ಸಹಕಾರ ಕ್ಷೇತ್ರದಲ್ಲಿ ಗ್ರಾಮ ಹೊಸ ಇತಿಹಾಸ ಸೃಷ್ಟಿಸಿದೆ: ಸುರೇಶ ಚೌಗುಲೆ
ಶಿರಗುಪ್ಪಿ ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿಯ ಸರ್ವ ಸಾಧಾರಣ ಸಭೆ;
ಕಾಗವಾಡ 19: ಸಹಕಾರಿ ಕ್ಷೇತ್ರದಲ್ಲಿ ಶಿರಗುಪ್ಪಿ ಗ್ರಾಮವು ವಿಶೇಷ ಸಾಧನೆ ಮಾಡುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿಯಾಗಿದ್ದು, ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಗ್ರಾಮದ ವಿವಿಧೋದ್ಧೇಶಗಳ ಸಹಕಾರಿಯು ಪ್ರಗತಿ ಪಥದಲ್ಲಿ ಸಾಗುತ್ತ, 42.61 ಲಕ್ಷ ರೂ. ನಿವ್ಹಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಸುರೇಶ ಚೌಗುಲೆ ತಿಳಿಸಿದ್ದಾರೆ.
ಅವರು, ಗುರುವಾರ ದಿ. 18 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 73 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು. ನಮ್ಮ ಹಿರಿಯರು 1950 ರಲ್ಲಿ ಸಂಘವನ್ನು ಸ್ಥಾಪನೆ ಮಾಡಿ, ರೈತರ ಆರ್ಥಿಕ ಪ್ರಗತಿಗೆ ಭದ್ರ ಬುನಾದಿ ಹಾಕಿದ್ದಾರೆ. ಅಂದು, ಗ್ರಾಮದಲ್ಲಿ ಯಾವುದೇ ಬ್ಯಾಂಕ್‌ಗಳು ಸಾಲ ನೀಡುತ್ತಿರಲಿಲ್ಲ. ಆದರೇ ಇಂದು ಕೋಟಿ-ಕೋಟಿ ಹಣ ಸಾಲದ ರೂಪದಲ್ಲಿ ಗ್ರಾಮದಲ್ಲಿಯೇ ಸಹಕಾರಿ ಸಂಘಗಳ ಮೂಲಕ ದೊರೆಯುತ್ತಿದೆ. ಅದಕ್ಕೆ ಹಿರಿಯರ ಮಾರ್ಗದರ್ಶನ ಮತ್ತು ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಶ್ರೇಣಿಕ ಮಾಂಗೂರೆ ವರದಿ ವಾಚನ ಮಾಡುತ್ತ, ಸಂಘದಲ್ಲಿ ಒಟ್ಟು 1814 ಸದಸ್ಯರನ್ನು ಹೊಂದಿದ್ದು, 1.69 ಕೋಟಿ ರೂ. ಶೇರ್ ಬಂಡವಾಳ, 19.53 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಮತ್ತು 3.41 ಕೋಟಿ ರೂ. ಠೇವಣಿ ಹೊಂದಿದ್ದು, ರೈತರಿಗೆ ವಿವಿಧ ರೂಪದಲ್ಲಿ ರೂ. 13.49 ಕೋಟಿ ಸಾಲ ವಿತರಿಸಲಾಗಿದೆ ಎಂದರು.
ಹಿರಿಯ ನಿರ್ದೇಶಕ ಅಭಯಕುಮಾರ ಅಕಿವಾಟೆ ಮಾತನಾಡಿ, ಅಥಣಿ, ಕಾಗವಾಡ ತಾಲೂಕಿನಲ್ಲಿಯೇ ನಮ್ಮ ಸಂಘ ಮಾದರಿ ಸಂಘವಾಗಿ ಹೊರಹೊಮ್ಮಿದ್ದು, ರೈತ ಸದಸ್ಯರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.
ಈ ವೇಳೆ ಅಣ್ಣಾಸಾಬ ಕಾತ್ರಾಳೆ, ಪರಶುರಾಮ ಧಾರವಾಡೆ, ಸಿಕಂದರ ಸದಲಗೆ, ಪ್ರಕಾಶ ಜಾಧವ, ಬಾಳು ಹಂಚನಾಳೆ, ಚಂದ್ರಕಾಂತ ಮಾನೆ, ಉಪಾಧ್ಯಕ್ಷ ಶುಭಂ ಕಾಟಕರ, ಆರ್.ಎಸ್. ಪಾಟೀಲ, ಕಿರಣ ಬೋಲೆ, ಶಿವಾನಂದ ಪಾಟೀಲ, ಅಪ್ರೋಜ್ ಕನವಾಡೆ, ಶ್ರೀಮತಿ ಜ್ಯೋತಿ ಪೋದಾಲೆ, ಶ್ರೀಮತಿ ಸಂಜೀವಿನಿ ಕಾಗವಾಡೆ, ಶ್ರೀಮತಿ ಶೋಭಾ ಶಿರಗುಪ್ಪೆ, ವಿಜಯ ಅಕಿವಾಟೆ, ಮುಕಾರಿ ವಡ್ಡರ, ಅಪ್ಪಾಸಾಬ ಕೋಳಿ ಮತ್ತು ಸಂಘದ ಸಿಬ್ಬಂದಿ ವರ್ಗದವರು, ರೈತ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ರುದ್ರಗೌಡಾ ಪಾಟೀಲ ಸ್ವಾಗತಿಸಿ, ನಿರೂಪಿದರು. ಸಿಬ್ಬಂದಿ ಪ್ರಮೋದ ಅಕಿವಾಟೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 