ಲೋಕದರ್ಶನ ವರದಿ
ಚಿಂಚಲಿ: ದೇಶದ ಗಡಿ ಕಾಯೋ ಸೈನಿಕ.. ತನ್ನ ಪ್ರಾಣವನ್ನೇ ಒತ್ತೆ ಇಟ್ಟು ದೇಶ ಕಾಯೋ ಕುಟುಂಬದ ಕುಡಿಗಳಿಗೆ ಕಾಳು ಕಡಿಯೇ ಕರಾಳವಾದಂತಾಗಿದೆ. ಕಾಳಿಗೆ ಲೇಪನ ಮಾಡಿದ ರಾಸಾಯನಿಕವೇ ಯೋಧನ ಮಕ್ಕಳಿಬ್ಬರ ಬಲಿ ತಗೆದುಕೊಂಡಿದೆ. ಯಾರಿಗೂ ಕಮ್ಮಿ ಇಲ್ಲದಂತೆ ತನ್ನೆರಡು ಹೆಣ್ಣು ಮಕ್ಕಳೇ ತನ್ನೆರಡು ಕಣ್ಣಿನಂತೆ ಬೆಳೆಸಿದ್ದ ಯೋಧನ ಬದುಕೇ ಬೆಳಕಿನ ಹಬ್ಬದ ಸಂದರ್ಭದಲ್ಲಿ ಕತ್ತಲಾಗಿ ಹೋಗಿದೆ.
ಕಾಳಿಗೆ ಲೇಪನ ಮಾಡಿದ ರಾಸಾಯನಿಕ ಗಾಳಿ ಸೇವಿಸಿ ಇಬ್ಬರು ಬಾಲಕಿಯರ ಸಾವು ದೇಶದ ಗಡಿ ಕಾಯೋ ಯೋಧನ ಮಕ್ಕಳ ಸಾವಿನಿಂದ ಮಮ್ಮಲ ಮರುಗುತ್ತಿರೋ ಜನರು.. ದೀಪಾವಳಿ ಸಂದರ್ಭದಲ್ಲಿ ಕರುಳ ಕಳೆದುಕೊಂಡು ಅಂಧಃಕಾರವಾದ ಯೋಧನ ಬದುಕು
ಹೌದು ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಕುಂಬಾರಗಲ್ಲಿಯಲ್ಲಿ ಕಾಳಿಗೆ ಲೇಪನ ಮಾಡಿದ ವಿಷಗಾಳಿಯಿಂದ ಯೋಧನ ಇಬ್ಬರು ಮಕ್ಕಳ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಯೋಧ ಹನುಮಂತ ಕುಂಬಾರ ಹಾಗೂ ಕವಿತಾ ದಂಪತಿಯ ಮಕ್ಕಳಾದ 4 ವರ್ಷದ ಐಶ್ವರ್ಯ ಹಾಗೂ 6 ವರ್ಷದ ಜಯಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳು ಆಹಾರ ಧಾನ್ಯಕ್ಕೆ ಲೇಪನ ಮಾಡಿದ್ದ ವಿಷಗಾಳಿ ಉಸಿರುಗಟ್ಟಿ ಸಾವನ್ನಪ್ಪಿದ್ದು ತಾಯಿ ಕವಿತಾ ಕೂಡ ತ್ರೀವ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ.
ಆಸ್ಸಾಂನ ಗುಹವಾತಿಯಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಹನುಮಂತ ಕುಂಬಾರ ತನ್ನ ಮಕ್ಕಳೊಂದಿಗೆ ವಿಜಯದಶಮಿ ಹಬ್ಬ ಆಚರಣೆ ಮಾಡಿ ತನ್ನ ಕರ್ತವ್ಯಕ್ಕೆ ಹನುಮಂತ ತೆರಳಿದ್ದರು. ತಂದೆಯೊಂದಿಗೆ ವಿಜಯದಶಮಿ ಹಬ್ಬ ಆಚರಣೆ ಮಾಡಿರೋ ಮಕ್ಕಳು ದೀಪಾವಳಿ ಹಬ್ಬದ ಬಳಿಕ ಇಲ್ಲದಂತಾಗಿದ್ದು ಯೋಧನ ಕುಟುಂಬದಲ್ಲಿ ಅಂಧಃಕಾರವೇ ಕವಿದಿದೆ.
ಇನ್ನೂ ಹನುಮಂತ- ಕವಿತಾ ದಂಪತಿಗಳ ಮದುವೆಯಾದ ಬಹಳ ವರ್ಷಗಳ ಬಳಿಕ ಐಶ್ವರ್ಯ ಹಾಗೂ ಜಯಶ್ರೀ ಜನಿಸಿದ್ದರು. ಹೀಗಾಗಿ ಇವರು ಹೆಣ್ಣು ಮಕ್ಕಳಲ್ಲ.. ತನ್ನ ಪಾಲಿಗೆ ಗಂಡು ಮಕ್ಕಳೂ ಇವರೇ ಹೆಣ್ಣು ಮಕ್ಕಳೂ ಇವರೇ ಅಂತಾ ಬೆಳಿಸಿರೋ ಯೋಧನ ಬಾಳು ದೀಪಾವಳಿ ಸಂದರ್ಭದಲ್ಲಿ ಕತ್ತಲಾದಂತಾಗಿದೆ. ಅಲ್ಲದೇ ನಿನ್ನೆ ಬೆಳಿಗ್ಗೆಯೇ ಐಶ್ವರ್ಯ ತನ್ನ 4 ನೇ ಜನ್ಮದಿನವನ್ನು ಮನೆ ಮಂದಿಯೊಂದಿಗೆ ಆಚರಿಸಿಕೊಂಡಿದ್ದಳು.
ಆದ್ರೆ ಜನ್ಮ ದಿನವೇ ಐಶ್ವರ್ಯ ಬಾರದ ಲೋಕಕ್ಕೆ ಪುಣ ಬೆಳಿಸಿದ್ದು ನಿಜಕ್ಕೂ ಕರುಳು ಹಿಂಡುತಹ ಘಟನೆಗಾಗಿದರು. ಯೋಧ ಹನುಮಂತ ಕಳೆದ ಹತ್ತು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರೋ ಹಿನ್ನಲೆಯಲ್ಲಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಸ್ವಗ್ರಾಮ ಚಿಂಚಲಿ ಪಟ್ಟಣದಲ್ಲಿಯೇ ಬಿಟ್ಟು ಹೋಗುತ್ತಿ ಹೋಗುತ್ತಿದ್ದರು.
ಹೀಗಾಗಿ ಹನುಮಂತನ ಸಹೋದರರೇ ಇವರ ಕುಟುಂಬದ ಲಾಲನೆ ಪಾಲನೆ ಮಾಡುತ್ತಿಲೇ ಬಂದಿದ್ದೇ ಹನುಮಂತ ಸಹೋದರ ಲಗಮಣ್ಣ ಕಾಳು ಕಡಿಯ ಸತ್ತೆಯ ವ್ಯಾಪಾರ ಮಾಡಿಕೊಂಡು ತನ್ನ ಹಾಗೂ ತನ್ನ ಸಹೋದರ ಮಕ್ಕಳನ್ನು ನೋಡಿ ಕೊಂಡಿದ್ದರು. ಆದ್ರೆ ಹೆಸರು, ಕಡಲೆ, ಅಲಸಂದಿ ಸೇರಿದಂತೆ ವಿವಿಧ ಬೇಳೆ ಕಾಳು ಕೆಡದಿರಲಿ ಅಂತಾ ಅಚುಗಳಿಗೆ ಕೆಮಿಕಲ್ ಲೇಪನ ಮಾಡಿ ಇಡಲಾಗುತ್ತಿತ್ತು.
ಹೀಗಾಗಿ ನಿನ್ನೆಯೂ ಕೂಡ ಹೀಗೆ ಲೇಪನ ಮಾಡಿಟ್ಟ ಆಹಾರ ಧಾನ್ಯ ಇರೋ ಕೋಣೆಯಲ್ಲಿಯೇ ಎಂದಿನಂತೆ ತಾಯಿ ಹಾಗೂ ಮಕ್ಕಳು ಮಲಗಿಕೊಂಡಿದ್ದರು. ತುಂಬಾ ಶಕೆ ಇರೋದಾಗಿ ಫ್ಯಾನ್ ಹಾಕಿಕೊಂಡು ಮಲಗಿರೋ ಮಕ್ಕಳು ಹಾಗೂ ತಾಯಿ ರಾತ್ರಿವಿಡಿ ವಿಷಗಾಳಿ ಬಡಿದು ತೀವ್ರ ಅಸ್ವಸ್ಥರಾಗಿದ್ದು ಮನೆಯವರ ಗಮನಕ್ಕೆ ಬಂದಿದೆ, ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ತಗೆದುಕೊಂಡು ಹೋಗೋದ್ರೊಳಗಾಗಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಇನ್ನೂ ತನ್ನ ಮಕ್ಕಳ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಯೋಧ ಹನುಮಂತ ಕರುಳಕುಡಿಗಳ ಮೇಲೆ ಎಷ್ಟೊಂದು ಪ್ರತೀ ವಾತ್ಸಲ್ಯ ಹೊಂದಿದ್ದರು ಎಂಬುವುದಕ್ಕೆ ಆತ ತನ್ನ ಫೇಸ್ ಬುಕ್ ಪ್ರೋಫೈಲ್ ಹಾಗೂ ವಾಟ್ಸಪ್ನಲ್ಲಿ ತನ್ನ ಮಕ್ಕಳ ಫೋಟೋ ಇಡುತ್ತಿರೋ ನಿದರ್ಶನ.
ದೇಶ ಕಾಯೋ ಯೋಧನ ಬಾಳಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಇಂತಹ ಘಟನೆ ನಮ್ಮ ಕಣ್ಣ ಮುಂದೆಯೇ ನಡೆದಿರೋದಕ್ಕೆ ಎಲ್ಲರೂ ವಿಧಿಯನ್ನು ಶಪಿಸುತ್ತಿದ್ದಾರೆ. ಒಟ್ಟಿನಲ್ಲಿ ಬೆಳಕಿನ ದೀಪಾಳಿ ಸಂದರ್ಭದಲ್ಲಿ ಜನ್ಮ ದಿನ ಆಚರಿಸಿಕೊಂಡ ದಿನದಂದೇ ಗಡಿ ಕಾಯೋ ಯೋಧನ ಮಕ್ಕಳು ಸಾವನ್ನಪ್ಪಿರೋದು ನಿಜಕ್ಕೂ ವಿಧಿಯು ಎಷ್ಟು ಕ್ರೂರಿ ಎಂದು ಅನಿಸುತ್ತಿದೆ.