ರಾಜಕೀಯ ವ್ಯವಸ್ಥೆಗೆ ಮಗ್ಗುಲ ಮುಳ್ಳು, ಇದು ದನ ಕಡಿಯುವ ಕಾಂಗ್ರೆಸ್ : ಸಿ.ಟಿ. ರವಿ

ರಾಯಚೂರು, ನ 6:    ರಾಜಕೀಯ ವ್ಯವಸ್ಥೆಗೆ ಈಗಿನ ಕಾಂಗ್ರೆಸ್ ಮಗ್ಗುಲ ಮುಳ್ಳಾಗಿದ್ದು, ಪ್ರಸ್ತುತ ಈ ರಾಷ್ಟ್ರೀಯ ಪಕ್ಷ ದನ ಕಡಿಯುವ ಕಾಂಗ್ರೆಸ್ ಆಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಅವರ ಕಾಂಗ್ರೆಸ್ ಈಗ ಉಳಿದಿಲ್ಲ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಆಗಲೇ ಗೋ ಹತ್ಯೆ ಬೇಡ ಎಂದಿದ್ದರು. ಆದರೆ ಕಾಂಗ್ರೆಸ್ ನವರು ಅವರ ಆಶಯಕ್ಕೆ ಒತ್ತು ನೀಡಿಲ್ಲ. ಈಗಿನ ಕಾಂಗ್ರೆಸ್ ನವರು ದನ ಕಡೆಯುವವರು ಎಂದರು.  ಮಹಾತ್ಮ ಗಾಂಧೀಜಿ ಕುಟುಂಬ ರಾಜಕೀಯ ಬೇಡ ಎಂದಿದ್ದರು. ಈಗಿನ ಕಾಂಗ್ರಸ್ ಗೆ ಕುಟುಂಬ ರಾಜಕಾರಣವೇ ಪ್ರಮುಖವಾಗಿದೆ. ಹಳೆಯ ಕಾಂಗ್ರೆಸ್ ಭ್ರಷ್ಟರ ವಿರುದ್ದದ ಕಾಂಗ್ರೆಸ್ ಆಗಿದ್ದರೆ ಈಗಿನದ್ದು ಬೋಳಿಸುವ ಕಾಂಗ್ರೆಸ್ ಎಂದು ಟೀಕಿಸಿದರು.  ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರ ರೈತರ ಹಿತಾಸಕ್ತಿಯನ್ನು ಮನಗಂಡು ಆರ್ ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಮೋದಿ ಸರ್ಕಾರ ರೈತರ ಹಿತರಕ್ಷಣೆ ಮಾಡುತ್ತದೆಯೋ ಇಲ್ಲವೋ ಎಂದು ಪ್ರತಿಪಕ್ಷಗಳ ನಾಯಕರು ಜನರಲ್ಲಿ ಗೊಂದಲ ಮೂಡಿಸಿದ್ದರು.  ಹಾಗೊಂದು ವೇಳೆ ಪಂಡಿತ್ ಜವಾಹರ್ ಲಾಲ್ ನೆಹರು ಅಧಿಕಾರದಲ್ಲಿ ಇದ್ದಿದ್ದರೆ ಈ ಒಪ್ಪಂದ  ಒಪ್ಪಿಕೊಳ್ಳುತ್ತಿದ್ದರೋ ಏನೋ ಗೊತ್ತಿಲ್ಲ.  ಆದರೆ ನರೇಂದ್ರ ಮೋದಿ ರೈತರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.  ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸರ್ಕಾರಕ್ಕೆ ಅಭಯ ನೀಡಿದ್ದಾರೆ. ಜೆಡಿಎಸ್ ಪಕ್ಷ ಬಿಜೆಪಿ ಸರ್ಕಾರವನ್ನು ರಕ್ಷಿಸಲು ಮುಂದಾಗಿದೆ ಎನ್ನುವ ಮಾಧ್ಯಮಗಳ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ದೇವೇಗೌಡರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಗೌಡರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಒಂದು ವೇಳೆ ಚುನಾವಣೆ ನಡೆದರೆ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುತ್ತದೆ ಎಂದರು.  ಬಿಜೆಪಿ ಸರಕಾರ ಉರುಳಿಸಲು ನಡೆದಿರುವ ಯಾವುದೇ ಪ್ರಯತ್ನ ಸಫಲವಾಗುವುದಿಲ್ಲ. ಅದಕ್ಕೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಏನೆಲ್ಲಾ ನಡೆದಿದೆ ಎನ್ನುವುದನ್ನು ಒಂದೊಂದಾಗಿ ಬಿಚ್ಚಿಡುತ್ತೇವೆ ಎಂದರು.  ಬಿಜೆಪಿ ಸರ್ಕಾರ ರಚಿಸಲು ಕಾರಣರಾಗಿರುವ 17 ಅನರ್ಹ ಶಾಸಕರನ್ನು " ಅನರ್ಹ ಪತಿರ್ವತೆಯರು " ಎಂದು ಟೀಕಿಸಿರುವ ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಅವರನ್ನು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡ ಸಿ.ಟಿ. ರವಿ, ಕಾಂಗ್ರೆಸ್ ನವರು ಬೇರೆ ಪಕ್ಷದವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿರುವ ಇತಿಹಾಸವಿದೆ. ಹಾಗೆಂದರೆ ಅವರನ್ನು ಏನನ್ನಬೇಕು. ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ. ಸಿ ಎಂ ಇಬ್ರಾಹಿಂ ರೀತಿಯ ಗರತಿಯರು ನಮಗೆ ಬೇಡ. ಅವರು ಗರತಿ ರಾಜಕಾಣ ಮಾಡಿದ್ದು ತಮಗೆ ಗೊತ್ತಿದೆ.  ನಾವು ಮುಳ್ಳಿನಿಂದ ಮುಳ್ಳು ತೆಗೆಯುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.