ಲೋಕದರ್ಶನ ವರದಿ
ಬೆಳಗಾವಿ 14: ಶೈಕ್ಷಣಿಕ, ಸಂಶೋಧನೆ ಮತ್ತು ಆಡಳಿತಾತ್ಮಕವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸವರ್ಾಂಗೀಣ ಬೆಳವಣಿಗೆಗೆ ರಾಜ್ಯ ಸಕರ್ಾರ ಸಂಪೂರ್ಣ ಪ್ರಯತ್ನಿಸುವುದರ ಮೂಲಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ರಾಷ್ಟ್ರದ ಮಾದರಿ ವಿಶ್ವವಿದ್ಯಾಲಯವನ್ನಾಗಿಸುವ ಗುರಿ ರಾಜ್ಯ ಸಕರ್ಾರ ಹೊಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಹೇಳಿದರು.
ವಿಧಾನ ಮಂಡಲ ಅಧಿವೇಶನದ ನಿಮಿತ್ತ ನಗರಕ್ಕೆ ಆಗಮಿಸಿದ್ದ ಸಚಿವದೇವೆಗೌಡ, ಗುರುವಾರ ಆಕಸ್ಮಿಕ ಭೇಟಿ ನೀಡಿ, ವಿವಿಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ವಿವಿಯ ಕುಲಪತಿ ಪ್ರೊ.ಶಿವಾನಂದ ಹೊಸಮನಿ, ಕುಲಸಚಿವರಾದ ಪ್ರೊ.ಸಿದ್ದು ಆಲಗೂರು, ಕುಲಸಚಿವರು(ಮೌಲ್ಯಮಾಪನ)ರಾದ ಪ್ರೊ.ರಂಗರಾಜ ವನದುರ್ಗ ಹಾಗೂ ಹಣಕಾಸು ಅಧಿಕಾರಿಗಳಾದ ಪರಶುರಾಮ ದುಡಗುಂಟಿ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಚಚರ್ೆ ನಡೆಸಿ ವಿವಿಯ ಮುಂದಿನ ಯೋಜನೆಗಳ ಕುರಿತಾಗಿ ಮಾಹಿತಿ ಪಡೆದರು. ಆರ್ಸಿಯು ಭೂಮಿ ಹಸ್ತಾಂತರ ವಿಷಯ ಕುರಿತಂತೆ ಖುದ್ದಾಗಿ ದೆಹಲಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಚಚರ್ಿಸಿ, ಶೀಘ್ರ ಸಮಸ್ಯೆ ನಿವಾರಣೆಗೆ ಅವಶ್ಯವಿರುವ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದರು.
ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅಹವಾಲು ಮತ್ತು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಸಮಗ್ರ ಮಾಹಿತಿ ಪಡೆದು ತ್ವರಿತಗತಿಯಲ್ಲಿ ಎಲ್ಲ ಸಮಸ್ಯೆಗಳಿಗೆ ಸಕರ್ಾರದ ಮಟ್ಟದಲ್ಲಿ ಪರಿಹರಿಸಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕುಲಪತಿಗಳಾದ ಪ್ರೊ.ಶಿವಾನಂದ ಹೊಸಮನಿ, ಕುಲಸಚಿವರಾದ ಪ್ರೊ.ಸಿದ್ದು ಆಲಗೂರು, ಕುಲಸಚಿವರು (ಮೌಲ್ಯಮಾಪನ)ರಾದ ಪ್ರೊ.ರಂಗರಾಜ ವನದುರ್ಗ ಹಾಗೂ ಹಣಕಾಸು ಅಧಿಕಾರಿಗಳಾದ ಪರಶುರಾಮ ದುಡಗುಂಟಿ ಮತ್ತು ವಿವಿಧ ವಿಭಾಗಗಳ ಡೀನ್ರು ಮತ್ತು ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.