ಭ್ರಷ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಟ ನಿರಂತರ: ಪೂಜಾರಿ

ಬೆಳಗಾವಿ : ಇತ್ತಿಚೇಗೆ ಜರುಗಿದ ಗೋಕಾಕ ವಿಧಾನಸಭೆ ಉಪಚುನಾವಣೆಯಲ್ಲಿ ಸೋಲು ಕಂಡಿದ್ದು, ಮತದಾರರ ತೀರ್ಪನ್ನು ಗೌರವಿಸಿಸುವೆ, ಆದರೆ ಗೋಕಾಕದಲ್ಲಿರುವ ಸವರ್ಾಧಿಕಾರಿ ಮನೋಭಾವನೆಯ ಭ್ರಷ್ಟ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ವಿರುದ್ಧದ ತಮ್ಮ ಹೋರಾಟ ನಿರಂತರ ಇರುತ್ತದೆ ಎಂದು ಜೆಡಿಎಸ್ನ ಪರಾಜೀತ ಅಭ್ಯಥರ್ಿ ಅಶೋಕ ಪೂಜಾರಿ ಇಂದಿಲ್ಲಿ ಹೇಳಿದರು.

ಗುರುವಾರ ದಿನದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗೋಕಾಕದಲ್ಲಿ ಒಂದು ಕುಟುಂಬವು ರಾಜಕೀಯ ವ್ಯವಸ್ಥೆ ಬೇರೆಕಡೆಗೆ ಹೋಗಬಾರದೆಂಬ ವ್ಯವಸ್ಥಿತಿ ರಾಜಕೀಯ ತಂತ್ರಗಾರಿಕೆಯಿಂದ ಹಿಡಿತ ಸಾಧಿಸಿ, ಕಾಂಗ್ರೇಸ್ ಮತ್ತು ಬಿ.ಜೆ.ಪಿ. ಎರಡು ಪಕ್ಷಗಳು ತಮ್ಮ ಪರವಾಗಿ ಇರುವಂತೆ ಮಾಡುವ ಮೂಲಕ ಸಹೋದರರು ಎರಡು ಪಕ್ಷಗಳ ಅಭ್ಯಥರ್ಿಗಳಾಗಿ ಹಣದ ಹೊಳೆ ಹರಿಸಿದ್ದಾರೆ. ತಮ್ಮ ಸೋಲು ಮೌಲ್ಯಯುತ ರಾಜಕಾರಣ ಮತ್ತು ಚುನಾವಣಾ ಪ್ರಕ್ರಿಯೆಯಿಂದ ಸೋಲಾಗಿದ್ದರೆ ನಾನು ಎಂದೋ ಚುನಾವಣಾ ಕಣದಿಂದಲೇ ದೂರ ಸರಿಯುತ್ತಿದ್ದೆ ಎಂದು ತಿಳಿಸಿದ ಅವರು ತಿಳಿಸಿದರು. ಅಲ್ಲದೇ ಗೋಕಾಕ ಕ್ಷೇತ್ರದಲ್ಲಿನ ಅನೇಕ ಗ್ರಾಮಗಳಲ್ಲಿ ತಮ್ಮ ಪರವಾಗಿ ಹೆಚ್ಚಿನ ಮತದಾರರು ಮತ ಚಲಾಯಿಸಿದ್ದರೂ ಸಹ ಅಲ್ಲಿ ನನ್ನ ಪರವಾಗಿ ಮತಗಳೆ ಇಲ್ಲದಂತಾಗಿರುವದು ಇ.ವ್ಹಿ.ಎಮ್. ವ್ಯವಸ್ಥೆಯನ್ನೇ ಸಂಶಯ ದೃಷ್ಠಿಯಿಂದ ನೋಡುವಂತಾಗಿದೆ ಎಂದು ಅವರು ನುಡಿದರು. 

ಕೇಂದ್ರವು ರಾಜ್ಯವನ್ನು ನಿರ್ಲಕ್ಷ ಮಾಡುತ್ತಿದೆ. ಉತ್ತರ ಕನರ್ಾಟಕದ ಹೆಚ್ಚಿನ ಭಾಗವು ಪ್ರವಾಹಕ್ಕೆ ಸಿಲುಕಿ ಸುಮಾರು 50 ಸಾವಿರ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿ ಕೇಂದ್ರ ಸರಕಾರದಿಂದ ಮುಖ್ಯಮಂತ್ರಿಗಳು 38 ಸಾವಿರ ಕೋಟಿ ರೂಪಾಯಿಗಳ ಅನುಧಾನ ರೂಪದ ಸಹಾಯಧನ ಕೋರಿದ್ದರೂ ಸಹ ಇಲ್ಲಿಯ ವರೆಗೆ ಕೇಂದ್ರ ಸರಕಾರ ಕೇವಲ ಅಂದಾಜು 1869.20 ಕೋಟಿ ರೂಪಾಯಿಗಳಷ್ಟು ಮಾತ್ರ ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ. ಸುಮಾರು ವರ್ಷಗಳ ಮಹಾದಾಯಿ ಮತ್ತು ಕಳಸಾ- ಬಂಡೂರ ನಾಲಾ ಹೋರಾಟದ ಫಲಶುೃತಿಯೂ ಇದೇ ಆಗಿದ್ದು, ಕೇಂದ್ರ ಸರಕಾರ ಕನರ್ಾಟಕ ರಾಜ್ಯದ ಬೇಡಿಕೆಯ ಹಿತಾಸಕ್ತಿಗೆ ಪೂರಕವಾದ ಸ್ಪಂಧನೆ ಎಂದೂ ನೀಡಿಲ್ಲ ಎಂದು ದೂರಿದರು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರಾದೇಶಿಕ ಪಕ್ಷಗಳ ಆಡಳಿತವಿರುವ ಅನೇಕ ರಾಜ್ಯಗಳು ಕನರ್ಾಟಕ ರಾಜ್ಯದಂತೆಯೇ ಎದುರಿಸಿರುವ ಅನೇಕ ವಿಶಿಷ್ಟ ಸಂದರ್ಭಗಳಲ್ಲಿ ನಿರೀಕ್ಷಿತ ಹೆಚ್ಚಿನ ಪ್ರಮಾಣದ ಅನುಧಾನದ ಸಹಾಯಧನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿವೆ. ಕೇಂದ್ರ ಸರಕಾರಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಾದೇಶಿಕ ಪಕ್ಷಗಳ ಸರಕಾರಗಳನ್ನು ಒಲೈಸುತ್ತಿರುವದು ಸಾಮಾನ್ಯವಾಗಿದ್ದು, ಇದೇ ಕಾರಣದಿಂದ ಮುಂದಿನ ದಿನಗಳಲ್ಲಿ ರಾಜ್ಯದ ಸಂಘಟಿತ ಜೆಡಿಎಸ್ ಪಕ್ಷವನ್ನು ಬೇರುಮಟ್ಟದಿಂದ ಸಭಲೀಕರಣಗೊಳಿಸುವದು ಜಿಲ್ಲೆ ಮತ್ತು ಉತ್ತರ ಕನರ್ಾಟಕದಲ್ಲಿ ಇದಕ್ಕೆ ಪೂರಕವಾದ ಕಾರ್ಯಕ್ಕೆ ತಾವು ಇಂದಿನಿಂದಲೇ ಕಾರ್ಯಪ್ರವೃತ್ತರಾಗುವುದಾಗಿ ಸ್ಪಷ್ಠಪಡಿಸಿದರು.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸುರೇಶ ಮರಲಿಂಗನ್ನವರ, ಸುಭಾನಿ ಹವಾಲ್ದಾರ, ಕಾಡಪ್ಪಾ ಪಾಟೀಲ, ಬಿ.ಸಿ. ರಾಮಾಪೂರ, ಲಕ್ಷ್ಮಣ ಕರಮುಶಿ, ದೀಪಕ ರಾಯನ್ನವರ, ಸಿದ್ದು ಶಿರಸಂಗಿ, ಮುತ್ತೆಪ್ಪ ಕಾಗಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.