ಯಲಬುಗರ್ಾ 04: ಸಂಕನೂರು ಗ್ರಾಮದ ಮೂರನೇ ಅಂಗನವಾಡಿ ಕೇಂದ್ರಕ್ಕೆ ಇತ್ತಿಚೀಗೆ ಹೊಸದಾಗಿ ಸಹಾಯಕಿಯನ್ನು ನೆಮಕ ಮಾಡಿಕೊಳ್ಳಲಾಗಿದ್ದು ಅದರಿಂದ ಇಷ್ಟು ವರ್ಷಗಳ ಕಾಲ ಅಲ್ಲಿ ಸೇವೇ ಸಲ್ಲಿಸಿದವರಿಗೆ ಅನ್ಯಾಯವಾಗಿದೆ ಎಂದು ಸಂಕನೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಕ್ಕೆ ಅಡುಗೆ ಸಹಾಯಕಿಯಾಗಿ ಈ ಹಿಂದೆ ಮೋದೀನಬಿ, ಶಹಬುದ್ದೀನಸಾಬ, ಕವಡೇಲಿ ಇವರು 1995 ರಿಂದ 2017ರ ವರೆಗೆ ಪ್ರಾರಂಭದಲ್ಲಿ ಕೇವಲ 30 ರೂ ವೇತನದಲ್ಲಿನ ಕೆಲಸ ಮಾಡಿದ್ದಾರೆ ಅವರು ತಮ್ಮ ಸೇವಾ ಅವಧಿಯಲ್ಲಿರುವಾಗ 2017ರಲ್ಲಿ ಮರಣ ಹೊಂದಿದರು ಆಗ ಅಂದಿನ ಸಿಡಿಪಿಓ ಅವರು ಗ್ರಾಮಕ್ಕೆ ಬೇಟಿ ನೀಡಿ ಇವರ ಮನೆಯವರನ್ನೆ ಸೇವೆಯಲ್ಲಿ ಮುಂದುವರೆಯುವಂತೆ ಮೌಖಿಕ ಆದೇಶ ನೀಡಿದ್ದರು ಅದರಂತೆ ಅವರ ಸ್ವಂತ ಮಗನ ಹೆಂಡತಿಯಾದ ಅಮೀನಬಿ ಹುಸೇನಸಾಬ ಕವಡೇಲಿ ಇವರನ್ನು ತಾತ್ಕಾಲಿಕ ಸೇವೆಯನ್ನು ಮಾಡಲು ಗ್ರಾಮಸ್ಥರು ತಿಳಿಸಿದ್ದಾರೆ, ಅದರಂತೆ ಅವರು ಅಂದಿನಿಂದ ಇಂದಿನವರೆಗೆ ಅದೇ ಸೇವೆಯಲ್ಲಿದ್ದು ಹಾಗೂ ಅವರು 7ನೇ ತರಗತಿ ಉತ್ತೀರ್ಣರಾಗಿದ್ದು ಅವರ ಸೇವಾ ಅವದಿಯನ್ನು ಪರಿಗಣಿಸಿ ಅವರನ್ನೆ ಆಯ್ಕೆ ಮಾಡಿಕೊಳ್ಳಬೇಕು, ಹಾಗೂ ಅವರ ಕುಟುಂಬವು ಅತ್ಯಂತ ಕಡುಬಡತನದಿಂದ ಕೂಡಿದೆ ಅದರಿಂದ ಇವರ ಜೀವನ ನಡೆದಿದ್ದು ಇಗ ಅದು ಇಲ್ಲವಾದರೆ ಅವರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗುತ್ತದೆ ಅವರ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬಿರುವುದು ಹಾಗೂ ಇಗ ನೇಮಕವಾದಂತಹ ಸದಸರಿಯವರು ಮದುವೆಯಾಗಿ 6-7 ವರ್ಷಗಳಾಗಿದೆ ಅವರನ್ನು ದೋಟಿಹಾಳ ಎಂಬ ಗ್ರಾಮಕ್ಕೆ ಕೊಟ್ಟಿದ್ದು ನಿಜವಿರುತ್ತದೆ ಆದ್ದರಿಂದ ಇವರಿಗೂ ಸಂಕನೂರು ಗ್ರಾಮಕ್ಕೂ ಯಾವುದೇ ಸಂಬಂದ ಇರುವದಿಲ್ಲಾ ಆದ್ದರಿಂದ ಮೇಲಾಧಿಕಾರಿಗಳು ಮರು ಪರಿಶಿಲನೆ ಮಾಡಿ ನೊಂದ ಮಹಿಳೆಗೆ ನ್ಯಾಯ ಕೊಡಿಸಬೇಕು ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಉಘ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.