ಜ್ಞಾನ ಸಂಪತ್ತು ಅತ್ಯಂತ ಶ್ರೀಮಂತವಾದ ಸಂಪತ್ತು: ಟಿ ಎಸ್ ವಂಟಗೂಡಿ
The wealth of knowledge is the richest wealth: T. S. Vantagudi
ಲೋಕದರ್ಶನ ವರದಿ
ಮುಗಳಖೋಡ 22: ಎಲ್ಲ ಸಂಪತ್ತುಗಳಿಗಿಂತ ಜ್ಞಾನ ಸಂಪತ್ತು ಅತ್ಯಂತ ಶ್ರೀಮಂತವಾದ ಸಂಪತ್ತು. ಕಳ್ಳರು ಕದಿಯಲಾರದ ಅಣ್ಣ ತಮ್ಮಂದಿರು ಪಾಲು ಕೇಳಲಾಗದ ಅದ್ಬುತವಾದ ಸಂಪತ್ತು ಜ್ಞಾನ ಸಂಪತ್ತು. ಜ್ಞಾನಕ್ಕೆ ಜಗತ್ತು ಗೆಲ್ಲುವ ಶಕ್ತಿ ಇದೆ ಸತತ ಪ್ರಯತ್ನ ಏಕಾಗ್ರತೆ ಸಮಯಪ್ರಜ್ಞೆ ಇಟ್ಟುಕೊಂಡು ಸಾಧನೆ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾಧನೆ ಸಾಧಕನ ಸ್ವತ್ತು ಹೊರತು ಸೋಮಾರಿಯ ಸ್ವತ್ತಲ್ಲ ಎಂದು ಹಾರೂಗೇರಿಯ ಶ್ರೀ ಸಿದ್ದೇಶ್ವರ ಕಲಾ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಹಾಗೂ ಸಾಹಿತಿಗಳಾದ ಟಿ ಎಸ್ ವಂಟಗೂಡಿ ಹೇಳಿದರು.
ಮುಗಳಖೋಡದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆ ಶ್ರೀ ಸಿದ್ದರಾಮೇಶ್ವರ ವಾಣಿಜ್ಯ ಹಾಗೂ ಕಲಾ ಪದವಿ ಮಹಾವಿದ್ಯಾಲಯ ಮುಗಳಖೋಡ ಇವರ ಆಶ್ರಯದಲ್ಲಿ 2025 26 ನೇ ಸಾಲಿನ ವಿದ್ಯಾರ್ಥಿಗಳ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಹಾವಿದ್ಯಾಲಯಗಳು ಜ್ಞಾನ ಬೆಳಗುವ ದೇಗುಲಗಳಾಗಬೇಕು ವಿದ್ಯಾರ್ಥಿಗಳು ಜ್ಞಾನದ ಜ್ಯೋತಿಗಳಾಗಬೇಕು ಎಂದು ಸಾಹಿತಿ ಟಿ ಎಸ್ ಒಂಟಗೂಡಿ ಅಭಿಮತ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಸಸಾಲಟ್ಟಿಯ ಜ್ಞಾನ ಯೋಗಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶಂಕರಾಚಾರ್ಯ ರ ಕಡಲಾಸ್ಕರ್ ರವರು ಮಾತನಾಡಿ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿ ಕಾರ್ಯ ಮಾಡಬೇಕು. ಪ್ರತಿಯೊಬ್ಬರು ಕಾಯಕ ಮಾಡಿ ನಾಯಕರಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ರಾಯಬಾಗದ ಹಿರಿಯ ಕಾಂಗ್ರೆಸ್ ಧುರೀಣರಾದ ಡಿ ಎಸ್ ನಾಯಕರವರು ಉದ್ಘಾಟಕರಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಕಲಿತ ಮಹಾ ವಿದ್ಯಾಲಯದ ಕಲಿಸಿದ ಗುರುಗಳ ತಂದೆ ತಾಯಿಯರ ಕೀರ್ತಿಯನ್ನು ಹೆಚ್ಚಿಸುವಂಥವರಾಗಬೇಕು ಪಠ್ಯದೊಂದಿಗೆ ಪಟ್ಟೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿ ಇರಬೇಕೆಂದು ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಎ ಪಿ ಕೊಪ್ಪದವರು ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿ ಇಂದ ದೂರವಿದ್ದು ಓದಿಗಾಗಿ ಸಮಯವನ್ನು ಮೀಸಲಿಡಬೇಕು ನಮ್ಮ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸುವಂತೆ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದ ವೇದಿಕೆ ಮೇಲೆ ಸಿದ್ದರಾಮೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯರಾದ ಎಸ್ ಜಿ ಹಂಚಿನಾಳ, ಮುಖ್ಯೋಪಾಧ್ಯಾಯರಾದ ವಿ ಎಂ ಕರಡಿ, ದೈಹಿಕ ಶಿಕ್ಷಕರಾದ ಬಿ ಬಿ ಬಂಡಿಗಣಿ, ಅಶೋಕ ಕದಂ, ಗಜಾನಂದ್ ಜಂಬಗಿ, ಎಸ್ ಬಿ ಕಡಕಬಾವಿ, ಬಿ ವಿ ಹಟ್ಟಮನಿ, ಸಂತೋಷ ಕಡಕಬಾವಿ, ಎಸ್ಎಂ ಮದಲ ಮಟ್ಟಿ, ಪಿ ಟಿ ರಾವತ, ಎಂಡಿ ಹಳಬರ ಸೇರಿದಂತೆ ಎಲ್ಲ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳ ವೃಂದ ಹಾಜರಿದ್ದರು ಕಾರ್ಯಕ್ರಮವನ್ನು ಪ್ರಾಚಾರ್ಯ ಮುತ್ತು ಹುಲಿಯನ್ನವರ ಸ್ವಾಗತಿಸಿದರು ಕುಮಾರಿ ಎಸ್ ಪಿ ಕೇತ ಗೌಡರ ನಿರೂಪಿಸಿ ವಂದಿಸಿದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 