ಲೋಕದರ್ಶನ ವರದಿ
ಬೆಳಗಾವಿ 06: ಜೈನ್ ಹೆರಿಟೇಜ್ ಶಾಲೆಯು 2019 ಜುಲೈ ಮೂರನೇ ಹಂತದ ಆಹಾರ ಧಾನ್ಯ ಆಂದೋಲನವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸರಕಾರದ ಪೌರಾಡಳಿತ ಹಾಗೂ ವಸತಿ ಗೌರವಾನ್ವಿತ ಸಚಿವ ಯು.ಟಿ ಖಾದರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ಆಹಾರ ಆಂದೋಲನ ಹಲವಾರು ಪ್ರಕಾರದ ಧಾನ್ಯಗಳನ್ನು ಸಂಗ್ರಹಿಸಿ, ಸಮಾಜದಲ್ಲಿ ಆಥರ್ಿಕವಾಗಿ ಹಿಂದುಳಿದವರಲ್ಲಿ ಹಂಚಿಕೆ ಮಾಡುವ ಓಟವಾಗಿದೆ. ಜೈನ್ ಸಮೂಹ ಸಂಸ್ಥೆಗಳು ಪ್ರತಿ ತಿಂಗಳು ನಡೆಯಿಸುವ ಚಟುವಟಿಕೆ ಇದಾಗಿದ್ದು, ವಿದ್ಯಾಥರ್ಿ, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳೆಲ್ಲ ಒಟ್ಟುಗೂಡಿ ಕೊಡಮಾಡುವ ಸಕಾರಾತ್ಮಕ ಹಾಗೂ ಗಟ್ಟಿ ಕಾರ್ಯಕ್ರಮ ಇದಾಗಿದೆ.
ಈ ತಿಂಗಳು ಬೆಳಗಾವಿಯ ಆರ್.ಸಿ. ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಗೆ ಆಹಾರ ಧಾನ್ಯ, ಸ್ಟೇಶನರಿ ಸಾಮಗ್ರಿ ಹಾಗೂ ವರ್ಗಗಳಿಗೆ ಪೀಠೋಪಕರಣಗಳನ್ನು ವಿತರಿಸಲಾಯಿತು. ಜೈನ್ ಹೇರಿಟೇಜ್ ನಿದರ್ೇಶಕಿ ಶ್ರದ್ಧಾ ಖಟವಟೆ ಈ ಸಮ್ಮೇಳನವನ್ನು ಉದ್ಘಾಟಿಸುತ್ತಾ, ಸಮಾಜಕ್ಕೆ ಸೇವೆ ಗೈಯುವುದರಿಂದ ಪ್ರತಿಯೋರ್ವನು ಒರ್ವ ಒಳ್ಳೆಯ ಮಾನವನಾಗಬಲ್ಲ ಎಂಬುದನ್ನು ಒತ್ತಿ ಹೇಳಿದರು. ಅವರು ಮುಂದುವರೆದು ಮಾತನಾಡುತ್ತ, ಆಥರ್ಿಕವಾಗಿ ಹಿಂದುಳಿದ ಸಮೂಹಗಳ ಒಳಿತಿಗಾಗಿ ಶಾಲೆ ನಡೆಯಿಸುತ್ತಿರುವ ಹಲವಾರು ಚಟುವಟಿಕೆಗಳ ಬಗ್ಗೆ ಒತ್ತಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯು.ಟಿ ಖಾದರ ತಮ್ಮ ಭಾಷಣದಲ್ಲಿ ಮಕ್ಕಳು ಅಳವಡಿಸಿಕೊಂಡಿರುವ ಮೌಲ್ಯಗಳನ್ನು ಶ್ಲಾಘಿಸಿ ಮಾತನಾಡಿದರು. ಜ್ಞಾನ ಸಂಪಾದನೆ ಬಹಳೇ ಮಹತ್ಮದ ವಿಷಯ ಆದರೆ ನೈತಿಕವಾಗಿ ಮೇಲೇಳುವುದರಿಂದ ಅದ್ಭುತ ವ್ಯಕ್ತಿಗಳಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು. ಜೈನ್ ಹೇರಿಟೇಜ್ ಶಾಲಾ ಮಕ್ಕಳು ಇಂಥ ಕಾರ್ಯಕ್ರಮಗಳನ್ನೂ ಜರುಗಿಸುತ್ತಾ ಸಮಾಜಕ್ಕೆ ಮರಳಿ ಕೊಡುವ ಪ್ರೋತ್ಸಾಹವನ್ನು ಕೊಂಡಾಡಿದರು.
ಜೆ.ಜಿ.ಐ. ಗೌರವಾನ್ವಿತ ಆಡಳಿತ ಮಂಡಳಿಯ ಸದಸ್ಯರುಗಳಾದಂಥ ರಾಧೇಶ್ಯಾಂ ಹೇಡಾ, ರಾಜಪುರೋಹಿತ. ಪ್ರೊ. ಉದಯಚಂದ್ರ, ಪ್ರೊ. ಆರ್.ಜಿ. ಧಾರವಾಡಕರ, ಶೇಷ ಪಾಟಣಕರ ಹಾಗೂ ಪ್ರಾಂಶುಪಾಲ ಡಾ. ಮನಜೀತ ಜೈನ್ ಉಪಸ್ಥಿತರಿದ್ದರು.