ರೋಚಕತೆ ಹುಟ್ಟಿಸಿದೆ ದಬಾಂಗ್-ಮುಂಬಾ ಹೋರಾಟ

ದೆಹಲಿ, ಆ 26,     ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬುಧವಾರ ಗುಜರಾತ್ ಫಾರ್ಚುನ್ ಜೇಂಟ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಮೊದಲ ಪಂದ್ಯದಲ್ಲಿ ಕಾದಾಟ ನಡೆಸಿದರೆ, ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಹಾಗೂ ಯು ಮುಂಬಾ ತಂಡಗಳು ಸೆಣಸಾಡಲಿವೆ.  

ಗುಜರಾತ್ ತಂಡದ ಪರ ಸುನೀಲ್ ಕುಮಾರ್ ಹಾಗೂ ಪವರ್ೆಶ್ ರಕ್ಷಣಾ ವಿಭಾಗದಲ್ಲಿ ತಂಡಕ್ಕೆ ಅಂಕಗಳನ್ನು ತಂದು ಕೊಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ದಾಳಿಯಲ್ಲಿ ರೋಹಿತ್ ಗುಲಿಯಾ ಅಂಕ ಬೇಟೆ ನಡೆಸಿ, ತಂಡಕ್ಕೆ ನೆರವಾಗಬಲ್ಲರು.  ಹರಿಯಾಣ ಪರ ರೈಟ್ ಕಾರ್ನರ್ ಡಿಫೆಂಡರ್ ಸುನಿಲ್ ಎದುರಾಳಿಗಳಿಗೆ ಕಾಡಬಲ್ಲರು. ವಿಕಾಶ್ ಕಂಡೋಲಾ  ಸಹ ಎದುರಾಳಿ ಕೋರ್ಟ್ನಲ್ಲಿ ಅಬ್ಬರಿಸಬಲ್ಲರು.  

ದೆಹಲಿ ತಂಡದ ಪರ ನವೀನ್ ಕುಮಾರ್ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಅಭಿಮಾನಿಗಳ ಮನ ಗೆದ್ದಿದೆ. ಪ್ರಸಕ್ತ ಟೂರ್ನಿಯಲ್ಲಿ ನವೀನ್ ದಾಳಿಯಲ್ಲಿ ಹೆಚ್ಚು ಅಂಕ ಕಲೆ ಹಾಕಿದವರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಕ್ಷಣಾ ವಿಭಾಗದಲ್ಲಿ ಜೋಗಿಂದರ್ ಸಿಂಗ್ ನರ್ವ್ಲ್ ತಂಡದ ಚಿತ್ತ ಕದ್ದಿದ್ದಾರೆ. ಯು ಮುಂಬಾ ತಂಡದ ಪರ ಫಜಲ್ ಟ್ಯಾಕಲ್ ನಲ್ಲಿ ಕಮಾಲ್ ಪ್ರದರ್ಶನ ನೀಡತ್ತಿದ್ದು, ಇವರಿಗೆ ಉಳಿದ ಆಟಗಾರರು ತಕ್ಕ ಸಾಥ್ ನೀಡಬೇಕಿದೆ.  

ನಾಲ್ಕೂ ತಂಡಗಳು ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿವೆ. ಬುಧವಾರ ಯಾರು ಜಯದ ಮಾಲೆ ತೊಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.