ಲೋಕದರ್ಶನವರದಿ
ಗುಳೇದಗುಡ್ಡ07: ಮಕ್ಕಳು ದೇವರ ಸ್ವರೂಪವಾಗಿದ್ದು, ಅರಳುವ ಹೂಗಳಂತೆ. ಅವರಲ್ಲಿ ಇರುವ ನೈಜ ಪ್ರತಿಭೆಯನ್ನು ಗುರುತಿಸಿ ಮಕ್ಕಳ ಸವರ್ಾಂಗೀಣ ಬೆಳವಣಿಗೆಗೆ ಶಿಕ್ಷಕರು ಮತ್ತು ಪಾಲಕರು ಪ್ರೋತ್ಸಾಹ ನೀಡಬೇಕೆಂದು ಸಂಸ್ಥೆಯ ಗೌರವ ಅಧ್ಯಕ್ಷ ಬಸವರಾಜ ಪಟ್ಟದಾರ್ಯಶ್ರೀಗಳು ಹೇಳಿದರು.
ಪಟ್ಟಣದ ಪ್ರತಿಷ್ಠಿತ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಅಂತರ್ರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಜರುಗಿದ ವಾಷರ್ಿಕ ಸ್ನೇಹ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಲಹೊಂಗಲ ಕೆ.ಆರ್.ಸಿ.ಇ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಎಮ್. ಸಿ. ಬಿರಾದಾರ ಮಾತನಾಡಿ, ಜಗದ್ಗುರು ಗುರುಸಿದ್ಧೇಶ್ವರ ಅಂತರ್ರಾಷ್ಟ್ರೀಯ ಪಬ್ಲಿಕ್ ಶಾಲೆಯು ಗುರುವಿನ ದಿವ್ಯ ಶಕ್ತಿಯಿಂದ ಸ್ಥಾಪನೆಯಾಗಿದ್ದು, ಗುಳೇದಗುಡ್ಡ ಸುತ್ತಲಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹೆಸರುವಾಸಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಡಿಜಿಟಲ್ ಯುಗದಲ್ಲಿ ಪಾಲಕರು ಮನೆಯಲ್ಲಿ ಶಿಕ್ಷಕರಾಗಿ ಮಕ್ಕಳ ಅಭ್ಯಾಸದ ಉಸ್ತುವಾರಿ ಮಾಡಬೇಕು ಮತ್ತು ಶಾಲೆಯಲ್ಲಿ ಶಿಕ್ಷಕರು ಪಾಲಕರಾಗಿ ಮಕ್ಕಳಿಗೆ ಅತ್ಯಂತ ಪ್ರೀತಿ ಮಮತೆಯಿಂದ ನೈತಿಕ ಮೌಲ್ಯಗಳನ್ನು ಕಲಿಸುವದರ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಇನೋರ್ವ ಅತಿಥಿಗಳಾದ ಬಾಗಲಕೋಟೆಯ ಬಸವೇಶ್ವರ ಪದವಿ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ರಾಜಗೋಪಾಲ ಕಲ್ಯಾಣಿ ಮಾತನಾಡಿ , ಪಾಲಕರು ಕೇವಲ ಅಂಕಗಳಿಗೆ, ರ್ಯಾಂಕ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬಾರದು. ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಅರಿತು ಅವರಲ್ಲಿ ಮಾನಸಿಕ ದೈರ್ಯವನ್ನು ತುಂಬಿ ಕಲಿಕೆಗೆ ಪ್ರೋತ್ಸಾಹಿಸಬೇಕು. ಮಕ್ಕಳು ಕಲಿಕೆಯ ಜೊತೆ ಜೊತೆಗೆ ಗುರುಗಳಿಗೆ ಹಾಗೂ ಹಿರಿಯರಿಗೆ ಗೌರವಿಸುವ ಸಂಸ್ಕಾರ ಸಂಸ್ಕೃತಿಯನ್ನು ರೂಡಿಸಿಕೊಳ್ಳಬೇಕು.
ತಮ್ಮ ವ್ಯಾಸಂಗದ ಅವಧಿಯಲ್ಲಿ ನಿಷ್ಠೆಯಿಂದ ಅಭ್ಯಾಸಮಾಡಿ ಉತ್ತಮವಾದ ಜ್ಞಾನವನ್ನು ಪಡೆದುಕೊಂಡು ವಿವಿಧ ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಜಯಗಳಿಸಿ ಉತ್ತಮವಾದ ಸಾಧನೆ ಮಾಡಬೇಕೆಂದು ಹೇಳಿದರು.
ಬಾಗಲಕೋಟೆಯ ಬಸವೇಶ್ವರ ಅಂತರ್ರಾಷ್ಟ್ರೀಯ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಸಿ.ಬಿ. ಸುರೇಶ ಹೆಗಡೆ ಅವರು ಮಾತನಾಡಿ, ಗುರುಸಿದ್ಧೇಶ್ವರ ಸಿಬಿಎಸ್ಇ ಶಾಲೆಯಲ್ಲಿ ದೀಪಗಳಿಂದ ಅಲಂಕಾರಗೊಂಡ ಶಾಲೆ ಮತ್ತು ಶಿಶ್ತುಬದ್ದವಾಗಿ ಆಯೊಜಿಸಿದ ಗುರುತರಂಗ ಫೆಸ್ಟ್ ನೋಡಿ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಮತ್ತು ಮಕ್ಕಳ ಉನ್ನತಿಗಾಗಿ ಸಂಸ್ಥೆಯ ಚೇರಮನ್ ಹಾಗೂ ಆಡಳಿತ ಮಂಡಳಿಯ ಸರ್ವಸದಸ್ಯರು ವಿಶೇಷ ಕಾಳಜಿಯಿಂದ ಶ್ರಮಿಸುತ್ತಿದ್ದಾರೆ.
ವಿಶೇಷವಾಗಿ ಬಸವರಾಜ ಪಟ್ಟದಾರ್ಯ ಸ್ವಾಮೀಜಿಯ ಕೃಪಾಶೀವರ್ಾದ ಈ ಶಾಲೆಯ ಹಾಗೂ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾಥರ್ಿಗಳ ಮೇಲಿದ್ದು, ಇಲ್ಲ್ಲಿ ಕಲಿತ ಮಕ್ಕಳು ಉತ್ತಮ ಸಾಧನೆ ಮಾಡುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಸ್ಥೆಯ ಚೇರಮನ್ರಾದ ಜಿ.ಎಸ್.ಜವಳಿ ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಿಬಿಎಸ್ಇ ಶಾಲೆಯ ಶಿಕ್ಷಕ ಶಿಕ್ಷಕಿಯರು ಅಭ್ಯಾಸ, ಕ್ರೀಡೆ ಮತ್ತು ಸಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದರಿಂದ ಶಾಲೆಯ ಮಕ್ಕಳು ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ನಮ್ಮ ಶಾಲೆ ಮಕ್ಕಳ ಸವರ್ಾಂಗೀಣ ಅಭಿವೃದ್ದಿಗಾಗಿ ಶಿಕ್ಷಣ ನೀಡುವಲ್ಲಿ ಶ್ರಮಿಸಿದ್ದಾರೆ. ನಮ್ಮ ಶಾಲೆಯ ಶಿಕ್ಷಕ-ಶಿಕ್ಷಕಿಯರ ಪ್ರಾಮಾಣಿಕ ಮತ್ತು ಕ್ರೀಯಾತ್ಮಕ ಕರ್ತವ್ಯ ನಿಷ್ಠೆ ಹಾಗೂ ಎಲ್ಲ ಪಾಲಕರ ಪ್ರೀತಿ ಪೂರ್ವಕ ಸಹಕಾರ ಕಾರಣವಾಗಿದ್ದು ಎಂದು ಹೇಳಿ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ನೆಹರು ಅಂತರ್ರಾಷ್ಟ್ರೀಯ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಸಾಯಿಕ್ರಿಷ್ಣ, ಪಿ.ಇ.ಟಿ. ಅಂತರಾಷ್ಟ್ರೀಯ ಶಾಲೆಯ ಪ್ರಾಚಾರ್ಯ ಪರಶುರಾಮ ವನಸಿ, ಬದಾಮಿಯ ನವಚೇತನ ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾಯ ಪಿ. ವಾಸು, ಮತ್ತು ಬಾಗಲಕೋಟೆಯ ತೇಜಸ್ ಅಂತರ್ರಾಷ್ಟ್ರೀಯ ಪ್ರಾಚಾರ್ಯರಾದ ಸಚೀನ ಬಾಟ್ರಾ ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು.