ಸುಶಿಕ್ಷಿತ ಆರೋಗ್ಯವಂತ ಮಹಿಳೆ ದೇಶದ ಸಂಪತ್ತು: ಡಾ. ಶುಭಾರಾಣಿ ಕಡಪಟ್ಟಿ

ಲೋಕದರ್ಶನವರದಿ

ಹುನಗುಂದ03: ಸುಶಿಕ್ಷಿತ ಆರೋಗ್ಯವಂತ ಮಹಿಳೆಯರು ದೇಶದ ಸಂಪತ್ತು ಆದ್ದರಿಂದ ಮಹಿಳೆಯರು ಸಾಕ್ಷರತೆಯೊಂದಿಗೆ ತಮ್ಮ ಆರೋಗ್ಯದ ಕಡೆಗೆ ಗಮನಹರಿಸುವ ಅಗತ್ಯತೆ ಇದೆ ಎಂದು ಖ್ಯಾತ ಸ್ತ್ರೀರೋಗ ತಜ್ಞೆಯರಾದ ಡಾ|| ಶುಭಾರಾಣಿ ಕಡಪಟ್ಟಿಯವರು ಅಭಿಪ್ರಾಯಪಟ್ಟರು.

ಸ್ಥಳೀಯ ವ್ಹಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ,ವಿಜ್ಞಾನ ಹಾಗೂ ವ್ಹಿ.ಎಸ.್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಘಟಕ ಹಾಗೂ ದ ಫೇಡರೇಶನ್ ಆಪ್ ಅಬ್ಯಾಟಿಕ ಆಂಡ್ ಗೈನೋಕಾಲಾಜಿಲ್ ಸೊಸೈಟೀಸ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಜ.30ರಂದು ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇನ್ನೋರ್ವ ಅತಿಥಿಗಳಾದ ಖ್ಯಾತ ಸ್ತ್ರೀರೋಗ ತಜ್ಞೆಯರಾದ ಡಾ|| ಅನಿತಾ ಅಕ್ಕಿಯವರು ಮಾತನಾಡಿ ಉತ್ತಮ ಆರೋಗ್ಯವಂತ ಮಹಿಳೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಸ್ಥಾನವಹಿಸಬಲ್ಲಳು ಎಂದು ಹೇಳಿದರು. ಹಾಗೂ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಶಶಿಕಲಾ ಮಠ  ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಸಕರ್ಾರ ಕೊಡಮಾಡಿದ ಸೌಲಭ್ಯಗಳನ್ನು ಬಳಸಿಕೊಂಡು ಸಬಲರಾಗಬೇಕೆಂದು ತಿಳಿಸಿದರು. ಪ್ರೊ.ಎಸ್.ಪಿ.ಕಟಗೇರಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವೇದಿಕೆಯ ಸಂಚಾಲಕ ಪ್ರೊ. ಎಸ್.ಬಿ. ಅಮಲಿಕೊಪ್ಪ ಸ್ವಾಗತಿಸಿದರು. ದಿವ್ಯಾ ಆಲದಿ ಪ್ರಾಥರ್ಿಸಿದರು. ಪ್ರೊ. ಎ.ಸಿ. ಕಲಬುಗರ್ಿ ವಂದಿಸಿದರು.