ಮೂರನೇ ಕಣ್ಣು ಚಲನಚಿತ್ರಕ್ಕೆ ಮುಹೂರ್ತ ನಿಗದಿ


ಲೋಕದರ್ಶನ ವರದಿ

ಕೊಪ್ಪಳ: ಜಿಲ್ಲೆಯಲ್ಲಿಂದು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿದರ್ೇಶಕರು, ಸಮಾಜದಲ್ಲಿ ಸಾಕಷ್ಟು ನೊವು ನಲಿವುಗಳನ್ನು ನಿತ್ಯ ಅನುಭವಿಸುವ ಮಂಗಳಮುಖಿಯರ ನೈಜ ಬದುಕಿನ ಚಿತ್ರಣವನ್ನು ಏಳೆ ಏಳೆಯಾಗಿ ಬಿಡಿಸಿ ಹೇಳುವುದು ಚಿತ್ರದ ಮುಖ್ಯ ವಿಷಯವಾಗಿದೆ ಎಂದು ತಿಳಿಸಿದರು. ಮಂಗಳಮುಖಿಯರ ನೈಜ ಜೀವನ  ಕುರಿತು ಬಿಂಬಿಸುವ ಚಲನಚಿತ್ರದ ಚಿತ್ರಿಕರಣಕ್ಕೆ ಆಗಷ್ಟ 10ರಂದು ಮೂಹರ್ತ ನಿಗದಿಯಾಗಿದೆ ಎಂದು ನಿದರ್ೇಶಕ ಕೆ.ಎಂ.ನಜೀರ ಹೇಳಿದರು.

ಈ ವಿಶಿಷ್ಟ ಚಲನಚಿತ್ರದ ಚಿತ್ರಿಕರಣವು ಕೊಪ್ಪಳ ನಗರದ ಗವಿಸಿದ್ಧೇಶ್ವರ ಮಠದ ಹಿಂಭಾಗದಲ್ಲಿರುವ ರುದ್ರಭೂಮಿಯಿಂದಲೇ ಆರಂಭವಾಗಲಿದೆ. ಮಂಗಳಮುಖಿಯರು ಎಂದರೇ ಎಲ್ಲರೂ ಮುಖ ಮುರಿಯುವ ಇಂದಿನ ಕಾಲದಲ್ಲಿ ಅವರ ಜೀವನ ಸ್ಥಿತಿ ಅರಿತು, ಸ್ವತಃ ಮಂಗಳಮುಖಿಯರನ್ನೆ ಮುಖ್ಯ ಪಾತ್ರದಲ್ಲಿ  ಬಳಸಿಕೊಳ್ಳಲಾಗುತ್ತಿದೆ. ಗಂಡು ಮತ್ತು ಹೆಣ್ಣು  ಲಿಂಗ ಎಂದು ಭಾವಿಸಿಕೊಂಡಿರುವ ಆಧುನಿಕ ಸಮಾಜದಲ್ಲಿ ಮೂರನೇ ಕಣ್ಣು ಮಂಗಳಮುಖಿಯರ ಜೀವನದ ಕರಾಳ ಬದುಕಿನ ಇತಿಹಾಸ ಹೊರ ಚೆಲ್ಲುವ ಕಥೆ ಹೇಣೆಯಲಾಗಿದೆ ಎಂದು ಹೇಳುವುದನ್ನು ಮಾತ್ರ ನಿದರ್ೇಶಕ ಮರೆಯಲಿಲ್ಲ. ಚಿತ್ರದಲ್ಲಿ ಎರಡು ಪೈಟ್ ಹಾಗೂ ನಾಲ್ಕು ಗೀತೆಯನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಚಿತ್ರಕ್ಕೆ 50 ಲಕ್ಷ ರೂಪಾಯಿಗಳನ್ನು ಅಂದಾಜಿಸಲಾಗಿದೆ.  ಕೊಪಣನಾಡಿನ (ಕೊಪ್ಪಳ) ಸುತ್ತಮುತ್ತಲಿನ ಪರ್ವತಗಳಿಂದ ಸೇರಿದ ರಮಣೀಯ ಪ್ರದೇಶಗಳನ್ನೇ ಮುಖ್ಯವಾಗಿ ಇಟ್ಟುಕೊಂಡು ಚಿತ್ರಿಕರಸಿಲಾಗುವುದು. ನಾಯಕ ನಟನಾಗಿ ವಿಜಯಪೂರದ ಉದಯೋನ್ಮುಖ ಕಲಾವಿದ ಸಚಿನ್, ಹಾಗೂ ಮೂಲತಃ ಮಂಗಳಮುಖಿಯಾಗಿರುವ ಗಂಗಾವತಿಯ ಮಂಗಳಮುಖಿ ಶ್ರಯಾನ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು. ಚಿತ್ರದ ನಿಮರ್ಾಪಕ ಅಬ್ದುಲ್ ಶಮದ್, ಕಲಾವಿದ ಮಂಜು ಯಶ್ ವರ್ಧನ್ ಸೇರಿದಂತೆ ಇತರೆ ಕಲಾವಿದರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.