ಲೋಕದರ್ಶನ ವರದಿ
ಬೆಳಗಾವಿ 12: ಪ್ರಥಮ
ಶೂನ್ಯ ಪೀಠಾಧೀಶರಾದ ಅಲ್ಲಮಪ್ರಭುಗಳು ಆಧ್ಯಾತ್ಮಿಕ ಲೋಕದಲ್ಲಿಯೇ ವಿಶಿಷ್ಟ ಸ್ಥಾನ ಪಡೆದಂಥವರು. ತಾವು ಬಹು ಹಿಂದುಳಿದ
ನಟವರ ಜನಾಂಗದವರಾದರೂ ದರ್ಶನ ಶಾಸ್ತ್ರದಲ್ಲಿ, ವಚನಗಳ ರಚನೆಯಲ್ಲಿ, ಅನುಭಾವದಲ್ಲಿ ಮಹಾ ಮೇರು. ವಿಶ್ವಗುರು ಬಸವಣ್ಣನವರು ಸಂಸ್ಥಾಪಿಸಿದ ಲಿಂಗಾಯತ
ಧರ್ಮ ಪುರುಷನ ಶಿರ ಸ್ವರೂಪರು ಅಲ್ಲಮಪ್ರಭುಗಳು.
ಮಹಾಮಾನವತಾವಾದಿ ಬಸವಣ್ಣನವರು 'ತಮ್ಮ ಶಾಂತಿಯ ಕ್ರಾಂತಿಗೆ,
ತಮಗಾರೂ ಇಲ್ಲವೆಂದು ಬೋಳಾದರೆನ್ನ ಪ್ರಭು ದೇವರು" ಎಂದು ವಣರ್ಿಸುವರು. ಅವರ
ವ್ಯಕ್ತಿತ್ವ ಅಗಾಧವಾದುದು. ಎಲ್ಲಾ ಮಹಾಮಹಿಮರನ್ನು ಒರೆಗೆ ಹಚ್ಚಿ, ಪುಟವಿಟ್ಟು ಪರೀಕ್ಷಿಸಿ, ಅವರ ವೈಶಿಷ್ಟ್ಯವನ್ನು ಪರಿಚಯಿಸಿದ
ಮಹಾ ಮೇಧಾವಿ ಅವರು. ಸ್ವತಃ ಬಸವಣ್ಣನವರು, ಸೊಲ್ಲಾಪುರದ ಸಿದ್ಧರಾಮೇಶ್ವರರು, ಮಹಾ ನಿರಂಜನ ಶರಣೆ
ಅಕ್ಕಮಹಾದೇವಿ, ಗೊಗ್ಗಯ್ಯ, ಮುಕ್ತಾಯಕ್ಕ, ಅವರ ಪರೀಕ್ಷೆಯಲ್ಲಿ ಗೆದ್ದು
ಪುನೀತರಾದವರು. ಅವರ ಬೆಡಗಿನ ವಚನಗಳು
ಎಲ್ಲರನ್ನು ನಿಬ್ಬೆರಗಾಗಿಸುವ
ಸತ್ಯಗಳು.
ಪ್ರಥಮ ಶೂನ್ಯ ಪೀಠಾಧೀಶರಾದ ಅಲ್ಲಮಪ್ರಭುಗಳ ಕುರಿತು ಶರಣೆ ಜಯಶ್ರೀ ಲಿಂಗಾಯತ, ಸಂಚಾಲಕರು, ವಚನ ಚಿಂತನಾ ವೇದಿಕೆ ಅವರು ಕಲ್ಯಾಣ ಕ್ರಾಂತಿ ಸಂಸ್ಮರಣೆಯಾರ್ಥ ದಿ.12 ರಂದು ಹಮ್ಮಿಕೊಂಡ ಮೂರನೆಯ ದಿನದ "ಅಲ್ಲಮಪ್ರಭುಗಳ ಪೂಜೆ ಮತ್ತು ಚರಿತ್ರೆ ಪಠಣ" ಕಾರ್ಯಕ್ರಮದಲ್ಲಿ ಬಸವ ಧ್ವಜಾರೋಹಣವನ್ನು ನೆರವೇರಿಸಿ, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾ ಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ , ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿ& ಬಸವಾಂಕುರಗಳ ಸಂಯುಕ್ತ ಆಶ್ರಯದಲ್ಲಿ "ಕಲ್ಯಾಣ ಕ್ರಾಂತಿ ಸಂಸ್ಮರಣೋತ್ಸವನ್ನು ಬೆಳಗಾವಿ 'ವಿಶ್ವಗುರು ಬಸವ ಮಂಟಪ' ದಲ್ಲಿ ಏರ್ಪಡಿಸಲಾಗಿತ್ತು.
ಶರಣೆ ಪ್ರತಿಭಾ ಮತ್ತು ಚಿ. ಬಸವಸ್ವರೂಪ ಗುಡಸ್ ಕಾರ್ಯಕ್ರಮವನ್ನು ಉದ್ಘಾಟಿಸಿ, ವಚನ ಸಂದೇಶ ನೀಡಿದರು. ಶರಣೆ ಬಸವದೀಕ್ಷಾ ಸ್ವಾಗತ ಕೋರಿದರು. ಚಿ. ಶರಣೆ ಪ್ರಾರ್ಥನಾ ಗುಡಸ್ ಅತಿಥಿಯಾಗಿ ಪಾಲ್ಗೊಂಡು ಅನುಭಾವ ಮಂಡಿಸಿದರು.