ಮೊಸರು ಗುಂಡಿಗೆ ಒಡೆದ ಊರ ಗೌಡರು
ಇಂಡಿ: ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಹನುಮಾನ್ ಜಯಂತಿ ನಿಮಿತ್ತವಾಗಿ ಮೊಸರು ಗುಂಡಿಗೆ ಗ್ರಾಮದ ಊರ ಗೌಡರು ಒಡಿಯುವುದರ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಶ್ರೀ ಶಾಲಿವಾಹನ ಶಕೆ 1947 ವಿಶ್ವಾವಸುನಾಮ ಸಂವತ್ಸರ ಚೈತ್ರ ಶು.14 ಶುಕ್ರವಾರ ರಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬಲಭೀಮ ದೇವರಿಗೆ ಬೆಳೆಗೆ ಆರು ಗಂಟೆಗೆ ರುದ್ರಾಭಿಷೇಕ ಹಾಗೂ ಎಲೆ ನೆರವೇರಿಸಲಾಯಿತು. ನಂತರ ಮದ್ಯಾಹ್ನ 4ಗಂಟೆಗೆ ಊರ ಗೌಡರ ಮನೆಯಿಂದ ಗೋಪಾಳ ಕಾವಲಿ ಅತಿ ವಿಜೃಂಭಣೆಯಿಂದ ವಾದ್ಯ ವೈಭವಗಳೊಂದಿಗೆ ದೇವರ ಗುಡಿಗೆ ಬಂದು ದೇವಸ್ಥಾನದಲ್ಲಿ ಗೋಪಾಳ ಕಾವಲಿ (ಮೊಸರು ಗಡಿಗೆ) ಯನ್ನು, ಸಾಂಪ್ರದಾಯಿಕ ಪದ್ಧತಿಯಂತೆ ಊರ ವಾಲಿಕಾರ ಕಟ್ಟುತ್ತಾರೆ. ಅದನ್ನು ಊರ ಗೌಡರು ಅದನ್ನು ಬಂದು ಒಡಿಯುತ್ತಾರೆ, ನಂತರ ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ವಿವಿಧ ಗ್ರಾಮಗಳಿಂದ ಬಂದ ಕುಸ್ತಿ ಪಟುಗಳಿಂದ ಕುಸ್ತಿ ಸೆಣಸಾಟ ನುಡಿಯಿತು. ಈ ಪದ್ಧತಿ ಆದಿಕಾಲದಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿ ಎಂದು ಹೇಳುತ್ತಾರೆ ಗ್ರಾಮದ ಹಿರಿಯರು.