ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಅಭಿಯಾನ

ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಅಭಿಯಾನ  Campaign to bring out-of-school children back to school

ಶಿಗ್ಗಾವಿ  01: ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ನಂ.2ಕ್ಕೆ ಹಾಜರಾಗದೇ ಇರುವ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  

ಅಭಿಯಾನದ ನಂತರ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮತ್ತೆ ಶಿಕ್ಷಣದ ಹಾದಿಗೆ ತರಲು ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಕೈಗೊಂಡ ಈ ಪ್ರಯತ್ನಕ್ಕೆ ಪಾಲಕರು ಸಹಕಾರ ನೀಡಿದರು.  

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಮುಕ್ತಿಯಾರ್ ಖಾನ್ ತಿಮ್ಮಾಪುರ, ಶಿಕ್ಷಕರಾದ ಆರ್‌.ಎಚ್‌. ಕೊಪ್ಪದ, ಸುಮ್ಮಾ ಆರ್‌., ಎಸ್ಡಿಎಂಸಿ ಅಧ್ಯಕ್ಷೆ ಆಸ್ಮಾಬಾನು ನುಲ್ವಿ, ಎಸ್ಡಿಎಂಸಿ ಸದಸ್ಯೆ ಬಿಬಿ ಅಸ್ಲಾ ದರ್ಗಾವಾಲೆ, ಹೀನಾ ಕೌಸರ್ ಸೇರಿದಂತೆ ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.