ರಾಯಬಾಗ 21: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಅಲ್ಲಿನ ಕೋಯ್ನಾ ಅಣೆಕಟ್ಟುಗಳಿಂದ ಬಿಡುತ್ತಿರುವ ನೀರಿನ ಪ್ರವಾಹದಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ತಾಲೂಕಿನ ಕುಡಚಿ ಸೇತುವೆ ಸಂಪೂರ್ಣ ಜಲಾವೃತಗೊಂಡಿರುವುದನ್ನು ಶುಕ್ರವಾರ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ, ಎಸ್ಪಿ ಸುಧೀರಕುಮಾರ ರೆಡ್ಡಿ, ಸಿಇಒ ಆರ್.ರಾಮಚಂದ್ರನ್ ಭೇಟಿ ನೀಡಿ ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ ಎಸ್.ಜಿಯಾವುಲ್ಲಾ, ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ದಡದ ಗ್ರಾಮಗಳು ಜಲಾವೃತಗೊಂಡು ಜನರು ಆತಂಕಕ್ಕೆ ಒಳಗಾಗಿದ್ದು ನಮ್ಮ ಗಮನಕ್ಕೆ ಬಂದಿದ್ದರಿಂದ, ನಾವು ಪೊಲೀಸ್ ಸಿಬ್ಬಂದಿ ಜೊತೆಗೂಡಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮುನ್ನಚ್ಚರಿಕೆ ಕ್ರಮಕೈಗೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ. ನದಿ ದಡದ ಜನರು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಈಗಾಗಲೇ ಪ್ರಚಾರದ ಮೂಲಕ ತಿಳಿಸಲಾಗಿದೆ. ಮುಳುಗಡೆಯಾಗಿರುವ ಸೇತುವೆ ಮೇಲೆ ದಾಟಲು ಜನರು ದುಸ್ಸಾಹಸಕ್ಕೆ ಇಳಿಯಬಾರದು ಎಂದು ಸೂಚಿಸಿದರು.
ಕುಡಚಿ ಸೇತುವೆ ಮೇಲೆ 14.49 ಮೀಟರ್ ನೀರಿನ ಮಟ್ಟವಿದ್ದು, ನೀರಿನ ಒಳ ಹರಿವು ಎರಡು ಲಕ್ಷ ಆರು ಸಾವಿರ ಕ್ಯೂಸೆಕ್ಸ್ರಷ್ಟು ಇದೆ ಎಂದು ತಿಳಿಸಿದರು. ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕು. ಈಗಾಗಲೇ ಗಂಜಿ ಕೇಂದ್ರ ಸ್ಥಾಪಿಸಲು ಯೋಚಿಸಲಾಗಿದೆ. ನಾವು ನಿರಂತರವಾಗಿ ಮಹಾರಾಷ್ಟ್ರದೊಂದಿಗೆ ಸಂಪರ್ಕದಲ್ಲಿದ್ದು, ನೀರಿನ ಒಳ ಹರಿವಿನ ಬಗ್ಗೆ ಕ್ಷಣ ಕ್ಷಣ ಮಾಹಿತಿಯನ್ನು ಪಡೆಯಲಾಗುತ್ತಿದೆ. ನದಿ ದಡದ ಗ್ರಾಮಗಳ ಈ ಹಿಂದೆ ನೀಡಿರುವ ದೋಣಿಗಳು ಕೆಟ್ಟಿರುವುದರ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಅವುಗಳನ್ನು ದುರಸ್ಥಿ ಮಾಡಲು ಸೂಚಿಸಲಾಗಿದೆ. ಅತ್ಯಂತ ತುತರ್ು ಪರಿಸ್ಥಿತಿಯಲ್ಲಿ ದೋಣಿ ಅವಶ್ಯಕತೆ ಇದ್ದರೆ ಕಾರವಾರದಿಂದ ತರಿಸಲಾಗವುದು ಎಂದು ತಿಳಿಸಿದರು.
ಪ್ರವಾಹ ಹೆಚ್ಚು ಆಗುವುದು ಕಂಡು ಬರುವುದಿಲ್ಲ, ಕಾರಣ ಜನರು ಸೇತುವೆ ದಾಟುವುದಾಗಲಿ, ಇನ್ನಾವುದೇ ದುಸ್ಸಾಹಸಕ್ಕೆ ಕೈಹಾಕದೇ ಜಾಗೃತಿಯಿಂದ ಇರಬೇಕು. ಪ್ರವಾಹವನ್ನು ಎದುರಿಸಲು ಜಿಲ್ಲಾಡಳಿತದಿಂದ ಎಲ್ಲ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಚಿಕ್ಕೋಡಿ ಉಪವಿಭಾಧಿಕಾರಿ ಗೀತಾ ಕೌಲಗಿ, ತಹಶೀಲ್ದಾರ ಡಿ.ಎಸ್.ಜಮಾದಾರ, ಕುಡಚಿ ಉಪತಹಶೀಲ್ದಾರ ಪರಮಾನಂದ ಮಂಗಸೂಳೆ, ಕುಡಚಿ ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ, ಎಸ್.ಆರ್.ಚೌಗಲಾ, ಪಿಎಸ್ಐ ಝೆಡ್.ಎನ್.ಮೋಕಾಶಿ, ಕಂದಾಯ ನಿರೀಕ್ಷಕ ಎ.ಆರ್.ನವರತ್ನ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
ಫೋಟೊ: 20 ರಾಯಬಾಗ 1
ಫೋಟೊ ಶಿಷರ್ಿಕೆ: ರಾಯಬಾಗ ತಾಲೂಕಿನ ಕುಡಚಿ ಸೇತುವೆ ಸಂಪೂರ್ಣ ಜಲಾವೃತಗೊಂಡಿರುವುದನ್ನು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ, ಎಸ್ಪಿ ಸುಧೀರಕುಮಾರ ರೆಡ್ಡಿ, ಸಿಇಒ ಆರ್.ರಾಮಚಂದ್ರನ್ ಭೇಟಿ ನೀಡಿ ವಿಕ್ಷೀಸಿದರು.