ಪಟ್ಟಣ ವ್ಯಾಪಾರ ಸಮಿತಿ ಚುನಾವಣೆ ಸದಸ್ಯರ ಅವಿರೋಧ ಆಯ್ಕೆ

ಲೋಕದರ್ಶನವರದಿ

ಮಹಾಲಿಂಗಪುರ೧೧ :  ಇತ್ತೀಚೆಗೆ ಸ್ಥಳೀಯ ಸಂಸ್ಥೆಯ ಪಟ್ಟಣ ವ್ಯಾಪಾರ ಸಮಿತಿ ಚುನಾವಣೆ ನಡೆಯಿತು.  

              ಎಲ್ಲಾ ಚುನಾಯಿತ ಸದಸ್ಯರನ್ನು ಸನ್ಮಾನಿಸಿ ನೇಕಾರ ನಾಯಕ ಮನೋಹರ ಶಿರೋಳ ಮಾತನಾಡಿ ಎಲ್ಲಾ ಸಂಸ್ಥೆಗಳಿಗೆ ಚುನಾವಣೆ ನಡೆಯುವಂತೆ ಬೀದಿ ವ್ಯಾಪಾರಿಗಳ ಚುನಾವಣೆ ನಡೆದದ್ದು ಸಂತೋಷದ ವಿಷಯ. ಏಕೆಂದರೆ ಈ ವಲಯ ಅಸಂಘಟಿವಾಗಿದ್ದು ಚುನಾವಣೆಯಿಂದ ಇವರಿಗೊಂದು ಆಯಾಮ ಸಿಕ್ಕಂತಾಗಿದೆ. ಎಲ್ಲರಂತೆ ತಮ್ಮ ಹಕ್ಕು ಬಾದ್ಯತೆಗಳನ್ನು ಸಂರಕ್ಷಿಸಿಕೊಳ್ಳಲು ವೇದಿಕೆ ನಿಮರ್ಾಣವಾಗಿದೆ ಎಂದು ಅವರ ಪರ ಕಳಕಳಿಯ ಮಾತುಗಳನ್ನಾಡಿದರು. 

                 ಪುರಸಭಾ ಸದಸ್ಯ ಶೇಖರ ಅಂಗಡಿ ಮಾತನಾಡಿ ಏನೂ ಅರಿಯದ ಇವರಿಗೆ ತಮ್ಮ ಇರುವಿಕೆಯ ಹಾಗೂ ಗೌರವಯುತವಾಗಿ ಬದುಕಲು ಈ ಚುನಾವಣೆಯು ಹೊಸ ಮಾರ್ಗ ತೆರೆದಿದ್ದು ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಅನುವು ಆಗಿದೆ ಎಂದು ಹೇಳಿದರು. 

            ಮನೋಹರ ಕಲಾಲ, ಪ್ರೇಮಾ ಯಡ್ರಾಂವಿ, ಜನ್ನತಬಿ ನದಾಫ್, ಮಲ್ಲಪ್ಪ ತಿಪಶೆಟ್ಟಿ, ಕೇದಾರಿ ಮಾಳಿ, ಬಸಪ್ಪ ರುದ್ರನ್ನವರ, ಏಗವ್ವ ಬುರುಡ, ಆರೀಫ್ ಗಡೇಕಾರ, ಅಕ್ಕತಾಯಿ ಭಜಂತ್ರಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟನರ್ಿಂಗ್ ಆಫೀಸರ್ ಎಸ್. ಕೆ. ಸಾರವಾಡ ಈ ಮೂಲಕ ಘೋಷಣೆ ಮಾಡಿದ್ದಾರೆ. 

           ಈ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಶೇಖರ ಅಂಗಡಿಯವರ ಯೋಗದಾನ ದೊಡ್ಡದು ಈ ಎಲ್ಲ ಶ್ರೇಯ ಅವರಿಗೆಯೇ ಸಲ್ಲಬೇಕೆಂದು ಎಂದು ಚುನಾಯಿತರು ಅವರ ಸಹಕಾರಕ್ಕೆ ಧನ್ಯ ನುಡಿ ನುಡಿದರು.