೋಜಿಸಿದ್ದ ವತಿಯಿಂದ ನವದೆಹಲಿ ಆಯ್.ಸಿ.ಎಸ್.ಎಸ್.ಆರ್. ಪ್ರಾಯೋಜಕತ್ವದ 'ರಾಜಕೀಯ ಪಾಲ್ಗೊಳ್ಳುವಿಕೆ, ಸಜ್ಜುಗೊಳಿಸುವುದು ಮತು ್ತಸಂಘಟನೆಯಿಂದ ಮಹಿಳೆಯರ ಸಬಲೀಕರಣದ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕೀರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು.
ಮಹಿಳೆ ಮೊದಲು ಸಬಲೇಯಾಗಲು ತನ್ನಆಂತರಿಕ ಬಲೆಯಿಂದ ಹೊರಬರಬೇಕು ಅದಕ್ಕೆ ಜ್ಞಾನವೇ ಆಧಾರವಾಗಿದೆ. ಅಂದಾಗ ಮಾತ್ರ ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನಗೌರವ ಸಿಗಲು ಸಾಧ್ಯ. ಅಂಬೇಡ್ಕರಅವರಿಗೆ ಬಾಬಾ ಸಾಹೇಬ್ ಎಂಬ ಬಿರುದು ನೀಡಿರುವುದು ಮಹಿಳೆಯರೆ
ಅಧ್ಯಕ್ಷತೆ ವಹಿಸಿದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಸಿದ್ದು ಪಿ. ಅಲಗೂರ ಮಾತನಾಡಿ, ಸಮ್ಮೇಳನದಲ್ಲಿ ಮಂಡಿಸಲಾದ ವಿಷಯಗಳು ಮಹಿಳೆಯರ ವಾಸ್ತವಿಕ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಂದಲೇ ಸಬಲೀಕರಣ ಸಾಧ್ಯವಾಗಿಲ್ಲ. ಅದಕ್ಕೆಉದಾಹರಣೆಯಾಗಿ ಪಾಲರ್ಿಮೆಂಟನಲ್ಲಿ 33 ಪ್ರತಿಶತಮೀಸಲಾತಿ ನೀಡಲು ಸಾಧ್ಯವಾಗಿಲ್ಲ. ಆದರೂ ಕೇವಲ ಮೀಸಲಾತಿಯಿಂದ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ. ಅವರವರ ಕ್ಷೇತ್ರದ ಸಾಧನೆ-ಪರಿಶ್ರಮ ಅರ್ಹತೆಯಿಂದ ಇಂದಿರಾಗಾಂಧಿ ಪ್ರಧಾನಿಯಾದರು, ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆಯಾದರು, ಸುಧಾಮೂತರ್ಿ ಸಾಧಕರಾದರು ದು ಅವರ ಸಾಮಥ್ರ್ಯದಿಂದ ಮಾತ್ರ ಸಾಧ್ಯವಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣ ಒಂದು ಸಾಧನವಾಗಿದೆಎಂದು ನುಡಿದರು.
ಈ ಸಂದರ್ಭದಲ್ಲಿ ಪ್ರೊ. ಕಮಲಾಕ್ಷಿ .ತಡಸದ ಸ್ವಾಗತಿಸಿದರು. ಡಾ. ಹನುಮಂತಪ್ಪಡಿ.ಜಿ ವರದಿ ವಾಚಿಸಿದರು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದಪ್ರೊ. ಬಸವರಾಜು ಜಿ., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ವಾಯ್. ಎಸ್. ಬಲವಂತಗೊಳ, ಪ್ರೊ. ಪ್ರಕಾಶ.ಕಟ್ಟಿಮನಿ, ಸಮ್ಮೇಳನದಲ್ಲಿ ಭಾಗವಹಿಸಿದ ಪ್ರತಿನಿಧಿಗಳಾದ ಕಾವೇರಿ ಸ್ವಾಮಿ, ಎಮ್.ಎನ್. ಸುರೇಶಕುಮಾರ ಅನಿಸಿಕೆ ವ್ಯಕ್ತಪಡಿಸಿದರು ವಿಚಾರ ಸಂಕಿರಣದ ಸಂಘಟನಾ ಕಾರ್ಯದಶರ್ಿ.ಡಾ. ರಮೇಶ ಎಮ್, ಎನ್. ನಿರೂಪಿಸಿ
ವಂದಿಸಿದರು.