ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವುದೇ ದಸರಾ ಉತ್ಸವದ ಸಂಕೇತ
The symbol of the Dussehra festival is to preserve and develop cultural arts.
ಧಾರವಾಡ 29: ದಸರಾ ನಾಡಿನ ಸಂಸ್ಕೃತಿ ಬಿಂಬಿಸುವ ಹಬ್ಬ- ಪಾಲಿಕೆ ಸದಸ್ಯ, ಮಾಜಿ ಮಹಾಪೌರರಾದ ಈರೇಶ ಅಂಚಟಗೇರಿ.ನಾಡಿನ ನೆಲ, ಜಲ, ಭಾಷೆಗಳ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಮೆಲಕು ಹಾಕುವುದರ ಜತೆಗೆ ಉಳಿಸಿ ಬೆಳೆಸುವ ಕಾರ್ಯಕ್ರಮವೇ ದಸರಾ ಉತ್ಸವದ ಸಂಕೇತ. ಸಂಸ್ಕೃತಿಯನ್ನು ಬಿಂಬಿಸುವಂಥ ನಾಡಹಬ್ಬ ಕಾರ್ಯಕ್ರಮಗಳಲ್ಲಿ ಯುವಕ-ಯುವತಿಯರು ಹೆಚ್ಚಾಗಿ ಪಾಲ್ಗೊಳ್ಳಬೇಕು- ಎಂದು ಮಾಜಿ ಮಹಾಪೌರರು ಮತ್ತು ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ಹೇಳಿದರು.
ಅವರು ಕಲಾಶಕ್ತಿ ಫೌಂಡೇಷನ್, ಧಾರವಾಡ ಮತ್ತು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ ವತಿಯಿಂದ ಸಾಧನಕೇರಿಯ ಕ್ರಿಕೆಟ್ ಟರ್ಫನಲ್ಲಿ ನವರಾತ್ರಿ ಉತ್ಸವದ ನಿಮಿತ್ಯ ಹಮ್ಮಿಕೊಂಡ ದಾಂಡಿಯಾ ನೃತ್ಯ ತರಬೇತಿ ಶಿಬಿರದ ಸಮಾರೋಪ ಮತ್ತು ದಾಂಡಿಯಾ ಉತ್ಸವದ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿತ್ತಾ ಕರ್ನಾಟಕ ಕಲೆ-ಸಂಸ್ಕೃತಿಗಳ ನೆಲೆವೀಡು. ಜಾಗತೀಕರಣೋತ್ತರ ಸಂದರ್ಭದಲ್ಲೂ ಕನ್ನಡ ಸಂಸ್ಕೃತಿಯ ಹೆಮ್ಮೆ ಹಿರಿದಾಗಿದೆ. ಕನ್ನಡ ಸಾಹಿತ್ಯದಲ್ಲಿ ಕನ್ನ ಡಿಗರ ಸಜನಶೀಲ ಸಾಂಸ್ಕೃತಿಕ ಪ್ರತಿಭೆ ಕಾಣುತ್ತಿದ್ದೇವೆ. ಹಲವು ಶಿಷ್ಟ ಹಾಗೂ ಜನಪದ ಕಲೆಗಳು ಈ ನೆಲದ ಮಣ್ಣಿನಲ್ಲಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕ.ರಾ.ಸ.ನೌ. ಸಂಘದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಸೋಲಗಿ ಮಾತನಾಡಿ ದಸರಾ ಶಕ್ತಿ ದೇವತೆಗಳ ಹಬ್ಬ. ಜತೆಗೆ ನಾಡಿನ ಸಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸುವ ಹಬ್ಬ, ನವ ದುರ್ಗೆಯರನ್ನು ಪೂಜಿಸುವ ಮೂಲಕ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವ ಕೆಲಸ 9 ದಿನಗಳ ನಡೆಯುವ ದೇವತೆಯ ಆರಾಧನೆಯಿಂದ ಸಾಧ್ಯವಾಗುತ್ತದೆ. ನಾಡಿನ ಅದಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಕ್ಷೇತ್ರದ ಜನತೆಗೆ ಸುಖ-ಶಾಂತಿ ನೀಡಲಿ, ಹಾಗೂ ಧಾರವಾಡದಲ್ಲಿನ ಈ ದಾಂಡಿಯಾ ಉತ್ಸವ ಪ್ರತಿ ವರ್ಷ ಯಶಸ್ವಿಯಾಗಿ ನಡೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾಗಿ ಉಧ್ಯಮಿ ಪ್ರವೀಣ ಗುರಿಕಾರ, ಪಾಲಿಕೆ ಸದಸ್ಯ ಮಂಜುನಾಥ ಬಟ್ಟೆನ್ನವರ, ಇಂಜಿನಿಯರ ಸುನೀಲ ಬಾಗೇವಾಡಿ, ಸಮಾಜಸೇವಕ ಮಂಜುನಾಥ ಚೊಳ್ಳಪ್ಪನವರ, ಶ್ರೀಕಾಂತ ಕ್ಯಾತಪ್ಪನವರ, ಕಲಾಶಕ್ತಿ ಫೌಂಡೇಷನ್ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ಪಾಟೀಲ, ಪ್ರತಿಷ್ಠಾನದ ಅಧ್ಯಕ್ಷ ಮುಸ್ತಫಾ ಎಸ್ ಫರಾಸ್ ವೇದಿಕೆಯಲ್ಲಿ ಇದ್ದು ಮಾತನಾಡಿದರು.ಸಂಸ್ಥೆಯ ಸದಸ್ಯರಾದ ಪೂಜಾ ಪಾಟೀಲ ನಿರೂಪಿಸಿದರು.
ಕಾರ್ಯದರ್ಶಿ ಮಲ್ಲನಗೌಡ ಪಾಟೀಲ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತಾ ಪಾಟೀಲ ವಂದಿಸಿದರು.ನಂತರ ದಾಂಡಿಯಾ ನೃತ್ಯವನ್ನು ಶಿಬಿರಾರ್ಥಿಗಳು ಮತ್ತು ಕಲಾಶಕ್ತಿ ಫೌಂಡೇಷನ್ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.ಈ ಕಾರ್ಯಕ್ರಮದಲ್ಲಿ ಸುನಿಲ ಅರಳಿಕಟ್ಟಿ, ಕೃಷ್ಣಾ ಸಂಕೋಜಿ, ಶ್ರೀನಿವಾಸ ಇಂಚರ, ಸಂದೀಪ ಯಾತಗಿರಿ, ವೆಂಕಟೇಶ ಮನ್ನಿಕೇರಿ ಗೋಪಾಲ ಉಣಕಲ್, ಕಾರ್ತಿಕ, ಆಕಾಶ, ಶುಭಂ, ತುಷಾರ, ಋಷಭ ಹಾಗೂ ಪಾಲಕರು ಮತ್ತು ಶಿಬಿರಾರ್ಥಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 