ಲೋಕದರ್ಶನ ವರದಿ
ವಿಜಯಪುರ 06: ಜಮಖಂಡಿ, ಬಳ್ಳಾರಿ, ರಾಮನಗರ ವಿಧಾನಸಭಾ ಮತ್ತು ಮಂಡ್ಯ ಲೋಕಸಭಾ ಉಪಚುನಾಔಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯಥರ್ಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮಧ್ಯಾಹ್ನ ನಗರದ ಗಾಂಧೀವೃತ್ತದ ಬಳಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಪಟಾಕ್ಷಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ವೈಜನಾಥ ಕಪರ್ೂರಮಠ ಮಾತನಾಡಿ, ಈ ಉಪಚುನಾವಣೆಯ ಫಲಿತಾಂಶವನ್ನು ನೋಡಿದರೆ ಜನರು ದೇಶದಲ್ಲಿ ಬದಲಾವಣೆ ಬಯಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮತದಾರರು ಬಿಜೆಪಿಗೆ ಒಂದು ತಕ್ಕ ಪಾಠ ಕಲಿಸಿದ್ದಾರೆ. ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ ಖಾದರ ಮಾತನಾಡಿ, ಉಪಚುನಾಔಣೆಯ ಪಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಬಿಜೆಪಿ ಸರಕಾರದ ಆಡಳಿತ ಹಾಗೂ ಮೋದಿ ಅವರ ಸುಳ್ಳು ಭರವಸೆಯಿಂದ ಜನತೆ ರೋಷಿಹೋಗಿದ್ದು, ಕಾಂಗ್ರೆಸ್ನತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎಂದರು.
ಪಕ್ಷದ ಮುಖಮಡರಾದ ್ಲ ಐ.ಎಮ್. ಇಂಡಿಕರ, ಪವರ್ೆಜ ಚಟ್ಟರಕಿ ಮಾತನಾಡಿದರು. ಈ ವಿಜಯೋತ್ಸವದಲ್ಲಿ ಡಿಸಿಸಿ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಜ್ಯೋತಿರಾಮ ಪವಾರ, ಶ್ರೀಕಾಂತ ಛಾಯಾಗೋಳ, ಸರತಾಜ್ ಬೀಳಗಿ, ವಸಂತ ಹೊನಮೊಡೆ, ಜಮೀರ ಬಾಂಗಿ, ಇದ್ರುಸ್ ಭಕ್ಷಿ, ತಾಜುದ್ದಿನ ಖಲೀಪಾ, ಅನುಪ(ಪ್ರತಾಪ)ಬಬಲೇಶ್ವರ, ಶೌಕತ್ ಕೋತವಾಲ, ಪೈರುಜ ಭಳಬಟ್ಟಿ, ಡಿ.ಎಸ್.ಮುಲ್ಲಾ, ದಾವಲಸಾಬ ಬಾಗವಾನ, ಗೌಸ ಮುಜಾವರ, ಪ್ರೇಮ ಜಾಧವ, ಅನೀಲ ರಾಠೋಡ, ಎಮ್.ಎ.ಭಕ್ಷಿ, ಅಶ್ರಫ್ ಇಂಡಿಕರ, ಹಾಜಿಲಾಲ ದಳವಾಯಿ, ಮಹಮ್ಮದ ಭಕ್ಷಿ, ಖಾಜಿ, ನಜೀರ ಹಂಚಿನಾಳ, ಮತ್ತು ಈ ಸಂದರ್ಭದಲ್ಲಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.