ಹೋರಾಟ ಯತ್ನಾಳರ ಉಚ್ಚಾಟನೆ ವಿರುದ್ಧ ಯಾರ ವಿರುದ್ಧವೂ ಅಲ್ಲ: ಸುರೇಶ ಹಜೇರಿ

The struggle is against the expulsion of Yatnal, not against anyone: Suresh Hajeri

ತಾಳಿಕೋಟಿ 08: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಯತ್ನಾಳರ ಉಚ್ಚಾಟನೆ ವಿರೋಧಿಸಿ ಹಾಗೂ ಅವರನ್ನು ಮತ್ತೆ ಪಕ್ಷಕ್ಕೆ ಸೇರೆ​‍್ಡಗೊಳಿಸಬೇಕು ಎಂಬುದಕ್ಕಾಗಿ ಹೊರತು ಯಾರ ವಿರುದ್ಧವೂ ಅಲ್ಲ ಎಂದು ಪುರಸಭೆ ಮಾಜಿ ಸದಸ್ಯ ಮುಖಂಡ ಸುರೇಶ ಹಜೇರಿ ಹೇಳಿದರು.  

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷದ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಪಕ್ಷಕ್ಕೆ ಸೇರದ, ಮತಕ್ಷೇತ್ರದವರೂ ಅಲ್ಲದ ಕೆಲವರು ನಮ್ಮ ಪಕ್ಷ ಹಾಗೂ ಮುಖಂಡರ ಕುರಿತು ಮಾತನಾಡಿ ನಾವು ಬಿಜೆಪಿ ಪಕ್ಷದವರಲ್ಲ ಕಾಂಗ್ರೆಸ್ಸಿನ ಏಜೆಂಟರು ಎಂದು ಹೇಳಿದ್ದಾರೆ ಹೀಗೆ ಹೇಳುವವರು ಯಾವ ಪಕ್ಷದವರು ಎಂದು ತಿಳಿಸಬೇಕು, ಬಿಜೆಪಿಗೂ ಅವರಿಗೂ ಸಂಬಂಧ ಏನು, ತಾವಿರುವ ಹಳ್ಳಿಗಳಲ್ಲಿ ಒಂದು ಪಕ್ಷ ಈ ಕ್ಷೇತ್ರಕ್ಕೆ ಬಂದಾಗ ಇನ್ನೊಂದು ಪಕ್ಷದವರಾಗಿ ಮಾತನಾಡುವ ಇವರು ಮೊದಲು ಬಿಜೆಪಿಗೆ ಸೇರೆ​‍್ಡಯಾಗಬೇಕು ಎಂದ ಅವರು ನಮ್ಮ ಹಕ್ಕಿಗಾಗಿ ಹೋರಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ ಇದನ್ನು ಬಳಸಿಕೊಂಡು ನಾವು ನಮ್ಮ ನಾಯಕನಿಗಾದ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇವೆ ಈ ಹೋರಾಟ ರಾಜ್ಯಾದ್ಯಂತ ನಡೆಯುತ್ತಿದೆ ಎಂದರು. ಮುಖಂಡ ಮಂಜುನಾಥ ಶೆಟ್ಟಿ ಮಾತನಾಡಿ ಕಳೆದ 30 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಮುಖಂಡರು ಕೊಟ್ಟ ಎಲ್ಲಾ ಕಾರ್ಯಕ್ರಮಗಳನ್ನು ಹಾಗೂ ಆದೇಶಗಳನ್ನು ಅನುಷ್ಠಾನಕ್ಕೆ ತರಲು ಶಕ್ತಿಮೀರಿ ಪ್ರಯತ್ನಿಸಿದ್ದೇವೆ, ನಮ್ಮ ಪಕ್ಷ ನಿಷ್ಠೆ ಕುರಿತು ಮಾತನಾಡುವವರು ಕಳೆದ 5 ವರ್ಷದಲ್ಲಿ ಪಕ್ಷಕ್ಕಾಗಿ ಏನು ಮಾಡಿದ್ದಾರೆ ಎಂಬುದು ತಿಳಿಸಬೇಕು. ನಮ್ಮ ನಿಷ್ಠೆ ಹಿಂದುತ್ವ ಹಾಗೂ ಪಕ್ಷಕ್ಕಾಗಿದೆ ಆದರೆ ವ್ಯಕ್ತಿಗಾಗಿ ಅಲ್ಲ ಎಂದರು. ಮುಖಂಡ ರಾಮು ಜಗತಾಪ ಮಾತನಾಡಿ ಈ ಕ್ಷೇತ್ರದ ಮಾಜಿ ಶಾಸಕರು ಯತ್ನಾಳರ ಉಚ್ಚಾಟನೆ ಕುರಿತು ಕೆಟ್ಟದಾಗಿ ಮಾತನಾಡಿದಿರುವುದರಿಂದಲೇ ಸಮಸ್ಯೆ ಸೃಷ್ಟಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತು, ಇದನ್ನು ಮರೆ ಮಾಚಲು ನಮ್ಮ ಪಕ್ಷದ ನಾಯಕರಾದ ಪ್ರಭುಗೌಡ ದೇಸಾಯಿ ಅವರನ್ನು ಗುರಿಯಾಗಿರಿಸಿ ಇಲ್ಲಸಲ್ಲದ ಮಾತುಗಳನ್ನಾಡುವುದು ನಿಲ್ಲಿಸಬೇಕು, ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಅವರು ಕಾರಣ ಅಲ್ಲ, ಎಲ್ಲ ಹಿಂದುಗಳು ಹಾಗೂ ಯತ್ನಾಳರ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಈ ಹೋರಾಟವನ್ನು ಮಾಡುತ್ತಿದ್ದಾರೆ. ಇನ್ನೂ ಅವರ ಸಂಸ್ಕಾರ, ವ್ಯಕ್ತಿತ್ವ ಇಡೀ ಜಿಲ್ಲೆಯ ಜನರಿಗೆ ಗೊತ್ತು. ಅವರೆಂದೂ ಜಾತೀಯತೆ ಮಾಡಿದವರಲ್ಲ, ಎಲ್ಲ ಜಾತಿ ಜನಾಂಗದವರು ಅವರನ್ನು ಪ್ರೀತಿಸುತ್ತಾರೆ, 1998 ರಲ್ಲಿ ಅಖಂಡ ವಿಜಾಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ತಾಲೂಕು ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ಏಕೈಕ ಪಕ್ಷದ ಸದಸ್ಯರಾಗಿದ್ದವರು, ಮುಂದೆ ಜಿಪಂ ಸದಸ್ಯರಾಗಿಯೂ ಆಯ್ಕೆಯಾಗಿದ್ದವರು ಇಂಥವರನ್ನು ನೀವು ಕಾಂಗ್ರೆಸ್ ನ ಏಜೆಂಟ್ ಅಂತ ಹೇಳುವುದು ಎಷ್ಟು ಸರಿ, ಹಿಂದೆ ಯತ್ನಾಳರು ಜೆಡಿಎಸ್ ಗೆ ಹೋದಾಗ ಅವರು ಆ ಪಕ್ಷಕ್ಕೆ ಹೋಗಲಿಲ್ಲ ಬಿಜೆಪಿಯಲ್ಲಿಯೇ ಇದ್ದರು ಇದು ನಿಮಗೆ ಗೊತ್ತಿರಲಿ ಎಂದರು.  

ಪಂಚಮಸಾಲಿ ಸಮಾಜದ ಮುಖಂಡರಾದ ಮಹಾಂತೇಶ ಮುರಾಳ, ನಾಗರಾಜ್ ಬಳಿಗಾರ ಮಾತನಾಡಿ ಯತ್ನಾಳರು ನಮ್ಮ ಸಮಾಜಕ್ಕೆ ಸೇರಿದವರು, ಅವರ ಉಚ್ಚಾಟನೆ ವಿರುದ್ದ ಹೋರಾಡಲು ನಮ್ಮ ಜಗದ್ಗುರುಗಳ ಆದೇಶವಿದೆ ಅದನ್ನು ನಾವು ಪಾಲಿಸಿ ಪಟ್ಟಣದ ಎಲ್ಲ ಸಮಾಜದವರನ್ನು ತೆಗೆದುಕೊಂಡು ಪ್ರತಿಭಟನೆಯನ್ನು ಮಾಡಿದ್ದೇವೆ ಅದು ಯಾವ ವ್ಯಕ್ತಿಯ ವಿರುದ್ಧವೂ ಆಗಿರ್ಲಿಲ್ಲ ಏಪ್ರಿಲ್ 7 ರಂದು ಮುದ್ದೇಬಿಹಾಳ ಪಟ್ಟಣದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದೆ ಇದರಲ್ಲಿ ನಾವೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದೇವೆ ಎಂದರು.  

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡ ಶಶಿಧರ ಡಿಸಲೆ, ಸಂತೋಷ ಹಜೇರಿ, ಪ್ರಭು ಬೆಳೆಭಾವಿ, ಅಶೋಕ ಚಿನಗುಡಿ, ಮುರುಗೇಶ ಕೋರಿ, ಗುರುಸಂಗಪ್ಪ ಕಶಟ್ಟಿ, ಲಂಕೇಶ್ ಪಾಟೀಲ, ನಾಗಪ್ಪ ಗೊಟಖಂಡಕಿ, ಭೀಮಣ್ಣ ಸುಳೇಭಾವಿ, ಲಂಕೇಶ್ ಪಾಟೀಲ, ಚಂದ್ರಶೇಖರ್ ಗೆಜ್ಜಿ, ಕಾಶಿನಾಥ ಪಾಟೀಲ, ಸಂಗನಗೌಡ ಪಾಟೀಲ, ಪ್ರಮೋದ ಕೋರಿ, ಶಶಿಕಾಂತ ದೇಶಪಾಂಡೆ ಇದ್ದರು.