ತಾಲೂಕನ್ನು ಬೆಂಗಳೂರ ಮಾದರಿ ಅಭಿವೃದ್ಧಿ ಪಡಿಸುವ ನನ್ನದಾಗಿದೆ.: ಸಚಿವ ಆರ್.ಶಂಕರ

ರಾಣೇಬೆನ್ನೂರು ಜೂ.26:  ನಗರ ಸೇರಿದಂತೆ ತಾಲೂಕಿನ ಪ್ರತಿ ಗ್ರಾಮವೂ ಬೆಂಗಳೂರ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕನಸು ನನ್ನದಾಗಿದೆ, ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕು, ಸಾಧ್ಯಾಗದಿದ್ದವರು ಇಲ್ಲಿಂದ ಹೋಗಬಹುದು ಎಂದು ಪೌರಾಡಳಿತ ಸಚಿವ ಆರ್.ಶಂಕರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ಬುಧವಾರ ಇಲ್ಲಿನ ತಾಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲಾನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕ್ಷೇತ್ರದ ಮತದಾರರಿಗೆ ಸಕರ್ಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳು ಮುಂದಾಗಬೇಕು, ಇದರಲ್ಲಿ ಯಾವುದೇ ಅವಕಾಶಕ್ಕೆ ಜಾಗವಿಲ್ಲ ಎಂದರು.

    ಈ ಹಿಂದಿನ ಯಾವುದೇ ಪ್ರಗತಿ ನನಗೆ ಬೇಡ, ಮುಂದೇನಾಗಬೇಕು, ಪ್ರತಿ ಇಲಾಖೆಗೆ ಬೇಕಾದ ಸೌಲಭ್ಯ ಹಾಗೂ ಆಗಬೇಕಾಗಿರುವ ಕಾರ್ಯಗಳ ಮತ್ತು ಬೇಕಾದ ಅನುದಾನ ಕುರಿತ ಮಾಹಿತಿ ನೀಡಿ.

 ಕ್ರಿಯಾಯೋಜನೆಯ ಪ್ರಸ್ತಾವನೆಯನ್ನು ಸಕರ್ಾರಕ್ಕೆ ಕಳುಹಿಸಿದ ಮಾಹಿತಿ ನೀಡಬೇಕು, ಬೇಜವಾಬ್ದಾರಿ ಕಂಡು ಬಂದಲ್ಲಿ ಸಹಿಸಿಕೊಳ್ಳಲಾಗುದು ಎಂದು ಗುಡುಗಿದರು.

    ಪಕ್ಕದಲ್ಲಿಯೇ ಆಸೀನರಾಗಿದ್ದ ತಹಶೀಲ್ದಾರ ಸಿ.ಎಸ್. ಕುಲಕಣರ್ಿ ಅವರ ಕಡೆ ತಿರುಗಿ ಏನ್ರೀ? ತಾಲೂಕಿನ ರೈತರು ಪಹಣಿ ಪತ್ರಿಕೆ ಪಡೆಯಲು ಇಡೀ ದಿವಸ ಸರತಿಯಲ್ಲಿ ಕಾದು ಪಡೆಯುವ ಪರಿಸ್ಥಿತಿ ನಿಮರ್ಾಣವಿದ್ದರೂ ಕಣ್ಣು ಮುಚ್ಚಿ ಕುಳುತ್ತಿದ್ದೀರಿ, ಇನ್ನೂ ಎರಡು ಕೌಂಟರ್ ಮಾಡಲು ಸಾಧ್ಯವಿಲ್ಲವೇ, ತಕ್ಷಣ ಮಾಡಬೇಕು ಎಂದು ಸೂಚಿಸಿದರು.

   ಬಳಿಕ ಪ್ರತಿ ಇಲಾಖೆಯ ಅಧಿಕಾರಿಗಳಿಂದ ಪ್ರಗತಿ ಪರಿಶೀಲಾನಾ ವರದಿಯ ಜೊತೆಗೆ ಇಲಾಖೆಯಲ್ಲಿ ಆಗದಿರುವ ಕಾಮಗಾರಿ, ಆಗದಿರಲು ಕಾರಣವೇನು, ಮುಂದೆ ಏನಾಗಬೇಕು ಎಂಬುದರ ಕುರಿತು ಪಟ್ಟಿ ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.    

       ಇಲ್ಲಿಯವರೆಗೆ ನಡೆದ ಪ್ರಗತಿ ಕುರಿತು ಮಾಹಿತಿಯನ್ನು ಲೋಕೋಪಯೋಗಿ, ಸಮಾಜ ಕಲ್ಯಾಣ, ಎಪಿಎಂಸಿ, ಹೆಸ್ಕಾಂ, ಶಿಕ್ಷಣ ಇಲಾಖೆ, ತೋಟಗಾರಿಕೆ, ಕೃಷಿ, ಪಶು ಸಂಗೋಪನಾ ಇಲಾಖೆ. ಕಂದಾಯ, ಮಕ್ಕಳ ಮತ್ತು ಮಹಿಳಾ, ಹಿಂದುಳಿದ ವರ್ಗ, ಶುದ್ಧ ಕುಡಿಯುವ ನೀರಿನ ಇಲಾಖೆ, ಜಿಪಂ ಉಪ ವಿಭಾಗ, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 

   ತಹಶೀಲ್ದಾರ ಸಿ.ಎಸ್. ಕುಲಕಣರ್ಿ, ಪೌರಾಯುಕ್ತ ಡಾ.ಮಹಾಚಿತೇಶ ಎನ್, ಶಿಕ್ಷಣಾಧಿಕಾರಿ ಶ್ರೀಧರ ಎನ್, ತಾಪಂ ಇಓ ಎಸ್.ಎಂ.ಕಾಂಬ್ಳೆ, ವ್ಯವಸ್ಥಾಪಕ ಬಸವರಾಜ ಶಿಡೇನೂರ, ನಿದರ್ೇಶಕ ಅಶೋಕ ನಾರಜ್ಜಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.