ವಿಜಯಪುರ, 23 : ರೈಲು ಹಾಯ್ದು 20 ಕ್ಕೂ ಹೆಚ್ಚು ಕುರಿಗಳು ಹಾಗೂ ಮೇಕೆಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಶುಕ್ರವಾರ ಬೆಳಿಗ್ಗೆ 10.30 ರ ಸುಮಾರಿಗೆ ನಗರ ಹೊರವಲಯದ ಅಲಿಯಾಬಾದ ಸಮೀಪ ಸಂಭವಿಸಿದೆ.
ರೇಲ್ವೆ ಹಳಿ ಪಕ್ಕದಲ್ಲಿ ಕುರಿಗಳು ಮೇಯುತ್ತಿದ್ದಾಗ ಅದೇ ವೇಳೆ ವಿಜಯಪುರದಿಂದ-ಸೊಲ್ಲಾಪೂರಕ್ಕೆ ರೈಲು ಹೊರಟಿತ್ತು. ಆಗ ರೈಲಿನ ಸದ್ದು ಕೇಳಿ ಕುರಿಗಳು ಗಾಬರಿಗೊಂಡು ಹಿಂಡು-ಹಿಂಡಾಗಿ ಓಡಿ ಹೋಗುವಾಗ ರೈಲಿನಡಿ ಸಿಕ್ಕು ಸಾವನ್ನಪ್ಪಿವೆ ಎಂದು ರೇಲ್ವೆ ಪೊಲೀಸರು ತಿಳಿಸಿದ್ದಾರೆ.
ಪಾಂಗರೂನ ಹಟ್ಟಿಯ ಸಾಳುಂಕೆ ಎಂಬವರಿಗೆ ಈ ಕುರಿಗಳು ಸೇರಿವೆ ಎನ್ನಲಾಗಿದೆ.
ರೈಲು ಹಾಯ್ದು ಕುರಿಗಳು ಸಾವನ್ನಪ್ಪಿದ್ದರಿಂದ ಸಾಳುಂಕೆ ಅವರಿಗೆ ತುಂಬಾ ಹಾನಿಯಾಗಿದೆ. ಘಟನೆಯಿಂದಾಗಿ ತೀವ್ರ ನೊಂದಿರುವ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ರೈಲ್ವೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ವಿಜಯಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.