ಜೋಹಾನ್ಸ್ ಬರ್ಗ್, ಡಿ.25- ಇಂಗ್ಲೆಂಡ್ ವಿರುದ್ಧ ಗುರುವಾರದಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ ಸಂಪೂರ್ಣ ಸಿದ್ಧವಾಗಿದ್ದು, ಹೊಸ ಉತ್ಸಾಹದೊಂದಿಗೆ ತಂಡ ಮೈದಾನಕ್ಕೆ ಇಳಿಯಲಿದೆ ಎಂದು ನಾಯಕ ಫಾಫ್ ಡುಪ್ಲೇಸಿಸ್ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಲ್ಲಿ ಎಲ್ಲವೂ ಹೊಸತನದಿಂದ ಕೂಡಿದ್ದು, ಗ್ರೇಮ್ ಸ್ಮಿತ್ ಅವರು ಬೋರ್ಡ್ ನಿರ್ದೇಶಕರು, ಮಾರ್ಕ್ ಬೌಚರ್ ಕೋಚ್ ಹಾಗೂ ಜಾಕ್ ಕಾಲಿಸ್ ಬ್ಯಾಟಿಂಗ್ ಸಲಹೆಗರಾರರಿಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ತಂಡದಲ್ಲಿ ಬದಲಾವಣೆ ಕಂಡು ಬಂದಿದ್ದು, ಹೊಸ ಗಾಳಿ ಬೀಸುತ್ತಿದೆ. ಕಳೆದ ಕೆಲವು ತಿಂಗಳು ಗಳಿಂದ ತಂಡವನ್ನು ಮುನ್ನಡೆಸಿದ್ದನ್ನು ಅರಿತಿದ್ದೇನೆ. ನಾನು ತಂಡದ ರಚನೆಯ ವಿಚಾರದಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂಬಾಲಿಸುತ್ತೇನೆ. ನಾವು ಆಡುವಾಗ ಜಸ್ಟಿನ್ ಲ್ಯಾಂಗರ್, ರಿಕ್ಕಿ ಪಾಂಟಿಂಗ್, ಸ್ಟೀವ್ ವಾ ತಂಡದಲ್ಲಿದ್ದರು. ಆದರೆ, ಈಗ ಈ ಆಟಗಾರರು ತಂಡದ ಡ್ರೆಸ್ಸಿಂಗ್ ರೂಮ್ ನಲ್ಲಿ ಕುಳಿತು ಯೋಜನೆಗಳನ್ನು ಹೆಣೆಯುತ್ತಿದ್ದಾರೆ” ಎಂದು ಫಾಫ್ ತಿಳಿಸಿದ್ದಾರೆ.
“ಒಳ್ಳೆಯ ತಂಡವನ್ನು ಕಟ್ಟಿ, ಮತ್ತೆ ನಂಬರ್ 1 ಸ್ಥಾನಕ್ಕೇ ಏರುವ ಆಸೆ ನಮ್ಮದು. ಆದರೆ, ಈ ದಾರಿ ಸುಲಭವಾಗಿಲ್ಲ. ನಾವು ಉತ್ತಮ ಕ್ರಿಕೆಟ್ ಆಡುವುದುನ್ನು ಆರಂಭಿಸಬೇಕಿದೆ. ಅಭ್ಯಾಸವನ್ನು ಉತ್ತಮ ರೀತಿಯಾಗಿ ಆರಂಭಿಸಿದ್ದೇವೆ” ಎಂದು ಹೇಳಿದ್ದಾರೆ.