ಸರ್ವಶ್ರೇಷ್ಠ ಪ್ರಾಣಿ ಎಂದರೆ ಮನುಷ್ಯ: ಸೌರಭಸೇನ ಭಟ್ಟಾರಕ

ಲೋಕದರ್ಶನ ವರದಿ

ಶೇಡಬಾಳ 30:  ಚಾಂದಾಮೋಟಾದಲ್ಲಿ ನಿಮರ್ಾಣಗೊಂಡಿರುವ ಆಚಾರ್ಯ ವಿದ್ಯಾಸಾಗರ ವೃದ್ಧಾಶ್ರಮದ ಲೋಕಾರ್ಪನಾ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು. ಈ ಸುಸಂದರ್ಭದಲ್ಲಿ ಪ.ಪೂ.ಧರ್ಮಯೋಗಿ ಯೋಗಭೂಷಣ ಬ್ರಹ್ಮಚಾರಿಕಾರೆಯಿಶ ಸಾನಿಧ್ಯದಲ್ಲಿ ಪ.ಪೂ.ಸ್ವಸ್ತಿ ಸೌರಭಸೇನ ಭಟ್ಟಾರಕರ ಸೇವಾ ಮನೋಭಾವವನ್ನು ಪರಿಗಣಿಸಿ "ಚೈತನ್ಯ ಸೇವಾ ರತ್ನ"ಗೌರವವನ್ನ ನೀಡಿ ಸನ್ಮಾನಿಸಿದ್ದಾರೆ.

  ಪ.ಪೂ.ಸ್ವಸ್ತಿ ಸೌರಭಸೇನ ಭಟ್ಟಾರಕ ಮಹಾರಾಜರು ಕಾಗವಾಡ ತಾಲೂಕಿನ ಜುಗೂಳ ಗ್ರಾಮದವರಾಗಿದ್ದು, ಬಾಲ್ಯದಲ್ಲಿಯೇ ತಮ್ಮ ಶಿಕ್ಷಣವನ್ನು ಪಡೆದು  ಲೋಕ ಕಲ್ಯಾಣಕ್ಕಾಗಿ ಕಿರಿಯ ವಯಸ್ಸಿನಲ್ಲಿಯೇ ಜೈನ ಧರ್ಮದ ತತ್ವ ಸಿದ್ಧಾಂತ ಹಾಗೂ ಅಹಿಂಸಾ ಪರಮೋ ಧರ್ಮದ ಬಗ್ಗೆ ಜಾಗೃತಿ ಮೂಡಿಸುವಗೋಸ್ಕರ ಲೋಕಸಂಚಾರ ಮಾಡುತ್ತಿದ್ದು, ಅವರ ಸೇವಾ ಕಾರ್ಯವನ್ನು ಕಂಡು ''ಚೈತನ್ಯ ಸೇವಾ ರತ್ನ ಪುರಸ್ಕಾರ" ನೀಡಿ ಗೌರವಿಸಿದ್ದಾರೆ.

    ಪ.ಪೂ.ಸ್ವಸ್ತಿ ಸೌರಭಸೇನ ಭಟ್ಟಾರಕರು ''ಚೈತನ್ಯ ಸೇವಾ ರತ್ನ ಪುರಸ್ಕಾರ" ಸ್ವೀಕರಿಸಿ ಮಾತನಾಡುತ್ತ ಮನುಷ್ಯನ ಜೀವನ ಪ್ರಾಪ್ತವಾಗುವುದೇ ಅಹಿಂಸಾ ಮಾರ್ಗದ ಕಲ್ಯಾಣಕ್ಕಾಗಿ. ಪ್ರಪಂಚದಲ್ಲಿ ವಿಭಿನ್ನ ರೀತಿಯ ಪ್ರಾಣಿಗಳಿವೆ. ಅದರಲ್ಲಿ ಸರ್ವಶ್ರೇಷ್ಠ ಪ್ರಾಣಿ ಎಂದರೆ ಮನುಷ್ಯ. ಪ್ರತಿಯೊಬ್ಬ ವ್ಯಕ್ತಿ ಅಹಿಂಸಾ ಮಾರ್ಗದಲ್ಲಿ ನಡೆದಾಗ ವಿಕಾಸವಾಗುತ್ತದೆ. ಜೀವನದಲ್ಲಿ ಏಕಾಗ್ರತೆ ಇದ್ದಾಗ ಆತ್ಮ ಶುಜಜಿಆವಾಗುತ್ತದೆ. ಧ್ಯಾನದಿಂದಲೂ ಜೀವನ ವಿಕಾಸ ಹೊಂದುತ್ತದೆ. ಎಂದು ನುಡಿದರು. ವಂಚನೆ,ಮಧ್ಯಸೇವನೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ. ಈ ಕಾರಣದಿಂದಲೇ ನಾಧಿಶಮುಕ್ತರಾಗಬೇಕು. ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾರೆ ಎನ್ನುತ್ತೇವೆ. ಈ ಭೂಮಿಯೇ ಸ್ವರ್ಗ. ಇಲ್ಲಿರುವಷ್ಟು ದಿನ ಅಹಿಂಸಾವಾದಿಗಳಾಗಿ, ನಶಾ ಮುಕ್ತರಾಗಿ ಸಮಾಜದ ಏಳ್ಗಿಗೆಗೆ ಶ್ರಮಿಸಬೇಕೆಂದರು.

  ಈ ವೇಳೆ ಧರ್ಮಯೋಗಿ ಯೋಗಭೂಷಣ ಮಹಾರಾಜರು, ಬ್ರಹ್ಮಚಾರಿ ರಾಜೇಶ ಬೈಯ್ಯಾ,  ಬ್ರಹ್ಮಚಾರಿ ತರುಣ ಬೈಯ್ಯಾ, ಬ್ರಹ್ಮಚಾರಿ ಕರುಣಾ ಸಾಗರ ಬೈಯ್ಯಾ, ಸೇರಿದಂತೆ ಅನೇಕರು ಇದ್ದರು.