ರಾಮಾಯಣದಲ್ಲಿ ಮನುಷ್ಯ ಸಂಬಂಧಗಳ ಬೆಸುಗೆ: ಸಚಿವ ಬೊಮ್ಮಯಿ

ಲೋಕದರ್ಶನವರದಿ

ಹಾವೇರಿ :ಜಗತ್ತಿನ 10 ಪ್ರಮುಖ ಗ್ರಂಥಗಳಲ್ಲಿ ಮೊದಲನೆಯ ಮೂರರಲ್ಲಿ ರಾಮಾಯಣ ಗ್ರಂಥ ಇದೆ. ಇಂದು 190ಕ್ಕೂ ಹೆಚ್ಚು ರಾಮಾಯಣ ಗ್ರಂಥಗಳಿವೆ. ಇವಕ್ಕೆಲ್ಲಾ ಪ್ರೇರಣೆ. ಮಹಷರ್ಿ ವಾಲ್ಮೀಕಿ ಬರೆದಿರುವ ಮೂಲ ರಾಮಾಯಣದಲ್ಲಿ ಮನುಷ್ಯ ಸಂಬಂಧಗಳ ಬೆಸುಗೆಯಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. 

       ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಸಂಘ(ರಿ)ದ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ  ಮಹಷರ್ಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸುವರು ಅವರು ಮಾತನಾಡಿದರು. 

 ಇದು ಜ್ಞಾನದ ಯುಗವಾಗಿದ್ದು, ಜ್ಞಾನವಿದ್ದವರು ಜಗತ್ತನ್ನು ಆಳುತ್ತಿದ್ದಾರೆ. ಜ್ಞಾನ, ವಿದ್ಯೆಗೆ ಮಹತ್ವ ನೀಡಿ ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ತರುವುದು ಪಾಲಕರ ಹಾಗೂ ಸಕರ್ಾರದ ಆದ್ಯ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಎಸ್.ಟಿ. ಸಮುದಾಯ ಮಕ್ಕಳನ್ನು ಇಂದಿನ ಸ್ಪಧರ್ಾತ್ಮಕ ಯುಗಕ್ಕೆ ಸಿದ್ಧಪಡಿಸಬೇಕು. ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರ ಇವುಗಳನ್ನು ಪಡೆಯಲು ಸಮುದಾಯವು ಸಂಘಟಿತ ಪ್ರಯತ್ನವನ್ನು ಮಾಡಬೇಕು ಎಂದು  ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

         ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ ಲಕ್ಷ್ಮೀ ಹಿಂದೆ ಬಿಳಬೇಡಿ, ಸರಸ್ವತಿಯ ಹಿಂದೆ ಹಿಂದೆ ಬಿದ್ದರೇ ಲಕ್ಷ್ಮೀ ತಾನಾಗಿಯೇ ನಿಮ್ಮ ಮನೆ ಹುಡುಕಿಕೊಂಡು ಬರುತ್ತಾಳೆ. ಲಕ್ಷ್ಮೀಗಿಂತ ಸರಸ್ವತಿಯೇ ಶ್ರೇಷ್ಠ, ವಾಲ್ಮೀಕಿ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸುವ ಮೂಲಕ ಮುಖ್ಯವಾಹಿನಿಗೆ ಬರಬೇಕೆಂದರು.ವಾಲ್ಮೀಕಿ ಮಹಾನ್ ದಾರ್ಶನಿಕನಾಗಿದ್ದು, ರಾಮರಾಜ್ಯದ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟ ಮಾಹಾನ್ ಆದರ್ಶ ಋಷಿ ಎಂದು ಅವರು ಬಣ್ಣಿಸಿದರು. 

          ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ಮಾತನಾಡಿ ಸಮಾಜಕ್ಕೆ ವಾಲ್ಮೀಕಿ ಕೊಡುಗೆ ಬಹಳಷ್ಟಿದೆ. ನೌಕರರ ಸಂಘದ ಜವಾಬ್ದಾರಿ ಹೆಚ್ಚಿನದಾಗಿದ್ದು, ಸಮಾಜವನ್ನು ಮುನ್ನಡೆಸಬೇಕು ಜೊತೆಗೆ ಸಮಾಜವನ್ನು ರಕ್ಷಣೆ ಮಾಡಬೇಕು. ಶಿಕ್ಷಣ, ಸಮಘಟನೆ, ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.  ಸಮಾಜದ ಯುವಕರು ಸರಕಾರಿ ಉದ್ಯೋಗಗಳನ್ನು ಅವಲಂಭಿಸಬಾರದು, ಕೇಂದ್ರ ಹಾಗೂ ರಾಜ್ಯ ಸಕರಾರಗಳು ಅನೇಕ ಯೋಜನೆಗಳನ್ನು ರೂಪಿಸಿದ್ದು ಸರಕಾರದ ನೆರವು ಪಡೆದು ಸ್ವಯಂ ಉದ್ಯೋಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗಪತಿಗಳಾಗಿ ಜನರಿಗೆ ಕೆಲಸ ಕೊಡವಂತಾಗಬೇಕೆಂದು ಕರೆ ನೀಡಿದರು.

  ಭಾಗವಹಿಸಿದ ಪ್ರಸನ್ನಾನಂದ ಶ್ರೀಗಳ ಆಶೀರ್ವಚನದಲ್ಲಿ  ಸಮುದಾಯದ ಸರ್ವತೋಮುಖ ಅಭಿವೃದ್ಧಿ ಗುರು-ಗುರಿ ಇರಬೇಕು, ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಶೇ.7.5ಮೀಸಲಾತಿಯನ್ನು ರಾಜ್ಯ ಸಕರಕಾರ ಹೆಚ್ಚಿಸಲೇಬೇಕು. ವಾಲ್ಮೀಕಿ ಸಮಾಜದವರು ರಾಜಕೀಯ ಇಚ್ಚಶಕ್ತಿ ಹೊಂದಬೇಕು,  ಮುಂಬರುವ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷ ವಾಲ್ಮೀಕಿ ಸಮಾಜದವರನ್ನು ಮುಖ್ಯಮಂತ್ರಿಮಾಡುತ್ತೇವೆ ಎನ್ನುತ್ತಾರೋ ಅಂತಹ ರಾಜಕೀಯ ಪಕ್ಷಕ್ಕೆ ನಮ್ಮ ಬೆಂಬಲ ಎಂದು ಸಮಾಜ ಹೇಳಬೇಕು ಎಂದು ಅವರು ಹೇಳಿದರು. 

       ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದ ಶಿವಕುಮಾರ ಉದಾಸಿ, ಡಿ.ಎಮ್.ಸಾಲಿ. ಐಎಎಸ್ ಅಧಿಕಾರಿ ಪವನಕುಮಾರ ಗಿರಿಯಪ್ಪನವರ ಮಾತನಾಡಿದರು. ಅಖಿಲ ಕನರ್ಾಟಕ ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷರಾದ ಜಿ.ಟಿ.ಚಂದ್ರಶೇಖರಪ್ಪ, ಕವಿವಿಯ ಕುಲಸಚಿವ ಎನ್.ಎಂ.ಸಾಲಿ, ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ, ವಾಲ್ಮೀಕಿ ಮಹಾಸಭಾದ ನಿದರ್ೇಶಕ ಕೆ.ಮಂಜಣ್ಣ ಮತ್ತಿತರರು ವೇದಿಕೆಯಲ್ಲಿದ್ದರು.

          ಸಮಾರಂಭದಲ್ಲಿ ಪ್ರಮುಖರಾದ ಅನ್ನಪೂರ್ಣ ಮುದಕಮ್ಮನವರ, ಎನ್.ಕೆ.ಮರೋಳ, ಪ್ರೊ.ಎನ್.ಕೆಂಚವೀರಪ್ಪ.ಡಾ.ಕೆ.ಎಚ್.ಮುಕ್ಕಣ್ಣನವರ,ಮಾಲತೇಶ ಅಂಗೂರ, ಎಸ್.ಎನ್.ಯಮನಕ್ಕನವರ, ಬಸವಂತಪ್ಪ ಹುಲ್ಲತ್ತಿ, ಹಾಲೇಶ ನಾಯಕ, ಜಗದೀಶ ಶಿಡ್ಲಾಪುರ, ಕಾಂತಪ್ಪ ಬಂಗೇರ, ಡಾ.ಹನುಮಂತಪ್ಪ, ಉದಯ ಶ್ಯಾಗೋಟಿ, ಶ್ರೀಧರ ದೊಡ್ಡಮನಿ, ಫಕ್ಕೀರಪ್ಪ  ವಾಲ್ಮೀಕಿ, ಕಾತರ್ಿಕ ಕಬಾಡಿ,ಹುಚ್ಚೇಶ ವಾಲಿಕಾರ, ಗದಿಗೆಪ್ಪ ದರಗಪ್ಪನವರ, ಮಂಜುನಾಥ ವಾಲ್ಮೀಕಿ ಮುಂತಾದವರನ್ನು  ಸನ್ಮಾನಿಸಲಾಯಿತು.

       ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷ ಪ್ರಮೋದ ನಲವಾಗಲ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಆಂಜನೇಯ ಹುಲ್ಲಾಳ  ಮಾತನಾಡಿದರು. ಪ್ರಧಾನ ಕಾರ್ಯದಶರ್ಿ ಡಾ.ರಮೇಶ ತೆವರಿ ಸ್ವಾಗತಿಸಿದರು, ಖಜಾಂಚಿ ಅನಿಲಕುಮಾರ ಮರೋಳ  ವಂದಿಸಿದರು.