ಲೋಕದರ್ಶನ ವರದಿ
ಹೂವಿನಹಡಗಲಿ : ಸಾಂಸ್ಕೃತಿಕ ಪರಂಪರೆಗೆ ಬುಡಕಟ್ಟು ಜನಾಂಗದ ಕೊಡುಗೆ ಅಪಾರ ಎಂದು ಕನ್ನಡ ಪಂಡಿತರಾದ ತುಳಜಾನಾಯ್ಕ ಹೇಳಿದರು.
ತಾಲೂಕಿನ ಕೊಮಾರನಹಳ್ಳಿತಾಂಡದ ಗೋಗಲಬಾಯಿ ಹರಿಶ್ಚಂದ್ರನಾಯ್ಕ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕನರ್ಾಟಕ ಸಾಹಿತ್ಯ ಅಕಾಡಮಿಯ ಚಕೋರ-441 ಕವಿಕಾವ್ಯ ವಿಚಾರ ವೇದಿಕೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಾಡುನುಡಿ ಸೇವೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಾವೇರಿಯ ಮುಖ್ಯಗುರುಗಳಾದ ಗುಡಿಗೇರಿ ಮಾತನಾಡಿ ಸಿರಿಗನ್ನಡ ನಾಡು ಶ್ರೀಗಂಧದ ಬೀಡು ಸಕಲ ವೈಭವದ ನಮ್ಮ ನಾಡಿನ ಬಗೆಗೆ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕಾಗಿದೆ ಎಂದರು.
ಮಿರಾಕೊರ್ನಹಳ್ಳಿ ಪ್ರೌಢಶಾಲಾಯ ಹಿಂದಿ ಪಂಡಿತರಾದ ಎಲ್.ಖಾದರಬಾಷ, ಗಾಧೆಗಳು, ಒಡಪುಗಳು ತತ್ವ ಪದಗಳು ಹಳ್ಳಿಗಳ ತಾಂಡಗಳ ಸಾಹಿತ್ಯ ಸಂಪತ್ತು ಕನ್ನಡ ಸಾಹಿತ್ಯದ ತಾಯಿ ಬೇರುಗಳೆಂದರು.
ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿಯ ಪ್ರತಿನಿಧಿ ಡಾ.ಅಂಜನಾಕೃಷ್ಣಪ್ಪ, ಶಿಕ್ಷಕರಾದ ಮಂಜ್ಯಾನಾಯ್ಕ, ರೂಪ್ಲನಾಯ್ಕ, ಚನ್ನನಾಯ್ಕ, ಕಬೀರದಾಸ್, ಕನ್ನಡ ಪಂಡಿತರಾದ ಕೋಟೆಪ್ಪ ಮತ್ತೂರು ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಗುರುಗಳಾದ ದಾದಾಸಾಹೇಬ್ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಗುರುಪ್ರಸಾದ್, ಮೋಹನ್, ರೋಜಾ, ಪ್ರಿಯಾಂಕ, ಲಲಿತಾಬಾಯಿ, ಕಾವ್ಯ, ಪವಿತ್ರ ಶೋಭಾ ರವರುಗಳು ಕವಿತೆ ವಾಚಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.