ಅವರೇ ಸೃಷ್ಟಿಸಿದ ವೈರಾಣು ಈಗ ಅವರನ್ನೇ ಗುಮ್ಮತ್ತಿದೆ!

ಮಾಡಿದ್ದುಣ್ಣೋ ಮಹಾರಾಯ ಎನ್ನುವ ಗಾದೆ ಮಾತನ್ನು ನಮ್ಮ ಕಡೆ ಯಾವಾಗಲೂ ಹೇಳುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೆಬೇಕೆಂಬ ಮಾತಿದೆ. ಇದೀಗ ಅದು ಚೀನಾಗೆ ಬಹಳ ಚೆನ್ನಾಗಿ ಅನ್ವಯವಾಗುತ್ತಿದೆ. ಚೀನಾದಲ್ಲಿ ಹುಟ್ಟಿ, ಇಡೀ ಜಗತ್ತನ್ನೆಲ್ಲ ಸುತ್ತಿ ಬಂದ ಆ ವೈರಾಣು ಇದೀಗ ಮತ್ತೆ ಚೀನಾದಲ್ಲಿ ರೂಪಾಂತರವಾಗಿ ಚೀನಿಯರನ್ನ ಹಿಡಿದುಕೊಂಡು ಸರಿಯಾಗಿ ಗುಮ್ಮುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಆದ ಅದರ ಪರಿಣಾಮವನ್ನು ಇಡೀ ಜಗತ್ತು ಇನ್ನೂ ಮರೆತಿಲ್ಲ. ಹೀಗಿರುವಾಗ ಇದೀಗ ಚೀನಾದ ವೈರಾಣುವಿನಿಂದ ಜಗತ್ತು ಮತ್ತೆ ಸಂಕಷ್ಟಕ್ಕೆ ತುತ್ತಾಗುವಂತಹ ಎಲ್ಲಾ ರೀತಿಯ ಲಕ್ಷಣಗಳು ಈಗ ಮತ್ತೆ ಎದ್ದು ಕಾಣಿಸುತ್ತಿವೆ. ಕಳೆದ ಎರಡು ವರ್ಷಗಳ ಹಿಂದೆ ಎರಡನೇ ಅಲೆ ಬಂದಾಗ ಪರಿಸ್ಥಿತಿ ವಿಶ್ವದಾದ್ಯಂತ ಹೇಗಿತ್ತು ಎಂಬ ಆ ಭಯಾನಕ ಸನ್ನಿವೇಶಗಳು ನಮ್ಮ ಕಣ್ಮುಂದೆ ಕಟ್ಟಿದಂತೆ ಇನ್ನು ಹಾಗೆ ಇವೆ.   ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದ ಸ್ಥಿತಿ, ಸ್ಮಶಾನಗಳ ಮುಂದೆ ಸಾಲುಗಟ್ಟಿದ ಶವಗಳ ರಾಶಿಗಳು! ರಸ್ತೆಯ ತುಂಬೆಲ್ಲ ಬರಿ ಆಂಬುಲೆನ್ಸ್‌ ಗಳದ್ದೇ ಸದ್ದು! ಮೊಬೈಲ್ ಗಳಿಗೆ ಕಿವಿ ಹಚ್ಚಿದರೆ ಸಾಕು ಬರಿ ಸಾವಿನ ಸುದ್ದಿಗಳು! ಯಾವಾಗ ಯಾರಿಗೆ ಏನಾಗುತ್ತೋ! ಎಲ್ಲಿಂದ ಯಾರ ಸಾವಿನ ಸುದ್ದಿ ಬರುತ್ತದೆ ಅನ್ನುವ ಆತಂಕದ ಅಂದಿನ ಅಂದಿನ ಆ ಭಯಾನಕ ದಿನಗಳನ್ನು ಮರೆಯೋದಕ್ಕಂತೂ ಯಾವತ್ತಿಗೂ ಸಾಧ್ಯವಿಲ್ಲ.  

ಇದೀಗ ಚೀನಾದಲ್ಲಿ ಅಂತಹದ್ದೇ ಪರಿಸ್ಥಿತಿ ಮತ್ತೆ ಮರುಕಳಿಸಿದೆ! ಅಲ್ಲಿನ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ, ಮೆಡಿಕಲ್ ಶಾಪ ಗಳೆಲ್ಲವೂ ಕೂಡ ಖಾಲಿ ಖಾಲಿ ಆಗಿವೆ. ಬಿಜಿಂಗ್ ನಲ್ಲಿರುವ ಅತಿ ದೊಡ್ಡ ಸ್ಮಶಾನ ಬಾಬಾಶೌನ್ನಲ್ಲಿ ಹಗಲು ರಾತ್ರಿಯ ವ್ಯತ್ಯಾಸಗಳಿಲ್ಲದೆ ಹೆಣಗಳನ್ನು ಸುಡಲಾಗುತ್ತಿದೆ, ಆದರೂ ಇನ್ನೂ 15 ದಿನಗಳಿಗೆ ಸಾಕಾಗುವಷ್ಟು ಹೆಣಗಳು ಅಲ್ಲಿವೆ ಎಂದು ಚೀನಾದ ಅನೇಕ ವರದಿಗಳು ಹೇಳುತ್ತಿವೆ. ಇನ್ನು ಅಲ್ಲಿನ ತಜ್ಞರ ಪ್ರಕಾರ ಚೀನಾದಲ್ಲಿ ಸರಿ ಸುಮಾರು 80 ಕೋಟಿಯಷ್ಟು ಜನರಿಗೆ ಈ ಬಾರಿ ಕರೋನಾ ಸೊಂಕು ತಗುಲಿ, ಅದರಲ್ಲಿ 20 ಲಕ್ಷಕ್ಕೂ ಅಧಿಕ ಜನರ ಸಾವುಗಳುಳು ಸಂಭವಿಸಬಹುದು ಎಂದು ಅಂದಾಜಿಸಿದ್ದಾರೆ. ಹೀಗಿರುವ ಹೊತ್ತಿನಲ್ಲಿ ಚೀನಾ ಭಾರತದ ಗಡಿಯಲ್ಲಿ ಪದೇ ಪದೇ ಕಿರಿಕ್ ಗಳನ್ನು ಮಾಡಿಕೊಳ್ಳುತ್ತ ತೈವಾನಿನ ಮೇಲೂ ಗುಟುರು ಹಾಕುತ್ತ, ಫಿಲಿಪೈನ್ಸ್‌ ನ ಜಲಗಡಿಯನ್ನು ಅಕ್ರಮವಾಗಿ ಪ್ರವೇಶಿಸುತ್ತಿದೆ. ಅಲ್ಲಿ ಕರೋನಾ ವೈರಾಣುವಿನ ಅಟಾಟೋಪ ಹೆಚ್ಚಾದರೂ ಕೂಡ ಅವರಿಗೆ ಯುದ್ಧೋತ್ಸಾಹ ಮಾತ್ರ ಕಡಿಮೆಯಾದಂತಿಲ್ಲ!  

ಚೀನಾ ಭಾರತದ ಕಡೆಯಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಬದಲು ಗಡಿಯಲ್ಲಿಯೇ ವೈರಾಣು ಪೀಡಿತರ ಹಾರೈಕೆ ಕೇಂದ್ರಗಳನ್ನ ಸಿದ್ಧಪಡಿಸುತ್ತಿದೆ. ಅಲ್ಲಿ ಚೀನಾದ ಸೇನೆಗೂ ಕೂಡ ವೈರಾಣು ತೆಗೆದುಕೊಳ್ಳುತ್ತದೆ ಎಂಬುದನ್ನು ಅರ್ಥೈಸಿಕೊಂಡ ಚೀನಾ ರೋಗ ಪೀಡಿತರಾದರೂ ಕೂಡಾ ತನ್ನ ಸೈನ್ಯವನ್ನು ಗಡಿಗಳಿಂದ ಹಿಂದಕ್ಕೆ ಕರೆಸಿಕೊಳ್ಳದಿರುವ ನಿರ್ಣಯಗಳನ್ನು ಚೀನಾ ತೆಗೆದುಕೊಂಡಿದೆ.  ವ್ಯಾಕ್ಸಿನ್, ಲಾಕ್ಡೌನ್, ಜೀರೋ ಪಾಲಿಸಿಗಳು ಇವು ಯಾವುದೂ ಅಲ್ಲಿ ಕಾರ್ಯನಿರ್ವಹಿಸಿಲ್ಲವೇ ಎಂಬ ಪ್ರಶ್ನೆ ಕೂಡ ಜಗತ್ತಿನ ಮುಂದೆ ಇದೆ. ಇದೀಗ ಆ ಮಹಾಮಾರಿ ಮತ್ತೆ ಜಗತ್ತನ್ನು ಆವರಿಸಿಕೊಳ್ಳುವಂತಹ ಸಾಧ್ಯತೆಗಳೇ ಹೆಚ್ಚಾಗಿ ಕಾಣಿಸುತ್ತಿವೆ.  

2019 ರ ಸಂದರ್ಭದಲ್ಲಿ ಚೀನಾದ ಉಹಾನ್ ನಗರದಲ್ಲಿ ಮೊದಲು ವೈರಾನು ಕಾಣಿಸಿಕೊಂಡು ತದ ನಂತರ ಅದು ಚೀನಾದ ಇನ್ನಿತರೆ ನಗರಗಳಿಗೆ ವ್ಯಾಪಿಸಿಕೊಂಡಿತ್ತು. ಆದರೆ ಆ ಸಂದರ್ಭದಲ್ಲಿ ಚೀನಾ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಜಗತ್ತಿನ ಜೊತೆ ಹಂಚಿಕೊಳ್ಳಲಿಲ್ಲ. ತನ್ನಲ್ಲಿ ಏನಾಗುತ್ತಿದೆ ಎಂಬುದು ಜಗತ್ತಿಗೆ ಗೊತ್ತಾಗದ ಹಾಗೆ ಅದು ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿತ್ತು. ಆದರೆ ತನ್ನೊಳಗೆ ಹೊತ್ತಿಕೊಂಡ ಬೆಂಕಿ ತನ್ನನ್ನು ಸುಟ್ಟಮೇಲೆ ಅದರ ವಾಸನೆ ಹೊರಗಡೆಯವರಿಗೆ ಬಡೆಯದೆ ಇರಲು ಸಾಧ್ಯವೆ?!  ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಚೀನಾದ ಡೆಂಗ್ ಎತ್ನೆ ಸಿಟಿಯ ಜನರು ಹೊಸ ವರ್ಷದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ತಯಾರಾಗಿದ್ದರು. ಮತ್ತು ಅದೇ ಡಿಸೆಂಬರ್ 25 ರಂದು ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿಕೊಳ್ಳಲು ಬೇರೆ ಬೇರೆ ದೇಶಗಳ ಜನರು ಕೂಡ ಬಹಳಷ್ಟು ಉತ್ಸಕತೆಯಿಂದ ತಮ್ಮ ತಮ್ಮ ರಾಷ್ಟ್ರಗಳಿಗೆ ತೆರಳಲು ಸಜ್ಜಾಗಿದ್ದರು. ಹಾಗೆ ಹೋಗುವಾಗ ಅವರೆಲ್ಲ ಬರೀ ಕೈಯಲ್ಲಿ ಹೋಗದೆ ಚೀನಾದ ವೈರಸ್‌ಗಳನ್ನು ಹೊತ್ತುಕೊಂಡು ಹೋಗಿದ್ದರು. ಚೀನಾದ ವೈರಾಣ ನೋಡು ನೋಡುತ್ತಿದ್ದಂತೆ ಇಡೀ ಜಗತ್ತನ್ನೇ ಆವರಿಸಿಕೊಂಡುಬಿಡುತ್ತದೆ. 2020ರ ಫೆಬ್ರುವರಿ ವೇಳೆ ಕರೋನಾ ವೈರಾಣುವಿನ ನರ್ತನೆ ಶುರುವಾಗೆ ಬಿಟ್ಟಿತು. ಆಗ ಇಡೀ ವಿಶ್ವದ ನಾನಾ ದೇಶಗಳು ಬೀಗವನ್ನು ಹಾಕಿಕೊಂಡು ಕುಳಿತುಕೊಳ್ಳಲು ಸನ್ನದ್ಧವಾದವು. ಮಾರ್ಚ್‌ ಮೂರನೇ ವಾರದ ವೇಳೆಗೆ ಭಾರತ ಕೂಡ ಲಾಕ್ಡೌನನ್ನು ಘೋಷಣೆ ಮಾಡಿತು. ಅದರ ಮುಂದಿನ ವರ್ಷ ಸೇರಿದಂತೆ ಒಟ್ಟು ಎರಡು ವರ್ಷಗಳ ಕಾಲ ಇಡೀ ಜಗತ್ತು ಬರೀ ಸಾವು ನೋವುಗಳ ಸುಳಿಯಲ್ಲಿ ಸಿಕ್ಕಿಕೊಂಡು ವಿಲವಿಲ ಒದ್ದಾಡಿಹೋಯಿತು! ಇನ್ನೇನು ಇದೆಲ್ಲವನ್ನು ಮರೆತು ಹೊಸ ಬದುಕುಗಳನ್ನು ಕಟ್ಟಿಕೊಳ್ಳುವ ಹೊತ್ತಿಗೆ ಮತ್ತೆ ಚೀನಾದಿಂದ ಇದೀಗ ಆ ಕೆಟ್ಟ ಸುದ್ದಿಗಳು ಬರುತ್ತಿವೆ.  

ಚೀನಾದಲ್ಲಿ ಶುರುವಾದ ವೈರಾಣು ಸಮಸ್ಯೆ 2022ರ ಆರಂಭದಿಂದಲೂ ಕೂಡ ಅಲ್ಲಿ ವಿಪರೀತ ಪ್ರಮಾಣದ ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿದೆ. ಅಲ್ಲಿ ವೈರಾಣುವನ್ನು ನಿಯಂತ್ರಿಸುವುದಕ್ಕಾಗಿ ಚೀನಾ ಈಗಾಗಲೇ ಹಲವು ತಿಂಗಳುಗಳಿಂದ ಅನೇಕ ನಗರಗಳಲ್ಲಿ ಕಠಿಣ ನಿರ್ಬಂಧನೆಗಳನ್ನ ಹೇರಿ ಲಾಕ್ಡೌನ್ ಘೋಷಣೆ ಮಾಡಿತ್ತು. ಅಲ್ಲಿನ ಕಾರ್ಖಾನೆಗಳನ್ನು ಮುಚ್ಚಿದ್ದಲ್ಲದೆ ಇಡೀ ವಸತಿ ಸಮುಚ್ಚಯಗಳನ್ನೆಲ್ಲ ಸೀಜ್ ಮಾಡುತ್ತ ಹೋಯಿತು. ಇಷ್ಟಾದರೂ ಕೂಡ ಅಲ್ಲಿ ವೈರಾಣುವಿನ ಪ್ರಭಾವವೇನು ಕಡಿಮೆಯಾಗಲಿಲ್ಲ. ಅದರಿಂದ ಬೆಸತ್ತ ಅಲ್ಲಿನ ಜನ ದಂಗೆ ಎದ್ದು ಪ್ರತಿಭಟನೆಗಳನ್ನ ಮಾಡುತ್ತಾರೆ. ಅದರಿಂದ ಅಲ್ಲಿನ ಸರಕಾರ ಲಾಕ್ಡೌನನ್ನು ತೆರವುಗೊಳಿಸಿದೆ. ಅದರ ಪರಿಣಾಮ ಈಗ ಇಡೀ ಚೀನಾದ ತುಂಬಾ ಸಾವಿನ ಸುದ್ದಿಗಳೇ ಕೇಳಿ ಬರುತ್ತಿವೆ. ವುಹಾನ, ಬಿಜಿಂಗ್ ಸೇರಿದಂತೆ ಅಲ್ಲಿನ ಸಾಕಷ್ಟು ನಗರಗಳಿಂದ ಬರುತ್ತಿರುವ ವಿಡಿಯೋಗಳನ್ನು ನೋಡಿದರೆ ಎಲ್ಲರಿಗೂ ಭಯ ಕಾಡೋದಕ್ಕೆ ಶುರುವಾಗಿದೆ. ಅಲ್ಲಿನ ಪ್ರತಿಯೊಂದು ಆಸ್ಪತ್ರೆಗಳ ಕಾರಿಡಾರಗಳ ತುಂಬೆಲ್ಲ ಹೆಣಗಳಿವೆ. ಹೊಸ ದೇಹಗಳನ್ನು ಇಡೋದಕ್ಕೆ ಕೂಡ ಅಲ್ಲಿ ಜಾಗವಿಲ್ಲ. ಸ್ಮಶಾನಗಳಲ್ಲಿ ಶವ ಸಂಸ್ಕಾರಕ್ಕೆ ಟೋಕನ್ಗಳನ್ನು ಕೊಡಲಾಗುತ್ತದೆ. ಹಗಲು ರಾತ್ರಿ ಎನ್ನದೆ ಕೆಲಸವನ್ನು ಮಾಡುತ್ತಿದ್ದರು ರೋಗಿಗಳಿಗೆ ಚಿಕಿತ್ಸೆಯನ್ನು ಕೊಡೋದಕ್ಕೆ ಸಾಧ್ಯವಾಗುತ್ತಿಲ್ಲ ಬದಲಾಗಿ ಆರೋಗ್ಯ ಕಾರ್ಯಕರ್ತರೂ ಕೂಡ ಸೋಂಕಿತರಾಗುತ್ತಿದ್ದಾರೆ! ಹಾಗಂತ ಅಲ್ಲಿನ ಆರೋಗ್ಯ ಇಲಾಖೆಯ ಕಾರ್ಯಕರ್ತರೇ ಹೇಳಿಕೊಂಡಿರುವ ವಿಡಿಯೋಗಳು ಹೊರ ಬರುತ್ತಿವೆ.  

ಹಾಗಾಗಿ ಇದೀಗ ಚೀನಾ ಸಾವಿನ, ಹೆಣಗಳ ರಾಷ್ಟ್ರವಾಗಿ ಕಾಣಿಸುತ್ತಿದೆ.  ಚೀನಾದಲ್ಲಿ ವೈರಾಣು ಕಾಣಿಸಿಕೊಂಡ ತಕ್ಷಣ ಅದಕ್ಕೆ ಲಸಿಕೆ ತಯಾರಿಸಿದ್ದೇವೆ ಅಂತ ಚೀನಾ ಹೇಳಿಕೊಂಡಿತ್ತು. ಹಾಗಾಗಿ ಅವರ ಆ ವೇಗವನ್ನು ನೋಡಿದಾಗ ಇವರೆಲ್ಲಿ ಮೊದಲೇ ಲಸಿಕೆಯನ್ನು ಸಿದ್ಧಪಡಿಸಿಕೊಂಡು ಆಮೇಲೆ ಜಗತ್ತಿಗೆ ವೈರಸ್ ಹರಡಿಸಿದ್ದರೇ? ಎಂಬ ಅನುಮಾನ ಆಗ ಜಗತ್ತನ್ನು  ಕಾಡಿತ್ತು. ಚೀನಾ ಅವತ್ತೇ ಎರಡು ಲಸಿಕೆಗಳನ್ನು ಪರಿಚಯಿಸಿತ್ತು, ಚಿನೋವ್ಯಾಕ್ ಮತ್ತೊಂದು ಸಿನೋಪಾ. ನಂತರ ಅಲ್ಲಿನ ಸರ್ಕಾರ ಲಸಿಕೆಯನ್ನು ಕಡ್ಡಾಯ ಗೊಳಸಿ ಎಲ್ಲರಿಗೂ ಲಸಿಕೆಯನ್ನು ಹಾಕಿಸಿತು. ಆದರೆ ಅಂದು ಅವರು ಸಿದ್ಧಪಡಿಸಿದ್ದ ಆ ಲಸಿಕೆಯ ಗುಣಮಟ್ಟ ಅಷ್ಟೊಂದು ಚೆನ್ನಾಗಿದೆಯಾ? ಎಂಬುವುದು ಆ ವೈರಾಣುವಿನ ಶಕ್ತಿ ಏನೆಂಬುದು ಗೊತ್ತಾಗುವ ಮೊದಲೇ ತಯಾರು ಮಾಡಿದ ಲಸಿಕೆ ಇದೀಗ ಬಂದಿರುವ ವೆರಿಂಟ್ ಮೇಲೆ ಕೆಲಸವನ್ನು ಮಾಡುತ್ತಿಲ್ಲವಾ? ಈ ಪ್ರಶ್ನೆಗೆ ಉತ್ತರಗಳು ಸಿಕ್ಕಿಲ್ಲ. ಯಾಕೆಂದರೆ ಚೀನಾದಲ್ಲಿ ಯಾವುದೋ ಒಂದು ಸುದ್ದಿ ವಿಷಯಗಳು ಸಂಪೂರ್ಣವಾಗಿ ಹೊರ ಬರುವುದಿಲ್ಲ. ಹಾಗೂ ಅಲ್ಲಿನ ಲಸಿಕೆಯ ಬಗ್ಗೆ ಪರೀಕ್ಷೆ ಮಾಡುವುದಕ್ಕೆ ಕೂಡ ಅವರು ಬೇರೆ ಯಾರೋ ಒಬ್ಬರಿಗೂ ಅನುಮತಿಯನ್ನು ಕೊಟ್ಟಿರಲಿಲ್ಲ. ಹಾಗಾಗಿ ಚೀನಾದ ಜನ ಲಸಿಕೆಯನ್ನು ತೆಗೆದುಕೊಂಡರೂ ಸಹ ವೈರಾಣು ಯಾಕೆ ಅವರನ್ನು ಮತ್ತೆ ಕಾಡುತ್ತದೆ ಎಂಬುದರ ಬಗ್ಗೆ ಖಚಿತವಾಗಿ ಹೇಳಲು ಅವರಿಂದ ಸಾಧ್ಯ ಆಗ್ತಿಲ್ಲ. ಇದೀಗ ಪತ್ತೆಯಾಗಿರುವ ತಳಿಯನ್ನು ಓಮಿಕ್ರಾನಿನ ವೇರಿಯಂಟ್ ಅಂತ ಹೇಳಲಾಗುತ್ತಿದೆ. ಇದನ್ನು ‘ಬಿ.ಎಫ್ ಸೆವೆನ್‌’ ಅನ್ನೋ ಹೆಸರಿನಿಂದ ಗುರುತಿಸಲಾಗಿದೆ. ಅಲ್ಲಿಯೂ ಕೂಡ ಚೀನಾವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದ ಲ್ಯಾಬುಗಳಲ್ಲಿ ಈ ರೋಗಿಗಳ ಪರೀಕ್ಷೆ ನಡೆದಿಲ್ಲ. ಹೀಗಾಗಿ ವೆರಿಯಂಟ್ ಯಾವುದು ಎಂಬುದರ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.  

ಅಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸಾವುಗಳು ಸಂಭವಿಸುತ್ತಿದ್ದರು ಕೂಡ ಚೀನಾ ಮಾತ್ರ ಪ್ರಪಂಚದ ಕಣ್ಣಿಗೆ ಮಣ್ಣೆರೆಚೋದಕ್ಕೆ ಹೋಗ್ತಾ ಇದೆ. ಅವರು ಕೇವಲ ಉಸಿರಾಟದ ತೊಂದರೆಯಿಂದ ಸತ್ತವರನ್ನು ಮಾತ್ರ ವೈರಾಣುವಿನ ಸಾವುಗಳು ಅಂತ ಗುರುತಿಸುತ್ತಿದ್ದಾರೆ. ಉಳಿದಂತೆ ವಯೋವೃದ್ಧರು ಇನ್ನಿತರ ಸಾವುಗಳನ್ನೆಲ್ಲ ವೈರಾಣುವಿನ ಪಟ್ಟಿಗೆ ಸೇರಿಸಿಲ್ಲ. ಆದ್ದರಿಂದ ಕಳೆದ ಒಂದು ವಾರದಲ್ಲಿ ಕೇವಲ 17 ಸಾವುಗಳು ಮಾತ್ರ ಅಂತ ಚೀನಾ ಹೇಳಿಕೊಂಡರೆ, ಅಲ್ಲಿನ ಸ್ಮಶಾನಗಳು ಮಾತ್ರ ಬೇರೆಯದ್ದೆ ಕಥೆಯನ್ನು ಹೇಳುತ್ತಿವೆ. ಜಗತ್ತಿನ ಎಲ್ಲಾ ದೇಶಗಳು ನಾರ್ಮಲ್ ಮೂಡಿಗೆ ಬರುತ್ತಿ ಬರುತ್ತಿರಬೇಕಾದರೆ ಚೀನಾದಲ್ಲಿ ಮಾತ್ರ ಯಾಕೆ ಹೀಗೆ? ಇದಕ್ಕೆಲ್ಲ ಚೀನಾದ ಕಠಿಣ ಕ್ರಮಗಳೇ ಕಾರಣವೆಂಬ ವಾದಗಳು ಕೂಡ ಒಂದೆಡೆ ಇವೆ.  

ಚೀನಾದಲ್ಲಿ ಜೀರೋ ವೈರಾಣು ಪಾಲಿಸಿಯ ಹೆಸರಿನಲ್ಲಿ ಲಾಕ್ಡೌನ್‌ಗಳನ್ನು ಹೇರಿದ್ದರಿಂದ ಜನ ವೈರಾಣುವಿಗೆ ಎಕ್ಸ್ಪೋಸ್ ಆಗುವುದು ಕಡಿಮೆ ಆಯಿತು. ಹೀಗಾಗಿ ಅವರಲ್ಲಿ ಹರ್ಡ್‌ ಹ್ಯುಮಿನಿಟಿ ಬರುವುದಕ್ಕೆ ಸಾಧ್ಯವಾಗಲಿಲ್ಲ ಅನ್ನೋದು ಒಂದು ವಾದವಾದರೆ, ಅಲ್ಲಿನ ಜನರ ಹ್ಯುಮಿನಿಟಿಯೇ ಬಹಳ ಕಡಿಮೆ ಇದೆ, ಹೀಗಾಗಿ ಅವರಲ್ಲಿ ಹೆಚ್ಚಿನ ಪ್ರಮಾಣದ ಜನ ಸಾವಿಗಿಡಾಗುತ್ತಿದ್ದಾರೆ ಎಂಬುದು ಮತ್ತೊಂದು ವಾದ. ಆದರೆ ಇವು ಕೂಡ ಸಾಬೀತಾದಂತಹ ಸತ್ಯಗಳಲ್ಲ. ಇವು ಕೇವಲ ಅಲ್ಲಿನ ತಜ್ಞರು ಮಾಡುತ್ತಿರುವ ಊಹೆಗಳಷ್ಟೆ. ಸಿಕ್ಕಾಪಟ್ಟೆ ಹ್ಯುಮಿನಿಟಿ ಇದೆ ಎಂದುಕೊಂಡಿದ್ದ ಭಾರತದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆದಂತಹ ಸಾವು ನೋವುಗಳ ಸಂಖ್ಯೆ ಮಾತ್ರ ಹೆಚ್ಚು. ಈಗಲೂ ಕೂಡ ಇಲ್ಲಿ ವೈರಾಣು ಸಮಸ್ಯೆಗೆ ತುತ್ತಾಗಿ ಚಿಕಿತ್ಸೆ ಪಡೆದು ಹೊರಬಂದವರು ಹೃದಯಾಘಾತಗಳಿಗೆ ತುತ್ತಾದ ಉದಾಹರಣೆಗಳು ಕೂಡಾ ಸಾಕಷ್ಟಿವೆ. ಹಾಗಾಗಿ ಈ ವೈರಾಣುವಿನ ಪ್ರಮಾಣದಲ್ಲಿ ಮಾತ್ರ ಇದು ಹೀಗೆ ಅಂತ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾರಣಗಳು ಏನೇ ಇದ್ದರೂ ಅಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಅನ್ನೋದು ಮುಖ್ಯ. ಎಂದು ಇಡೀ ಜಗತ್ತು ವೈರಾಣುವಿನ ಎಲ್ಲಾ ನಿರ್ಬಂಧಗಳಿಂದ ಹೊರಬಂದಿದೆ. ಮಾಸ್ಕ್‌ ಸ್ಯಾನಿಟೈಸರ್ ಎಲ್ಲವನ್ನು ಕೂಡ ಮರೆತುಬಿಟ್ಟಿದ್ದೇವೆ. ವಿಮಾನಯಾನ ಸೇವೆಗಳು ಕೂಡ ಯಥಾವತ್ತಾಗಿ ಪುನಃ ಆರಂಭಗೊಂಡಿವೆ.  

ಚೀನಾದಿಂದಲೂ ಸಾಕಷ್ಟು ವಿಮಾನಗಳು ಭಾರತಕ್ಕೆ ಬರುತ್ತಿವೆ ಮತ್ತು ಇಲ್ಲಿಂದ ಕೂಡ ಜನ ಚೀನಾಗೆ ಹೋಗುವುದು ಬರೋದು ಮಾಡುತ್ತಿದ್ದಾರೆ. ಡಿಸೆಂಬರ್ 25ಕ್ಕೆ ಕ್ರಿಸ್ ಮಸ್ ಕೂಡ ಬಂದು ಹೋಯಿತು, ಚೀನಾದಲ್ಲಿದ್ದ ನಾನಾ ರಾಷ್ಟ್ರ ಗಳ ಜನರು ಎಂದಿನಂತೆ ತಮ್ಮ ಕ್ರಿಸ್ಮಸ್ ಹಬ್ಬದ ಆಚರಣೆಗೆ ತಮ್ಮ ತಮ್ಮ ದೇಶಗಳಿಗೆ ಹೋಗಿದ್ದಾರೆ. ಈಗ ಆ ಚೀನಾ ವೈರಾಣು ನಾನಾ ದೇಶಗಳಿಗೆ ತಲುಪುವುದಕ್ಕಾದರೂ ಇನ್ನಷ್ಟು ಸಮಯ ಬೇಕಿದೆ ನೀವೇ ಯೋಚಿಸಿ! ಒಬ್ಬರಿಂದ ಮತ್ತೊಬ್ಬರಿಗೆ ತಲುಪುತ್ತಾ ಹೋಗುವ ವೈರಾಣು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಅಂತ ಹೇಳಲಾಗುತ್ತದೆ. ಹಾಗೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂಬುದರ ಜೊತೆಗೆ ಅದು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತ ಹೊಸತಳಿಯ ಅವತಾರ ಎತ್ತುತ್ತಿದೆ. ಹಾಗಾಗಿ ಜಗತ್ತೀಗ ಆ ಆತಂಕಕ್ಕೆ ಕಾರಣವಾಗಿ ಮತ್ತೊಂದು ಸಮಸ್ಯೆಗೆ ಸಿಲುಕಿ ಕೊಳ್ಳುವಂತಹ ಲಕ್ಷಣಗಳೇ ಹೆಚ್ಚಾಗಿವೆ.  

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಇದೀಗ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳಿಗೂ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಕೂಡ ಆದೇಶ ಪತ್ರವನ್ನು ಕಳುಹಿಸಿದ್ದಾರೆ. ಚೈನಾ ಕೋರಿಯಾ ಜಪಾನ್ ಬ್ರೆಜಿಲ್ ಹಾಗೂ ಅಮೆರಿಕ ಇಟಲಿಗಳಲ್ಲಿ ಕೂಡ ವೈರಾಣು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಗಳು ಕೂಡ ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಈದಿಗಲೇ ತೆಗೆದುಕೊಳ್ಳಬೇಕು. ಆಯಾ ರಾಜ್ಯಗಳಲ್ಲಿನ ಪಾಸಿಟಿವ್ ಕೇಸುಗಳು ಸ್ಯಾಂಪಲ್ಸುಗಳನ್ನು ಇನ್ಸಾಕಾಗ್ ಲ್ಯಾಬ್ ಗಳಿಗೆ ಕಳುಹಿಸಬೇಕು ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಜೊತೆಗೆ ಪರೀಕ್ಷೆಗಳನ್ನು ಮಾಡುವ ಮೊದಲು ವೈರಾಣು ಪತ್ತೆಯಾದ ಪ್ರಕರಣಗಳಲ್ಲಿ ರೋಗಿಗಳನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆಯನ್ನು ಕೊಡುವ ಹಾಗೂ ವೈರಾಣು ಹರಡುವಿಕೆ ಹೆಚ್ಚಾಗಿ ಹರಡದ ಹಾಗೆ ತಡೆಯುವ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಆರೋಗ್ಯ ಇಲಾಖೆ ತಿಳಿಸಿದೆ. ಇದೀಗ ನಮ್ಮಲ್ಲಿ ವೈರಾಣು ಪ್ರಕರಣಗಳ ಸಂಖ್ಯೆ ಕಡಿಮೆ ಇವೆ ಅಂತ ಅಂದುಕೊಳ್ಳುವ ಹಾಗಿಲ್ಲ, ಯಾಕೆಂದರೆ ನಮ್ಮಲ್ಲಿ ಪರೀಕ್ಷೆ ಮಾಡೋದು ಬಹಳ ಕಡಿಮೆ ಆಗಿದೆ. ಹಾಗಾಗಿ ಪತ್ತೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆ. ಒಂದು ವೇಳೆ ಸದ್ಯಕ್ಕೆ ಇದೀಗ ಪರೀಕ್ಷೆ ಟೆಸ್ಟ್‌ಗಳು ಶುರುವಾದರೆ ನಮ್ಮಲ್ಲಿಯೂ ಕೂಡ ಜ್ವರ ಕೆಮ್ಮಿನ ಬಹುತೇಕ ಪ್ರಕರಣಗಳಲ್ಲಿ ಅದೇ ಹಳೆಯ ವೈರಾಣುವಿನ ಹೊಸ ರೂಪಪತ್ತಿಯಾಗುವ ಸಾಧ್ಯತೆ ಹೆಚ್ಚು. ರೋಗ ಲಕ್ಷಣಗಳಿದ್ದಾಗ ಪರೀಕ್ಷೆ ಮಾಡಿಸಿಕೊಂಡರೆ ಅದು ಯಾವ ವೇರಿಯಂಟ್ ಎಂಬುದು ಗೊತ್ತಾಗುತ್ತದೆ. ಮತ್ತು ಅದನ್ನು ನಿಭಾಯಿಸುವುದಕ್ಕೆ ಎಚ್ಚರಿಕೆಯನ್ನು ತೆಗೆದುಕೊಳ್ಳಲು ಸಾಧ್ಯ ಕೂಡ ಆಗುತ್ತದೆ. ಹಾಗಂತ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮಲ್ಲಿ ಹ್ಯುಮಿನಿಟಿ ಈಗಾಗಲೇ ಹೆಚ್ಚಾಗಿದೆ. ಹಾಗಾಗಿ ವೈರಾಣು ನಮ್ಮನ್ನು ಹೆಚ್ಚಿನ ಪ್ರಮಾಣದಲ್ಲಿ ನಷ್ಟಕ್ಕೆ ತಳ್ಳುವ ಸಾಧ್ಯತೆಗಳಿಲ್ಲ. ಭಾರತದಲ್ಲಿನ ಬಹುತೇಕರಿಗೆ ವ್ಯಾಕ್ಸಿನೇಷನ್ ಕೂಡ ಆಗಿದೆ, ಹಾಗಾಗಿ ತೀರ ಆತಂಕ ಪಡಬೇಕಿಲ್ಲ.  

ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಮಾತ್ರ ಪ್ರತಿಯೊಬ್ಬರು ತೆಗೆದುಕೊಳ್ಳಲೇ ಬೇಕಾಗುತ್ತದೆ. ಮಕ್ಕಳು, ವಯೋ ವೃದ್ಧರನ್ನ ಮತ್ತು ಹ್ಯೂಮಿನಿಟಿ ಕಡಿಮೆ ಇರುವವರನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೋವಿಡ್ ನಂತಹ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಅಗತ್ಯ ಎನಿಸಿದರೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ಗಳನ್ನು ಬಳಕೆ ಮಾಡಬೇಕಿದೆ. ಹಾಗಾದಾಗ ಮಾತ್ರ ಕರೋನಾ ಪ್ರಕರಣಗಳನ್ನು ತಡೆಯಲಿಕ್ಕೆ ಸಾಧ್ಯವಾಗುತ್ತದೆ.  

- * * * -