ಉಪನೋಂದಣಿ ಕಚೇರಿಯಲ್ಲಿ ಮತ್ತೆ ದಾಖಲೆಗಳ ಕಳುವು

ಲೋಕದರ್ಶನ ವರದಿ

ಬೆಳಗಾವಿ, 22: ನಗರದ ಉಪನೋಂದಣಿ ಕಚೇರಿಯಲ್ಲಿ ಇದ್ದಕ್ಕಿದ್ದಂತೆ ಪ್ರಮುಖ ದಾಖಲಾತಿಗಳು ಕಳುವಾಗಿದ್ದು ನೋಂದಣಿ ಕಾರ್ಯ ಮಾಡುತ್ತಿದ್ದ 9 ಜನ ಅಧಿಕಾರಿಗಳನ್ನು ಪೊಲೀಸರು ಮೇಲ್ವಿಚಾರಣೆ ನಡೆಸಿದ್ದಾರೆ.

ನಗರದ ಉಪನೋಂದಣಿ ಮತ್ತು ವಿವಾಹಗಳ ನೋಂದಣಿ ಕಚೇರಿಯಲ್ಲಿ ಸದಾ ಒಂದಲ್ಲಾ ಒಂದು ದೋಷಗಳು ಸಂಭವಿಸುತ್ತಿವೆ. ಜನರು ಈ ಕಚೇರಿಯ ತೊಂದರೆಗಳಿಗೆ ಬೆಸತ್ತಿದ್ದಾರೆ. ಕಚೇರಿಯಲ್ಲಿರುವ ಹಲವು ಪ್ರಮುಖ ದಾಖಲಾತಿಗಳು ಕಳೆದಿವೆ. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ತಾಂತ್ರಿಕ ದೋಷದಿಂದ ನೋಂದಣಿ ಕಾರ್ಯ ನಿಲ್ಲಿಸಲಾಗಿದೆ. ಎಂದು ಎರಡು ದಿನಗಳಿಂದ ಕಚೇರಿಯ ಎದುರು ಬೋಟರ್್ ಹಾಕಿದ್ದಾರೆ. ಕಳುವಾದ ದಾಖಲಾತಿಗಳು ಸಿ.ಎಲ್ ಡೀಡ್ ಮತ್ತು ಲೀಜ್ ಡೀಡ್ ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. 

ಗುರುವಾರ  ಮಧ್ಯಾಹ್ನ ಕೆಲಸದ ನಿಮಿತ್ಯ ಕಚೇರಿಯಲ್ಲಿ ಜನ ದಟ್ಟನೆ ಹೆಚ್ಚಾಗಿದ್ದ ಸಂದರ್ಭದಲ್ಲಿ ದಾಖಲೆಗಳು ಕಾಣೆಯಾಗಿವೆ ಎನ್ನಲಾಗಿದೆ. ಕಾರ್ಯ ನಿರ್ವಹಿಸುತ್ತಿದ್ದ 9 ಜನ ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿಖರವಾಗಿ ಯಾವ ದಾಖಲೆಗಳು ಕಳುವಾಗಿವೆ ಮತ್ತು ಯಾರು ಕಳುವು ಮಾಡಿದ್ದು ಎಂದು ತಿಳಿದು ಬಂದಿಲ್ಲ. 

ಕಳೆದ 2 ತಿಂಗಳ ಹಿಂದೆ ದಾಖಲಾತಿಗಳು ಕಳೆದಿರುವ ಪ್ರಕರಣ ನಡೆದಿತ್ತು. ಬೆಳಗಾವಿಯ ಒಂದು ಆಸ್ತಿಯನ್ನು ಪುಣೆ ಮೂಲದವರಿಗೆ ಮಾರಾಟ ಮಾಡುತ್ತಿದ್ದರು. ಎಲ್ಲ ಪ್ರಕ್ರೀಯೆ ಪೂರ್ಣ ಗೊಂಡು ವರಿಷ್ಠ ಅಧಿಕಾರಿಯ ಹಸ್ತಾಂತರಕ್ಕೆ ಇರಿಸಲಾಗಿತ್ತು. ಮಧ್ಯಾಹ್ನ ಉಟದ ವೇಳೆ ಈ ಕಾಗದ ಪತ್ರಗಳು ಕಳುವಾಗಿದ್ದವು.

ನಿನ್ನೆ ಬೆಳಿಗ್ಗೆ ಕಚೇರಿ ಎದುರು ದಟ್ಟನೆ ಹೆಚ್ಚಾಗಿ ಜನರು ಕಚೇರಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಆರು ತಿಂಗಳ ಒಳಗಾಗಿ ಎರಡನೆಬಾರಿ ಇಂತಹ ಪ್ರಕರಣ ಸಂಭವಿಸಿದ್ದು ಕಚೇರಿ ಮೇಲಾಧಿಕಾರಿಗಳೆ ಮುಖ್ಯ ಹೋಣೆಗಾರು. ಸಾರ್ವಜನೀಕರ ಕೋಟ್ಯಾಂತರ ಆಸ್ತಿಯ ದಾಖಲಾತಿಗಳು ಕಳೆದಿವೆ. ಈ ಸಮಸ್ಯೆಯನ್ನು ಯಾರು ನಿವಾರಿಸುತ್ತಾರೆ. ಮುಂಜಾಗೃತ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದಲೆ ದಾಖಲಾತಿಗಳು ಕಳುವಾಗಿವೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು. 

   ಕಚೇರಿ ಎದುರಿಗೆ ಜನದಟ್ಟನೆ ಹೆಚ್ಚುತ್ತಿದ್ದಂತೆ ಮಾಕರ್ೆಟ್ ಪೊಲೀಸ್ ಠಾಣೆಯ ಎ.ಎಸ್.ಐ ಬೇಟಿ ನೀಡಿದರು. ಹಿರಿಯನೋಂದಣಿ ಅಧಿಕಾರಿ ಗಿರಿಶ್ಚಂದ್ರ ಹಿರೇಮಠ ಅವರಿಗೆ ಸಾರ್ವಜನೀಕರಿಗೆ ತೊಂದರೆಯಾಗದಂತೆ ನೋದಣಿ ಕಾರ್ಯ ಪ್ರಾರಂಭಿಸಲು ಸೂಚಿಸಿದರು. ನಂತರ ನೋದಣಿ ಕಾರ್ಯವನ್ನು ಪ್ರಾರಂಭಿಸಿಲಾಯಿತು.