ಲೋಕದರ್ಶನ ವರದಿ
ಬಳ್ಳಾರಿ27: ನಮ್ಮ ಉತ್ತರ ಕನರ್ಾಟಕ ಭಾಗಕ್ಕೆ ಅನ್ಯಾಯವಾದರೇ ರಾಜೀನಾಮೆಗೂ ಸಿದ್ದ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಪ್ರತಿ ಕ್ರೀಯೆ ನೀಡಿದರು. ನಮಗೆ ರಾಜಕೀಯ ಮುಖ್ಯವಲ್ಲ. ನಮ್ಮ ಜನತೆ ಮುಖ್ಯ. ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ. ಹಾಲಿ ಸಮ್ಮಿಶ್ರ ಸಕರ್ಾರದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಯೋಜೆನೆಗಳ ಅನುಷ್ಟಾನ, ಅನುದಾನ, ನೀಡಿಕೆಯಲ್ಲಿ ಅನ್ಯಾಯವನ್ನು ಮುಂದುವರೆಸಿದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉತ್ತರ ಕನರ್ಾಟಕದ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಲು ನಾನೆ ಮುಂದಾಳತ್ವ ವಹಿಸಿಕೊಳ್ಳುವುದಾಗಿ ಹೇಳಿದರು.
ನಗರದ ಹವಂಬಾವಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಸಾಲಮನ್ನಾ ಮತ್ತು ಮಹದಾಯಿ ಹೋರಾಟದ ವಿಷಯದಲ್ಲಿ ಉತ್ತರ ಕನರ್ಾಟಕ ಭಾಗದ ರೈತರಿಗೆ ಮುಖ್ಯಮಂತ್ರಿಗಳು ಅಗೌರವದಿಂದ ಮಾತನಾಡಿರುವುದನ್ನು ನಾನು ಸಹಿಸಲಾರೆ. ಆಂಧ್ರ ಪ್ರದೇಶದಲ್ಲಿ ತೆಲಂಗಾಣಕ್ಕಾಗಿ ನಡೆದ ಹೋರಾಟವನ್ನು ಸ್ಮರಿಸಿದ ಅವರು ಅಂತಹ ಹೋರಾಟಕ್ಕೆ ನಾನು ಸದಾ ಸಿದ್ದನಿದ್ದೇನೆ. ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಹೋರಾಟ ನಡೆಸುವವರೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು. ಪತ್ರಕರ್ತರನ್ನು ವಿಧಾನಸೌದದ ಬಳಿ ನಿಯಂತ್ರಿಸುವ ಮೂಲಕ ಅವರು ಹಿಟ್ಲರ್ ರೀತಿಯಲ್ಲಿ ಆಡಳಿತ ನಡೆಸಲು ಮುಂದಾಗಿದ್ದಾರೆ. ಉತ್ತಮ ಆಡಳಿತ ನಡೆಸುತ್ತೇನೆ ಎಂದು ಹೇಳಿದ ಅವರು ಅಧಿಕಾರವಹಿಸಿಕೊಂಡು ಎರಡು ತಿಂಗಳು ಕಳೆದರೂ ಇನ್ನೂ ಜಿಲ್ಲಾ ಮಂತ್ರಿಗಳನ್ನ ನೇಮಕ ಮಾಡಿಲ್ಲ ಎಂದು ಟೀಕಿಸಿದರು.
ರಾಜ್ಯ ಹೊಡೆಯಲು ಸನ್ನಿದ್ದರಾಗಿದ್ದರೂ ಎನ್ನುವ ಪ್ರಶ್ನೆಗೆ ಅಖಂಡ ಕನರ್ಾಟಕ ವಾಗಿರಬೇಕೆಂಬುಹುದೆ ನನ್ನ ಅಂಬಲ. ಆದರೇ ಉತ್ತರ ಕನರ್ಾಟಕಕ್ಕೆ ಅನ್ಯಾಯವಾದರೇ ನಾನೇಕೆ ಸುಮ್ಮನೆ ಕುಳಿತುಕೊಳ್ಳಲಿ ಎಂದು ಉತ್ತರಿಸಿದರು. ಮೂಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅವರ ಸಹೋದರ ರೇವಣ್ಣ ಅವರು ಹಾಸನ, ಮಂಡ್ಯ, ರಾಮನಗರ ಬಿಟ್ಟು ಬೇರೆ ಜಿಲ್ಲೆಗಳಿಗೆ ಹೋಗುತ್ತಿಲ್ಲ.
ಕರಾವಳಿಯಲ್ಲಿ ನೆರೆಬಂದರೂ ಅಲ್ಲಿಗೆ ಹೋಗಿಲ್ಲ. ಕೃಷ್ಣಾನದಿ ತುಂಬಿಹರಿದರೂ ಇತ್ತ ಬರಲಿಲ್ಲ. ಬೆಳಗಾವಿಯಲ್ಲಿದ್ದ ಕೆಶಿಫ್ ಎನ್ನುವ ಸಂಸ್ಥೆಯನ್ನು ಹಾಸನಕ್ಕೆ ವರ್ಗಮಾಡಿಕೊಂಡಿದ್ದಾರೆ. ಇದರ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು. ಅವರ ಮಂತ್ರಿಮಂಡಳದ ಸಚಿವ ಜಮಿರ್ಅಹ್ಮದ್, ಹೇಲಿದಂತೆ ಸಿ.ಎಂ ಕುಮಾರಸ್ವಾಮಿ ವಿಕ್ಸ್ ಹಚ್ಚಿಕೊಂಡುಬಂದು ಜನರ ಮುಂದೆ ಏಕೆ ಅಳುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಟಿಕಿಸಿದ್ದಾರೆ.
ಈ ಬಾರಿ ಉತ್ತರ ಕನರ್ಾಟಕದಿಂದ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಉತ್ತರ ಕನರ್ಾಟಕಕ್ಕೆ ಅನ್ಯಾಯವಾಗಿದೆ ಎಂದು ಗೊತ್ತಿದ್ದರೂ ಏಕೆ ಮಾತನಾಡುತ್ತಿಲ್ಲ ಎಂದು ವಿಷಾದ ಸಂಘತಿ ಎಂದರು. ಈ ಸಕರ್ಾರದಲ್ಲಿ ಬರಿ ವಗರ್ಾವಣೆ ದಂದೆಗೆ ಮುಂದಾಗಿರುವುದು ಎಲ್ಲರಿಗೂ ಕಾಣುವ ವಿಷಯವಾಗಿದೆ.